
ಗಿರಿ ನಿಂಬ, ಕೃಷ್ಣ ನಿಂಬ,ಮಿತಿ ನಿಂಬ, ಕರಿಪತ್ತ, ಕರಿವೇಪಾಕು, ಕರೇಪಾಕು, ಕರಿ ವೆಂಪು, ಕರಿವೇಪಲೈ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕರಿಬೇವಿನ ಗಿಡಗಳನ್ನು ಹೊಲ, ತೋಟದ ಬದಿಗಳ ಮೇಲೆ, ಕೈತೋಟಗಳಲ್ಲಿ, ಮನೆಗಳ ಹಿತ್ತಲಲ್ಲಿ ಬೆಳೆಸಿರುತ್ತಾರೆ.ಕರಿಬೇವಿಗೆ ಅಪಾರ ಬೇಡಿಕೆ ಇದ್ದು, ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಹೆಚ್ಚಾಗಿ ಬೆಳೆದು ಲಾಭಗಳಿಸುತ್ತಿದ್ದಾರೆ.
ಅಡಿಗೆ ಮನೆಯಲ್ಲಿ ಕರಿಬೇವು ಖಾಯಂ ಸ್ಥಾನ ಪಡೆದುಕೊಂಡಿದ್ದು,ಅಡಿಗೆ ಮನೆಯಲ್ಲಿ ಕರಿಬೇವು ಇಲ್ಲವಾದರೆ, ಅನೇಕ ಅಡಿಗೆಗಳಿಗೆ ರುಚಿಯಾಗಲಿ, ಸುವಾಸನೆಯಾಗಲಿ ಬರುವುದಿಲ್ಲ.
ಕರಿಬೇವು ಅಡಿಗೆ ಮನೆಗೆ ಮಾತ್ರ ಸೀಮಿತವಲ್ಲ. ಇದರಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳು ತುಂಬಿದ್ದು, ಇದರ ಎಲೆ,ಹೂ, ಹಣ್ಣು, ತೊಗಟೆ, ಬೇರು ಸಹಿತ ಎಲ್ಲವನ್ನು ಪುರಾತನ ಕಾಲದಿಂದಲೂ ಆಯುರ್ವೇದ,ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ದತಿಯಲ್ಲಿ ಉಪಯೋಗಿಸುತ್ತಿದ್ದಾರೆ.

ಕರಿಬೇವಿನ ಗಿಡ ಒಂದಿದ್ದರೆ, ಮನೆಯಲ್ಲಿ ಒಬ್ಬ ವೈದ್ಯರಿದ್ದಂತೆ.ಎಲ್ಲಾ ವಯಸ್ಸಿನವರಿಗೂ ಅದ್ಭುತವಾಗಿ ಕೆಲಸ ಮಾಡೋ ದಿವೌಷಧಿ ಈ ಕರಿಬೇವು.
ಸ್ತ್ರೀಯರು ತಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಎಷ್ಟು ಮುತವರ್ಜಿ, ಶ್ರಮ ವಹಿಸ್ತಾರೋ, ಆರೋಗ್ಯವಾದ ತಲೆ ಕೂದಲು ಸೊಂಪಾಗಿ, ಕಪ್ಪಾಗಿ, ಉದ್ದವಾಗಿ ಬೆಳೆಸಲು, ಅದರ ಎರಡರಷ್ಟು ಶ್ರಮ ಮುತವರ್ಜಿ ವಹಿಸುತ್ತಾರೆ.ಇದಕ್ಕೆ ಕರಿಬೇವು ತುಂಬಾನೇ ಸಹಾಯ ಮಾಡುತ್ತೆ.
ಒಂದು ದಪ್ಪ ತಳದ ಬಾಂಡ್ಲಿಯಲ್ಲಿ 500ml ಶುದ್ಧ ಕೊಬ್ಬರಿ ಎಣ್ಣೆ ಹಾಕಿ, ಅದರಲ್ಲಿ 100 ಗ್ರಾಂ ಕರಿಬೇವು ಎಲೆಗಳ ಪೇಸ್ಟ್, 50 ಗ್ರಾಂ ಬೆಟ್ಟದ ನೆಲ್ಲಿಕಾಯಿ ಪೇಸ್ಟ್, 1 ಚಮಚ ಮೆಂತ್ಯದಕಾಳು,25 ಗ್ರಾಂ ಆಲದ ಮರದ ಬಿಳಲಿನ ತೊಗಟೆ ಹಾಕಿ ಒಲೆಯ ಮೇಲಿಟ್ಟು ಮಂದದ ಹುರಿಯಲ್ಲಿ ಚೆನ್ನಾಗಿ ಕುದಿಸಿ,ನೀರಿನಂಶ ಬಿಟ್ಟಮೇಲೆ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಒಂದು ಗಾಜಿನ ಬಾಟ್ಲಿಯಲ್ಲಿ ಭದ್ರ ಪಡಿಸಿ, ಈ ಎಣ್ಣೆಯಿಂದ ತಲೆ ಕೂದಲಿನ ಬುಡಕ್ಕೆ ಮಸಾಜ್ ಮಾಡಿ, ಕೂದಲಿಗೆ ಲೇಪನ ಮಾಡಿಕೊಳ್ಳುತ್ತಿದ್ದರೆ,ಆರೋಗ್ಯವಾದ ಕೂದಲು ಸೊಂಪಾಗಿ, ಕಪ್ಪಾಗಿ, ಉದ್ದಕ್ಕೆ ಬೆಳೆಯುತ್ತೆ.

ಕರಿಬೇವು ಒಂದು ಅತ್ಯುತ್ತಮ ಸೌಂದರ್ಯ ಸಾಧನ ಅಂತಲೂ ಹೇಳಬಹುದು.ಕರಿಬೇವಿನಲ್ಲಿರುವ ಔಷಧೀಯ ಗುಣಗಳು, ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತೆ.ಚರ್ಮದಲ್ಲಿನ ಸುಕ್ಕು ದೂರ ಮಾಡಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೆ.
ಚರ್ಮವನ್ನು ತಾಜಾತನದಿಂದ ಇಡುವುವುದಲ್ಲದೆ ವೃದ್ದಾಪ್ಯವನ್ನು ತಡೆಯುತ್ತೆ.ಮುಖದ ಮೇಲಿನ ಮಚ್ಚೆಗಳು, ಮೊಡವೆಗಳನ್ನು ಸಹ ನಿವಾರಣೆ ಮಾಡುತ್ತೆ.
500ml ಶುದ್ಧ ಎಳ್ಳೆಣ್ಣೆಯಲ್ಲಿ ಮೇಲಿನಂತೆ ಕರಿಬೇವಿನ ಎಲೆಗಳ ಪೇಸ್ಟ್, ಮೆಂತ್ಯಕಾಳು,ಬೆಟ್ಟದ ನೆಲ್ಲಿಕಾಯಿ ಪೇಸ್ಟ್, ಆಲದ ಮರದ ಬೀಳಲಿನ ತೊಗಟೆ ಹಾಕಿ, ಕುದಿಸಿದ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿಕೊಂಡು 1/2 ಗಂಟೆಯ ನಂತರ ಸ್ನಾನ ಮಾಡಿದಲ್ಲಿ ಮೇಲಿನ ಫಲಿತ ಪಡೆದುಕೊಳ್ಳಬಹುದು.
ಕರಿಬೇವಿನ ಕಷಾಯವನ್ನು ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30ml ನಂತೆ ಸೇವಿಸುತ್ತಾ ಬಂದಲ್ಲಿ, ರಕ್ತ ಹೀನತೆ ದೂರಮಾಡಿ, ಮೂತ್ರ ಪಿಂಡಗಳಲ್ಲಿನ ಕಲ್ಲನ್ನು ಕರಗಿಸಿ, ಮೂತ್ರ ಪಿಂಡಗಳನ್ನು ಆರೋಗ್ಯವಾಗಿಡುತ್ತೆ.
ಮಧುಮೇಹ ಸಹ ಅತೋಟಿಗೆ ಬರುತ್ತೆ.
ಕರಿಬೇವು ಸೇವನೆಯಿಂದ ದೇಹದಲ್ಲಿನ ಉಷ್ಣತೆ ತಗ್ಗಿಸಿ, ಅತಿಯಾದ ಬೆವರು, ದುರ್ವಾಸನೆ ಬರದಂತೆ ಕಾಪಾಡುತ್ತೆ.
ಕರಿಬೇವಿನಲ್ಲಿ ಅಧಿಕ ಕ್ಯಾಲ್ಸಿಯಂ ಅಂಶವಿದ್ದು, ಮೂಳೆಗಳನ್ನು ಬಲಿಷ್ಠಗೊಳಿಸುತ್ತೆ.ಮಾನಸಿಕ ಒತ್ತಡ ತಗ್ಗಿಸುತ್ತೆ.ಇದರಲ್ಲಿರುವ ಅಧಿಕ ಕಬ್ಬಿಣಾಂಶ ದೇಹಕ್ಕೆ ಬಲವನ್ನು ನೀಡುತ್ತೆ.
ಒಂದು ಹಿಡಿಯಷ್ಟು ಕರಿಬೇವಿನ ಎಲೆಗಳನ್ನು ಶುಭ್ರಗೊಳಿಸಿ ಜಜ್ಜಿ ಒಂದು ತೆಳುವಾದ ಹತ್ತಿ ಬಟ್ಟೆಯಲ್ಲಿ ಹಾಕಿ, ಒಂದು ಲೋಟ ನೀರಿಗೆ ರಸವನ್ನು ಹಿಂಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದಲ್ಲಿ, ಎಂತಹ ಹೃದ್ರೋಗ ಸಮಸ್ಯೆ ಇದ್ದರು ನಿವಾರಣೆಯಾಗುತ್ತೆ.
ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ.ಇದು ಮಧುಮೇಹಿಗಳ ಪಾಲಿಗೆ ವರವೆನ್ನಬಹು.
ಕರಿಬೇವಿನ ಹಣ್ಣುಗಳ ಸೇವನೆಯಿಂದ ನರಗಳ ಬಲಹೀನತೆ ದೂರವಾಗುತ್ತದೆ.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.ಮಾಂಸಖಂಡಗಳು ಬಲಗೊಳ್ಳುತ್ತೆ.
ಕರಿಬೇವಿನ ಎಲೆಗಳನ್ನು ಜಗಿಯುತ್ತಿದ್ದರೆ ವಸಡುಗಳು ಬಲಗೊಂಡು, ದಂತಪಂಕ್ತಿ ಗಟ್ಟಿಯಾಗುತ್ತೆ.ಬಾಯಿಂದ ಬರುವ ದುರ್ವಾಸನೆ ದೂರವಾಗುತ್ತೆ.
ನಿತ್ಯವೂ ಆಹಾರದಲ್ಲಿ ಕರಿಬೇವು ಉಪಯೋಗಿಸುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತೆ.
ಬಾಣಂತಿಯರು ಕರಿಬೇವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಮೊಲೆ ಹಾಲು ಹೆಚ್ಚುತ್ತೆ.
ಕರಿಬೇವು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಲ್ಲಿ ವಿಟಮಿನ್ A ಸಮೃದ್ಧಿಯಾಗಿದ್ದು
ಸದಾಕಾಲ ಕರಿಬೇವು ಸೇವಿಸುತ್ತಿದ್ದರೆ, ಕಣ್ಣಿಗೆ ಸಂಬಂಧಿಸಿದ ವ್ಯಾಧಿಗಳಿಂದ ಮುಕ್ತಿ ಪಡೆಯಬಹುದು.
ಇದು ಕಣ್ಣಿನ ದೃಷ್ಠಿ ಹೆಚ್ಚಿಸುವುದಲ್ಲದೆ ಕಣ್ಣಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರಮಾಡುತ್ತೆ.
ಕರಿಬೇವಿನಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವ ಗುಣವಿದ್ದು, ಅಜೀರ್ಣ, ಅಸಿಡಿಟಿ, ಗ್ಯಾಸ್ ಇನ್ನು ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ.
ಕರಿಬೇವಿನ ಉಪಯೋಗಗಳು ಅಪಾರವಾದದ್ದು.

Leave a Comment