
ಖಾನಾಪುರ:
ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪವಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 5-6 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ಇನ್ನೂ ಕೆಲವರಿಗೆ ಘಾಯವನ್ನುಂಟು ಮಾಡಿದೆ. ಇದನ್ನು ಅರಿತ ಜಿವಿಆರ್ ಕಂಪನಿಯವರು ಕಳೆದ 4-5 ವರ್ಷಗಳ ಹಿಂದೆ ಈ ಶತಮಾನದಷ್ಟು ಹಳೆಯದಾದ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆಯ ಕಾರ್ಯ ಆರಂಭಿಸಿತ್ತು.
ಇದನ್ನು ಗಮನಿಸಿದ ನಿತ್ಯ ಇಲ್ಲಿಂದ ಪ್ರಯಾಣಿಸುವ ಜನರು ಇನ್ನೆನು ಹೊಸ ಸೇತುವೆ ನಿರ್ಮಾಣ ಆಗಿ ಅವಘಡಗಳು ಆಗುವುದು ತಪ್ಪುತ್ತವೆ ಎಂದು ಜನ ಊಹಿಸಿದ್ದರು. ಆದೆ ಕನಸ್ಸು ಹೂಸಿಗೊಳಸಿದ ಗುತ್ತಿಗೆದಾರರು “ಭಾರವಾಯಿತು ಟೆಂಡರ್” ಎಂಬ ದರಿದ್ರ ದೆವ್ವ ಅಂಟಿಸಿಕೋಂಡು ಇನ್ನೂವರೆಗೆ ಸೇತುವೆ ಕೆಲಸ ಪೂರ್ಣಗೊಳಿಸದೆ, ಹದಗಟ್ಟಿರುವ ರಸ್ತೆ ದುರಸ್ತಿ ಮಾಡದೆ ಹಾಗೂ ಹಳೆಯ ಸೇತುವೆಗೆ ತಡೆಗೊಡೆ ನಿರ್ಮಿಸದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅವಘಡಗಳು ಸಂಭವಿಸುವ ಹಾಗೇ ಆಗಿದೆ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾದರೇ ಮುಗಿತು ಜನಸಾಮಾನ್ಯರ ಪರಿಸ್ಥಿತಿ ಹೇಳತಿರದು, ಏಕೆಂದರೆ ಸೇತುವೆಯ 100ಮೀಟರ್ ಸುತ್ತಮುತ್ತಲೂ ತೆಗ್ಗುಗುಂಡಿಗಳು ನೀರು ತುಂಬಿಕೊಂಡಿರುತ್ತೆವೆ. ಈಗಾಗಲೇ ಕಳೆದ 4-5ವರ್ಷಗಳಿಂದ ಮಳೆಗಾಲದಲ್ಲಿ ವಾಹನ ಸವಾರರು ಸಂಚರಿಸುವಾಗ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದು ತೆಗುಗುಂಡಿಯೋ ಅಥವಾ ಸಮತಟ್ಟಾದ ರಸ್ತೆಯೋ ಎಂಬ ಭ್ರಮೆಯಲ್ಲಿ ಮುಂದಕ್ಕೆ ಸಾಗುವಾಗ ತೆಗ್ಗುಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಈ ಹಳೆಯ ಸೇತುವೆಯೇ ಮುಖಾಂತರವೆ ನಿತ್ಯ ಸಂಚರಿಸುವ ಧಾರವಾಡ, ಅಳ್ನಾವರ, ಹಳಿಯಾಳ, ಬೆಳಗಾವಿ ಹಾಗೂ ಗೋವಾ ಕ್ಕೆ ಹೋಗುವ ಪ್ರಯಾಣಿಕರು ಜೀವ ಮುಷ್ಟಿಯಲ್ಲಿಟ್ಟುಕೊಂಡು ದಾಟುವಂತಾಗಿದೆ. ಒಟ್ಟಾರೆಯಾಗಿ ಈ ಸೇತುವೆಯ ಪರಿಸ್ಥಿತಿ ಹೇಳಬೆಕಂದರೆ “ಧಾರವಾಡ ಮತ್ತು ಬೆಳಗಾವಿ ಗಡಿಭಾಗದಲ್ಲಿರುವುದರಿಂದ “ಗಂಡ-ಹೆಂಡಿರ ನಡುವೆ ಕೂಸು ಬಡವಾಯಿತು” ಎನ್ನುವಂತಾಗಿದೆ.

ಕೋಟ್:
- ಕಳೆದ ಕೆಲವು ದಿನಗಳ ಹಿಂದೆ ಪಕ್ಕದ ಗ್ರಾಮದ ಯುವಕ ಟ್ರಾಕ್ಟರ್ ಮೂಲಕ ಸಂಚರಿಸುವಾಗ ಸೇತುವೆ ಮೇಲಿದ್ದ ತೆಗ್ಗುಗುಂಡಿಗೆ ವಾಹನ ಇಳಿದಾಗ, ಹರಸಾಹಸ ಪಟ್ಟು ತೆಗ್ಗುಗುಂಡಿ ದಾಟಿಸುವಾಗ ಸೇತುವೆಗೆ ತಡೆಗೋಡೆ ಇಲ್ಲದಿರುವುರಿಂದ ಕೆಳಗೆ ಬಿದ್ದು ಗಂಭಿರ ಗಾಯಗೊಂಡಿದ್ದಾನೆ. ಇನ್ನಾದರೂ ಸಂಭಂಧಪಟ್ಟವರು ನಿದ್ದೆಯಿಂದ ಹೋರಬಂದು ಅವಘಡಗಳನ್ನು ತಪ್ಪಿಸಬೇಕೆಂದು ನಮ್ಮೆಲ್ಲರ ಆಗ್ರಹವಾಗಿದೆ.
ಗ್ರಾಮೀಣ ಸೇವಾ ಸಂಸ್ಥೆ ಲಿಂಗನಮಠ - ಅವಘಡಗಳನ್ನು ಸಂಭವಿಸುದನ್ನು ಅರಿತು ಈಗಾಗಲೇ ಸುಮಾರು ಸಾರಿ ಕಡಬಗಟ್ಟಿ ಕ್ರಾಸ ಅಲ್ಲಿಂದಂತಹ ಜಿವಿಆರ್ ಆಫಿಸ್ ಗೆ ಭೇಟಿ ನೀಡಿ ಲಿಂಗನಮಠ ಗ್ರಾಪಂ ಮುಖಾಂತರ ಮನವಿಯನ್ನು ಸಲ್ಲಿಸಿದೆವು, ಸಂಭಂಧಪಟ್ಟ ಅಧಿಕಾರಿಗಳ ಜೋತೆ ನೇರವಾಗಿ ಮಾತನಾಡಿದ್ದು, ಆದರೂ ಇನ್ನೂ ವರೆಗೆ ಸಮಸ್ಯಗೆ ಪರಿಹಾರ ಸಿಕ್ಕಿಲ್ಲ, ಒಂದು ವೇಳೆ ಸಂಭಂಧಪಟ್ಟವರ ನಿರ್ಲಕ್ಷಣ ಹೀಗೆ ಮುಂದುವರೆದರೆ ಸುತ್ತಮುತಲಿನ ಗ್ರಾಮಸ್ಥರೆಲ್ಲರೂ ಸೇರಿಕೋಂಡು “ರಸ್ತಾ ರೋಖೋ” ಮಾಡಲಾಗುವದು.
ಡಾ.ಕೆ.ಬಿ.ಹಿರೇಮಠ, ಅಧ್ಯಕ್ಷರು ಗ್ರಾಪಂ ಲಿಂಗನಮಠ - ಈಗಾಗಲೇ ಈ ಸೇತುವೇ ಬಗ್ಗೆ ನಾನು ಹಲವಾರು ಬಾರಿ ನಮ್ಮ ಕಡಬಗಟ್ಟಿ ಗ್ರಾಪಂ ವತಿಯಿಂದ ಜಿವಿಆರ್ ಕಂಪನಿಯವರಿಗೆ ಮನವಿ ಸಲ್ಲಿಸಿದ್ದೆವೆ. ಆದರೂ
ಇನ್ನೂವರೆಗೆ ಸರಿಯಾದ ಪ್ರತಿಕ್ರಿಯೆ ನಮಗೆ ದೊರೆತಿಲ್ಲ. ಕಳೆದ 3-4ವರ್ಷಗಳಿಂದ ಪ್ರತಿವರ್ಷಕ್ಕೆ ಎರಡು-ಮೂರು ಬಾರಿ ಜಿವಿಆರ್ ಕಂಪನಿಯವರಿಗೆ ಹೇಳಿ ತೆಗ್ಗುಗುಂಡಿ ಮುಚ್ಚಿಸುವ ಕಾರ್ಯ ಮಾಡಿಸಿದ್ದೆನೆ. ಆದರೆ ಯಾವಾಗ ನಾವು ಹೇಳುತ್ತೆವೋ ಆವಾಗ ಅಷ್ಟೇ ಬಂದು ತೆಗ್ಗುಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸೇತುವೆಯ ಕಾರ್ಯ ಮುಗಿಸುತ್ತಿಲ್ಲ.
ದಸಗೀರ ಹುಣಶಿಕಟ್ಟಿ, ಅಧ್ಯಕ್ಷರು ಗ್ರಾಪಂ ಕಡಬಗಟ್ಟಿ (ಧಾರವಾಡ ಜಿಲ್ಲೆ)

Leave a Comment