
ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು ದಾಳಿಯ ವೇಳೆ ಆರೋಪಿಗಳಾದ ಕಾಳಗಿನಕೊಪ್ಪ ಗ್ರಾಮದ ನಿವಾಸಿಗಳಾದ ವೆಂಕಟೇಶ ಮಾರುತಿ ಕೊರವರ ಹಾಗೂ ಮನೋಹರ ರಾಯಪ್ಪಾ ಕೊರವರ ತಪ್ಪಿಸಿಕೊಂಡಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ.
ದಾಳಿಯ ವೇಳೆ 2 ಕೆಜಿಗೂ ಹೆಚ್ಚು ನವಿಲಿನ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಸಲಕರಣೆಗಳನ್ನು ಜಪ್ತಪಡಿಸಿ ವನ್ಯಜೀವಿ ಸಂರಕ್ಷಣಾಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಹನಮಂತ ಚೌಗುಲಾ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
Leave a Comment