ಅಶ್ವಗಂಧಿ, ವಾಜಿಗಂಧ, ತುರಂಗಗಂಧ, ಹಿರೇಮದ್ದಿನಗಿಡ, ಬಲದಾ, ಶೋಧಹರ, ನಗೌರಿ, ಪುನಿರ್, ಅಮುಕರವಿ, ವರಹಕರಣಿ, ಪನ್ನೇರು ಗಡ್ಡಲು, ಬೊಮ್ಮಡೋಲು ಗಡ್ಡಲು ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕೆರೆಕಟ್ಟೆಗಳ ಮೇಲೆ, ಹೊಲಗಳ ಬದಿಗಳಮೇಲೆ, ಪಾಳುಭೂಮಿ, ಬೀಳುಭೂಮಿ, ತಿಪ್ಪೆಗುಂಡಿಗಳ ಪಕ್ಕ, ಕುರಚಲು ಕಾಡುಗಳಲ್ಲಿ, ಸಿಕ್ಕಸಿಕ್ಕ ಕಡೆಯಲ್ಲಿ ಕಸದಂತೆ 2-4 ಅಡಿ ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದನ್ನ ಕನ್ನಡದಲ್ಲಿ “ಹಿರೇಮದ್ದಿನಗಿಡ” ಎಂದು ಕರೆಯುತ್ತಾರೆ.
“ಹಿರೇಮದ್ದಿನಗಿಡ” ಹೆಸರೇ ಸೂಚಿಸುವಂತೆ, ತನ್ನ ಒಡಲಲ್ಲಿ ಅಪಾರವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದೆ. ಇದನ್ನ ಔಷಧೀಯ “ಕಣಜ” ಎಂತಲೂ ಕರೆಯುತ್ತಾರೆ. ಇದರಲ್ಲಿರುವ ಅಪಾರಶಕ್ತಿಯಿಂದ ಆಂಗ್ಲ ಭಾಷೆಯಲ್ಲಿ “Horse power” ಎಂದು, ಆಯುರ್ವೇದದಲ್ಲಿ King of Ayurveda” ಎಂದು ಕರೆದಿದ್ದಾರೆ.

ಮಾನಸಿಕ ಪ್ರಶಾಂತತೆ, ನಿದ್ರಾಹೀನತೆ, ನರದೌರ್ಬಲ್ಯ, ಬಲಹೀನತೆ, ಮಾಂಸಖಂಡಗಳಿಗೆ ಪುಷ್ಠಿ ನೀಡುತ್ತೆ, ನಪುಂಷಕತ್ವ ದೂರಮಾಡಿ ಲೈಂಗಿಕತೆ ವೃದ್ಧಿಸುತ್ತೆ, ಕಣ್ಣುದೃಷ್ಠಿ ಸಮಸ್ಯೆಗಳು, ಹೃದಯ ಸಮಸ್ಯೆಗಳು, ಮಧುಮೇಹದಂತಹ ನೂರಾರು ರೋಗಗಳು ಗುಣಪಡಿಸಲು ಅದ್ಭುತವಾದ ಔಷಧೀಯವಾಗಿ ಕೆಲಸಮಾಡುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ. ಇದರಲ್ಲಿರುವ ಅಪೂರ್ವವಾದ ಔಷಧೀಯ ಗುಣಗಳಿಂದ ಸಂಸ್ಕೃತದಲ್ಲಿ ಇದನ್ನು “ಸರ್ವರೋಗನಿವಾರಣಿ” ಎಂದು ಕರೆದಿದ್ದಾರೆ. ಹೆಸರು ಇಲ್ಲದ ವ್ಯಾಧಿಗಳಿಗೆ “ಅಶ್ವಗಂಧ” ದಿವೌಷಧಿ.
ಅಶ್ವಗಂಧದಲ್ಲಿ ಅಪಾರ ಔಷಧೀಯ ಗುಣಗಳಿದ್ದರು ಶುದ್ಧಿ ಮಾಡದೆ ಉಪಯೋಗಿಸುವಂತಿಲ್ಲ. ಈ ಗಿಡದ ಬೇರುಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ಬೇರನ್ನು ಮುರಿದಾಗ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದನ್ನ “ಅಶ್ವಗಂಧ” ಎಂದು ಕರೆದರು.
A. ಶುದ್ಧಿಮಾಡಿದ ಅಶ್ವಗಂಧ ಚೂರ್ಣ 1 ಚಮಚ, ಶುಂಠಿ ಚೂರ್ಣ 1 ಚಮಚ, 2 ಚಮಚ ನಾಟಿ ಹಸುವಿನ ತುಪ್ಪದಲ್ಲಿ ಹುರಿದು, ಒಂದು ಲೋಟ ಉಗರು ಬೆಚ್ಚಗಿನ ಹಾಲಲ್ಲಿ ಬೆರಸಿ ಅದಕ್ಕೆ 1 ಚಮಚ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರಸಿ, ಬೆಳಿಗ್ಗೆ ಸಂಜೆ ಸೇವಿಸುತ್ತಿದ್ದರೆ, ಪುರುಷರಲ್ಲಿ ದೇಹಕ್ಕೆ ಪುಷ್ಠಿ ಬಂದು, ಧಾತು ವೃದ್ಧಿಯಾಗಿ, ನಪುಂಷಕತ್ವ ದೂರವಾಗಿ, ಕಾಮವಾಂಛೆ ಹೆಚ್ಚುತ್ತೆ.
B. 1 ಲೋಟ ಹಸುವಿನ ಹಾಲಿಗೆ 1 ಲೋಟ ನೀರು ಸೇರಿಸಿ, ಅದಕ್ಕೆ 2 ಚಮಚ ಅಶ್ವಗಂಧ ಚೂರ್ಣ ಬೆರಸಿ, ಒಲೆಯಮೇಲಿಟ್ಟು ಚೆನ್ನಾಗಿ ಮಂದದುರಿಯಲ್ಲಿ ಕುದಿಸಿ, ನೀರು ಹಿಂಗಿ ಹಾಲಿನ ಭಾಗ ಉಳಿದಾಗ ಕೆಳಗಿಳಿಸಿ, ಸೋಸಿಕೊಂಡು ಅದಕ್ಕೆ 1 ಚಮಚ ಸಕ್ಕರೆ ಅಥವಾ ಬೆಲ್ಲ ಬೆರಸಿ ಬೆಳಿಗ್ಗೆ ಸಂಜೆ ಕುಡಿಯುತ್ತಿದ್ದರೆ, ದೇಹದಲ್ಲಿ ನರದೌರ್ಬಲ್ಯ ದೂರವಾಗಿ, ಖಂಡಬಲ ಹೆಚ್ಚಿ, ವೀರ್ಯಾಣು ವೃದ್ಧಿಸುತ್ತೆ, ಸ್ವಪ್ನ ಸ್ಖಲನ ದೂರವಾಗುತ್ತೆ. ಸ್ತ್ರೀ ಪುರುಷರಲ್ಲಿ ಸಂತಾನ ನ್ಯೂನ್ಯತೆಗಳಿದ್ದರೆ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತೆ.
ಎಳ್ಳೆಣ್ಣೆಯಲ್ಲಿ ಅಶ್ವಗಂಧ ಚೂರ್ಣವನ್ನು ಹಾಕಿ, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ, ಚರ್ಮವ್ಯಾಧಿಗಳ ಮೇಲೆ ಲೇಪನ ಮಾಡುತ್ತಾ ಬಂದಲ್ಲಿ, ಎಂತಹ ಚರ್ಮ ವ್ಯಾಧಿಗಳಿದ್ದರು ವಾಸಿಯಾಗುತ್ತೆ. ಮಾಂಸ ಖಂಡಗಳ ನೋವು, ಕೀಲುನೋವು, ಸೊಂಟದ ನೋವು, ಕೈಕಾಲು ನೋವು ಶಮನವಾಗುತ್ತೆ. ನವೆ, ಗಜ್ಜಿ, ಹುಳುಕಡ್ಡಿಯು ಸಹ ಗುಣವಾಗುತ್ತೆ.
ದಿನವು 1 ಚಮಚ ಅಶ್ವಗಂಧ ಚೂರ್ಣವನ್ನು 1/2 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಊಟಕ್ಕೆ 1/2 ಗಂಟೆ ಮುಂಚೆ, ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದಲ್ಲಿ, ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆಗಳು ದೂರವಾಗುತ್ತೆ.

ಅಶ್ವಗಂಧ ಚೂರ್ಣ 1 ಚಮಚ, ಕಲ್ಲುಸಕ್ಕರೆ 1 ಚಮಚ, 1 ಲೋಟ ಉಗರು ಬೆಚ್ಚಗಿನ ಹಸುವಿನ ಹಾಲಿಗೆ ಕಲಸಿ ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದಲ್ಲಿ ಶ್ವೇತಪ್ರದರ, ರಕ್ತಪ್ರದರ, ಗರ್ಭಾಶಯ ಸಮಸ್ಯೆಗಳು, ಋತಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಅಶ್ವಗಂಧ, ಬೆಟ್ಟದ ನೆಲ್ಲಿಕಾಯಿ, ಅತಿಮಧುರ, ಕರ್ಕಾಯಿ, ಸಮಪ್ರಮಾಣದಲ್ಲಿ ಕಲಸಿ, ಜೇನುತುಪ್ಪ ಹಾಲಿನಲ್ಲಿ ಕಲಸಿ ಕುಡಿಯುತ್ತಿದ್ದರೆ, ಕಣ್ಣಿನದೃಷ್ಠಿ ಹೆಚ್ಚುತ್ತೆ,
ಇದರ ಎಲೆಗಳನ್ನು ತಂದು, ಅದಕ್ಕೆ ಚಿಟಿಕೆ ಅರಸಿಣ, ಒಂದು ಕಲ್ಲು ಉಪ್ಪು ಸೇರಿಸಿ ನುಣ್ಣಗೆ ಅರೆದು ಗಾಯ, ಹುಣ್ಣು, ಗಜ್ಜಿ, ಹುಳುಕಡ್ಡಿಯ ಮೇಲೆ ಲೇಪನ ಮಾಡಿದ್ರೆ ಬೇಗ ವಾಸಿಯಾಗುತ್ತೆ.
ಅಶ್ವಗಂಧ ಚೂರ್ಣ ಸೇವಿಸುವುದರಿಂದ TB, cancer ದಂತಹ ಮಾರಕ ರೋಗಗಳು ಸಹ ಗುಣವಾಗುತ್ತೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತೆ. ಇದು ಹೆಸರೇ ಇಲ್ಲದ ಅನೇಕ ವ್ಯಾಧಿಗಳು ಗುಣಪಡಿಸುವಲ್ಲಿ ರಾಮಬಾಣದಂತೆ ಕೆಲಸಮಾಡುತ್ತೆ.

Leave a Comment