
ಶ್ರೀ ರಾಮನವಮಿ ಎಂದರೆ ಹಿಂದೂ ಧರ್ಮದಲ್ಲಿ ಹಬ್ಬದ ಸಂಭ್ರಮ. ದೇವರಾದ ಶ್ರೀ ರಾಮನು ಹುಟ್ಟಿದ ದಿನ. ಈ ಹಬ್ಬವು ನಮ್ಮ *ಪುಣ್ಯಕ್ಷೇತ್ರ ಗೋಕರ್ಣದಲ್ಲಿ* ಬಹಳ ವಿಶೇಷ ದಿನ. ಭಜಕರು ಮುಂಜಾನೆ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜಾ ಆರಾಧನೆಮಾಡಿ, ಸಂಜೆಯ ವೇಳೆ ಗೋಕರ್ಣದ ಕಡಲತೀರದಲ್ಲಿರುವ ರಾಮ ಮಂದಿರ (ರಾಮತೀರ್ಥ)ಕ್ಕೆ ಬಂದು ಭಗವಂತನಾದ ಶ್ರೀರಾಮನ ದರ್ಶನ ಭಾಗ್ಯಪಡೆಯುವರು.ರಾಮನವಮಿ ಹಬ್ಬದ ನಿಮಿತ್ತ ದೇವಾಲಯದಲ್ಲಿ ಹಣ್ಣು ಕಾಯಿ ಒಡೆಸಿಕೊಂಡು, ತೀರ್ಥ ಪ್ರಸಾದವನ್ನು ಸ್ವೀಕರಿಸಿಕೊಂಡು, ಮರಳಿ ಬರುವಾಗ ನೆನಪಿಗೆ ಬರುವುದು ಸಣ್ಣಬೆಲೆಯ *”ಮಹಾಬಲ ಉಪಾಧ್ಯ”* ರವರ ಅರಮನೆ.ಈ ಮನೆತನದವರು ರಾಮನವಮಿ ದಿನದಂದು, ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ಪಚ್ಚಡಿ ಲಿಂಬು ಪಾನಕವನ್ನು ಹಂಚುತ್ತಾರೆ. ಮನೆಯ ಮುಂದೆ ಹೋಗುತ್ತಿರುವ ಜನರಿಗೆ *” ಒಳಗೆ ಬನ್ನಿ ,ಪ್ರಸಾದ ಸ್ವೀಕರಿಸಿ, ಪಾನಕ ಕುಡಿಯಿರಿ”* ಎಂದು ಕರೆದು ಲವಲವಿಕೆಯಿಂದ ಮಾತನಾಡಿಸುವರು ಈ ಉಪಾಧ್ಯರು.ಈ ಮನೆತನದವರು ಸುಮಾರು80 ವರ್ಷಗಳ ಹಿಂದೆ ನಡೆಸಿಕೊಂಡು ಬಂದಂತಾ ಸಂಪ್ರದಾಯ ಈ ಕುಟುಂಬದ್ದು ಎಂದು ಕೇಳ್ಪಟ್ಟಿದ್ದೇನೆ.ಇವರು ನೀಡುವ ಪಚ್ಚಡಿ ಪಾನಕವು ತುಂಬಾನೆ ರುಚಿಕರ ಹಾಗೂ ಸಿಹಿಯಾಗುತ್ತಿತ್ತು. ನಾನು 15 ವರ್ಷಗಳಿಂದ ಗೈರಾಗದೆ ಇವರ ಮನೆತನದ ಆತಿಥ್ಯ ಸ್ವೀಕರಿಸುತ್ತಿದ್ದು ನನ್ನ ಅನಿಸಿಕೆಯ ಮಾತುಗಳನ್ನು ಹೇಳಿದೆ.ರಾಮನವಮಿ ದಿನದಂದು ಈ ತಾಣದಲ್ಲಿ ಜನಸಾಗರದ ಚಿತ್ರಣ ಮೂಡುತ್ತಿತ್ತು. ಆದರೆ ಈ ವರ್ಷದಲ್ಲಿ ಹಬ್ಬದ ಸಂಭ್ರಮ, ಸಡಗರಕ್ಕೆ ಕೊರೋನಾ ಕಾರ್ಮೋಡ ಅಡ್ಡಿಯಾಗಿ ನಿಂತಿದೆ.ಇದು ಎಲ್ಲರ ಮನಸ್ಸಿಗೆ ತುಂಬಾ ಬೇಸರ ಮೂಡಿಸಿದೆ. ಶ್ರೀರಾಮನ ದರ್ಶನ ಭಾಗ್ಯವು ಇಲ್ಲದಂತಾಗಿದೆ, ಮಹಾಬಲ ಉಪಾಧ್ಯರ ಮನೆಯ ಪಾನಕ ಕುಡಿಯುವ ಅದೃಷ್ಟ ಕಳೆದು ಹೋಯಿತು. ಈ ಸಲ *”ರಾಮನವಮಿ”* *”ಯಾವನಮನಿ”* ಎಂಬ ಬೇಸರ ಜೊತೆ ಆ ಸಂತಸದ ದಿನದ ನೆನಪನ್ನು ನನ್ನಲ್ಲಿ ಮೆಲಕು ಹಾಕಿದೆ.




Leave a Comment