ರಸ್ತೆಯಲ್ಲಿ ವಾಹನ ಕೆಟ್ಟರೆ ಬೇರೆ ವಾಹನದ ಚಾಲಕರು ಅಜಾಗರೂಕತೆಯಿಂದ ವೇಗವಾಗಿ ಬಂದು ಗುದ್ದದಿರಲಿ ಎನ್ನುವ ಕಾರಣಕ್ಕೆ ವಾಹನದ ಹಿಂದೆ ಮುಂದೆ ಸ್ವಲ್ಪ ದೂರದಲ್ಲಿ ಮತ್ತು ವಾಹನ ಸಂಚಾರ ಇರುವ ಕಡೆ ಸೊಪ್ಪಿನ ತುಂಕೆಗಳನ್ನು ಕಲ್ಲುಗಳನ್ನು ಇಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸುವುದು ಸಾಧ್ಯವಾಗದೇ ರಸ್ತೆಯನ್ನೇ ಮಂಚ ಮಾಡಿಕೊಂಡು ಮಲಗಿದಾಗ ದಾರಿಹೋಕರ್ಯಾರೋ ಗಾಡಿ ಕೆಟ್ಟಾಗ ಮಾಡುವಂತೆ ಸೊಪ್ಪಿನ ತುಂಕೆ ಹಾಗೂ ಕಲ್ಲುಗಳನ್ನಿಟ್ಟು ವಾಹನ ಸವಾರರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಮನೆ ಮಂದಿಯನ್ನು ಬೀದಿಗೆ ತರುವ, ಬೀದಿಯನ್ನೇ ಮನೆ ಎಂದುಕೊಳ್ಳುವಂತೆ ಮಾಡುವ, ಮಾನ ಕಳೆಯುವ ಮದಿರೆಯ ಸಹವಾಸ ಸಾಕೆನ್ನಿಸದ ಹೊರತೂ ಹೊರಬರುವುದು ಸಾಧ್ಯವಿಲ್ಲವೇನೋ

Leave a Comment