
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ನ್ಯೂನತೆ ಆಕ್ಷೇಪಿಸಿ, ಅರಣ್ಯ ವಾಸಿಗಳ ಪರವಾಗಿ ಸರ್ಕಾರಕ್ಕೆ ಸೂಕ್ತ ನಿರ್ಧೇಶನ ನೀಡಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ( ಪಿ. ಐ. ಎಲ್ ರಿಟಫಿಟೇಶನ್ ೧೧೦೮೩/ ೨೦೧೯ ) ರಲ್ಲಿ ಸರ್ಕಾರವು ಅರಣ್ಯ ವಾಸಿಗಳಿಗೆ ಆತಂಕ ಪಡಿಸಬಾರದೆಂಬ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದುವರಿಸಿ ಸರ್ಕಾರದ ಹೇಳಿಕೆಗೆ ಕಾಲಾವಕಾಶ ನೀಡಿ ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದುಡಲಾಯಿತೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂಧ್ರ ನಾಯ್ಕ ಸಲ್ಲಿಸಿದ ಸದ್ರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ ಮತ್ತು ಅಶೋಕ ಕೀನಾಗಿ ದ್ವಿಸದಸ್ಯದ ಪೀಠದ ನ್ಯಾಯಾಲಯದಲ್ಲಿ ವಿಚಾರಣೆ ಜರುಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ನಿರ್ದಿಷ್ಠ ದಾಖಲೆಗಳಿಗೆ ಒತ್ತಾಯಿಸಿ ಅರ್ಜಿಗಳು ತೀರಸ್ಕಾರ ಮಾಡಿರುವ ಮಂಜೂರಿಯ ವಿವಿಧ ಹಂತದ ಸಮಿತಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಇರುವುದರಿಂದ ಅರಣ್ಯ ವಾಸಿಗಳು ಸಾಗುವಳಿ ಹಕ್ಕಿನಿಂದ ವಂಚಿತರಾಗುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕೆಂಬ ಪರಿಹಾರ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಅರಣ್ಯ ವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆಯು ಕಳೆದ ಮಾರ್ಚನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿದ್ದು ಇರುತ್ತದೆ.ಸಾರ್ವಜನಿಕ ಹಿತಾಶಕ್ತಿ ಅರ್ಜಿಯಲ್ಲಿ ಮಂಜೂರಿ ಸಮಿತಿಗಳು ಕಾನೂನಿನಲ್ಲಿ ಮೇಲ್ಮನವಿದಾರನಿಗೆ ಸಾಕಷ್ಠು ಕಾಲಾವಕಾಶದೊಂದಿಗೆ ವಿಚಾರಣೆ ಗೋಳಿಸಬೇಕೆಂಬ ಹಾಗೂ ಒಂದೇದಿನದ ವಿಚಾರಣೆಯಲ್ಲಿ ಸಾವಿರಾರು ಅರ್ಜಿ ಮತ್ತು ಮೇನ್ಮನವಿ ಯಾಂತ್ರಿಕವಾಗಿ ತೀರಸ್ಕಾರವಾಗಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಅಲ್ಲದೇ ಅರಣ್ಯ ವಾಸಿಗಳು ನೀಡಿದ ಅರ್ಜಿಯಲ್ಲಿ ಎರಡು-ಮೂರರಷ್ಠು ಅರ್ಜಿಗಳು ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ವಾಸಿಗಳ ಪರವಾಗಿ ಕಾನೂನಿನಲ್ಲಿ ಉಲ್ಲೇಖಿಸಿದಂತೆ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ನಿರ್ಧೇಶನವನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ಅರ್ಜಿಯಲ್ಲಿ ಪರಿಹಾರ ಕೆಳಲಾಗಿದೆ ಎಂದು ಅಧ್ಯಕ್ಷ ರವೀಂಧ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment