
ಹಳಿಯಾಳ:- ತನ್ನ ಹೆಂಡತಿಯನ್ನು ಆಕೆಯ ಅಕ್ಕಂದಿರು ತನ್ನಿಂದ ದೂರ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಐನಾತಿ ವ್ಯಕ್ತಿಯೊರ್ವ ಸಹೋದರಿಯರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ಆರೋಪಿ ಪೋಲಿಸರಿಗೆ ಖುದ್ದು ಶರಣಾಗಿರುವ ವಿಚಿತ್ರ ಘಟನೆ ಹಳಿಯಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಇಲ್ಲಿಯ ಶಿವಾಜಿಗಲ್ಲಿಯ ಲಿಟಲ್ ಫ್ಲಾವರ್ ಸ್ಕೂಲ್ ನಡೆಸುವ ಜಯಶ್ರೀ ಮಹಾದೇವ ಕಮ್ಮಾರ ಹಾಗೂ ನಿರ್ಮಲಾ ರಾಮಚಂದ್ರ ಪೂಜಾರ ಮಾರಣಾಂತಿಕ ಹಲ್ಲೆಗೊಳಗಾದ ಸಹೋದರಿಯರಾಗಿದ್ದಾರೆ.
ಈ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಚಾಕು ಇರಿತಕ್ಕೆ ಒಳಗಾದ ತೀವೃವಾಗಿ ಗಾಯಗೊಂಡಿರುವ ಜಯಶ್ರೀ ಕಮ್ಮಾರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ರವಾನಿಸಲಾಗಿದೆ.
ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ರವಿ ರಘುನಾಥರಾವ ಕರಣಂ ಎನ್ನುವವನಾಗಿದ್ದು ಇತ ಹಲ್ಲೆಗೊಳಗಾದ ಮಹಿಳೆಯರ ಸಹೋದರಿ ವಿಜಯಾ ಅವರ 2ನೇ ಗಂಡನಾಗಿದ್ದು ಪೋಲಿಸ್ ವಶದಲ್ಲಿದ್ದಾನೆ.
ದೂರು:- ರವಿ ಕರಣಂ ಅವರು ತಮ್ಮ ಸಹೋದರಿ ವಿಜಯಾಳ 2ನೇ ಗಂಡನಾಗಿದ್ದು ಇಕೆಯ ಮಗ ಸ್ನೇಹಿತ ನಮ್ಮೊಂದಿಗೆ ವಾಸವಿದ್ದು ಇತನನ್ನು ನೋಡಲು ಸಹೋದರಿ ವಿಜಯಾ ನಮ್ಮ ಮನೆಗೆ ಬರುತ್ತಿದ್ದಳು. ಇವಳನ್ನು ನಾವೆ ತಲೆ ತುಂಬಿ ನಮ್ಮೊಂದಿಗೆ ಇಟ್ಟುಕೊಳ್ಳುತ್ತೇವೆಂದು ಹಾಗೂ ಆಸ್ತಿಯ ಸಲುವಾಗಿ ಆಪಾದಿತನು ಕೊಲೆ ಮಾಡುವ ಉದ್ದೇಶದಿಂದ ತನ್ನೊಂದಿಗೆ ತಂದ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ಜಯಶ್ರೀ ಹಾಗೂ ನಿರ್ಮಲಾ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿದೂರು:– ಸಹೋದರಿಯರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ನೇರವಾಗಿ ಠಾಣೆಗೆ ಬಂದು ಶರಣಾದ ಆರೋಪಿ ರವಿ ಕರಣಂ ತನ್ನ ಹೆಂಡತಿಯ ಅಕ್ಕ ಲಿಟಲ್ ಫ್ಲಾವರ್ ಸ್ಕೂಲ್ ಕೋ ಆರ್ಡಿನೇಟರ್ ನಿರ್ಮಲಾ ಪೂಜಾರ ಮೇಲೆ ಪ್ರತಿದೂರು ದಾಖಲಿಸಿದ್ದಾನೆ. ನಿರ್ಮಲಾ ಹಾಗೂ ಆಕೆಯ ಅಕ್ಕ ಜಯಶ್ರೀ ತನ್ನ ಹೆಂಡತಿಯ ತಲೆ ಕೆಡಿಸಿ ಗಂಡನನ್ನು ಬಿಟ್ಟು ಬಂದರೇ ಮಾತ್ರ ಆಸ್ತಿ ಸಿಗುತ್ತದೆ ಎಂದು ತಲೆ ತುಂಬಿ ತನ್ನಿಂದ ದೂರ ಮಾಡುತ್ತಿದ್ದಾರೆ ಹೀಗಿರುವಾಗ ತಾನು ಬುಧವಾರ ರಾತ್ರಿ ಅವರ ಮನೆಗೆ ತೆರಳಿ ಹೆಂಡತಿಯನ್ನು ಬರುವಂತೆ ಕರೆದಾಗ ಆಕೆಯ ಇಬ್ಬರು ಸಹೋದರಿಯವರು ಹೊಗದಂತೆ ಸನ್ನೆ ಮಾಡಿದ್ದನ್ನು ನೋಡಿ ಕೊಪಗೊಂಡ ತಾನು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದೇನೆಂದು ತಪ್ಪೊಪ್ಪಿಕೊಂಡಿದ್ದು ಈ ವೇಳೆ ಅವರು ಸಹಿತ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ನೀಡಿದ್ದಾನೆ.
ಘಟನೆ ನಡೆದ ತಕ್ಷಣ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಸರ್ಕಾರಿ ಆಸ್ಪತ್ರೆಗೆ ಭೆಟಿ ನೀಡಿ ಗಾಯಾಳುವಿನಿಂದ ಮಾಹಿತಿ ಕಲೆಹಾಕಿದರು. ಪಿಎಸ್‍ಐ ಯಲ್ಲಾಲಿಂಗ ಕುನ್ನೂರ ಅವರು ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Leave a Comment