
ಹೊನ್ನಾವರ ಪ್ರಭಾತನಗರ ಪ್ರೌಡಶಾಲೆಯಲ್ಲಿ ೯ ನೇ ತರಗತಿ ಅಧ್ಯಯನ ಮಾಡುತ್ತಿರುವ ಗೀತಾಶ್ರೀ ಆರ್ ಹಿರೇಹಾರ ಎನ್ನುವ ವಿದ್ಯಾರ್ಥಿನಿ ತನ್ನ ಮನೆಯ ಸಮೀಪದ ರಸ್ತೆಯಲ್ಲಿ ದೊರೆತ ಪರ್ಸನ್ನು ವಾರಸುದಾರರಿಗೆ ಪುನಃ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾಳೆ. ಪರ್ಸನಲ್ಲಿ ೨೨೩೪೦ ಮೊತ್ತ ದ ನಗದು ಸೇರಿದಂತೆ ವಿವಿಧ ದಾಖಲಾತಿಗಳಿದ್ದವು. ಪರ್ಸನಲ್ಲಿರುವ ಮೊಬೈಲ್ ನಂಬರ ಮೂಲಕ ಅರ್ಬನ್ ಬ್ಯಾಂಕನಲ್ಲಿ ಕಾರ್ಯನಿರ್ವಹಿಸುವ ನರಸ ಮಂಜು ಗೌಡ ಇವರಿಗೆ ಸೇರಿರುವುದೆಂದು ಖಚಿತಪಡಿಸಿಕೊಂಡು ತಂದೆ ಮಗಳು ಹಸ್ತಾಂತರಿಸಿದರು. ಇವರ ತಂದೆ ಆರ್.ಪಿ ಹರಿಜನ ಶಿಕ್ಷಣ ಸಂಯೋಜಕರಾಗಿ ಹೊನ್ನಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರ ಪ್ರಾಮಾಣಿಕತೆಗೆ ನರಸ ಗೌಡ ಅಭಿನಂದಿಸಿ ಶುಭ ಹಾರೈಸಿದರು.
Leave a Comment