• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಟ್ಟ ಕಾನನದ ನಡುವೆ ಮೈದಳೆದ ವಂದಡಿಕೆ ಶಿವಾಲಯ

September 5, 2020 by Lakshmikant Gowda Leave a Comment

ಸಸ್ಯಶ್ಯಾಮಲೆಯ ನಡುವೆ ಬೆಟ್ಟದ ನೆತ್ತಿಯಲ್ಲಿ ನೆಲೆಸಿರುವ ಶ್ರೀ ಕರಿಕಾನ ಪರಮೇಶ್ವರಿಯ ಸನ್ನಿಧಿ ತನ್ನೊಡಲಿನ ರಮ್ಯಾದ್ಭುತ ಪ್ರಕೃತಿ ಸೌಂದರ್ಯದಿಂದಲೇ ಎಂತವರನ್ನೂ ಮಂತ್ರಮುಗ್ಧಗೊಳಿಸಬಲ್ಲುದು. ಜಗನ್ಮಾತೆಯ ಸನ್ನಿಧಿಯಲ್ಲಿ ನಿಂತು ಸಾವಿರಾರು ಅಡಿ ಕೆಳಗಿರುವ ಬಯಲು ಸಮುದ್ರ ನದಿ ತಡಸಲುಗಳನ್ನು ಊರು ಕೇರಿಗಳನ್ನು ದಿಟ್ಟಿಸುವುದೇ ಒಂದು ಸೊಗಸಿನ ಸಂಗತಿ. ಆಧ್ಯಾತ್ಮಿಕ ಹಾಗೂ ಲೌಕಿಕ ಸಂತೋಷಗಳೆರಡನ್ನೂ ಒಂದೇ ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಈ ಪವಿತ್ರ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ದುರ್ಗಮವಾದ ಅಡವಿಯನಡುವೆ ಇರುವ ವಂದಡಿಕೆ ಶಿವ ದೇವಾಲಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಬದಲಾಗಿದೆ.

ವಂದಡಿಕೆ ಶಿವಾಲ,karikana parameshwari temple


ಚಿಕ್ಕದಾದ ಅಡಿಕೆ ಗಾತ್ರದಲ್ಲಿರುವ ಶಿವಲಿಂಗ ಎನ್ನುವ ಕಾರಣಕ್ಕೋ ಅಥವಾ ದುರ್ಗಮವಾದ ಆ ಕಾಡಿನ ನಡುವಲ್ಲೂ ಅಡಿಕೆ ಮರ ಇದೆ ಎನ್ನುವ ಕಾರಣಕ್ಕೋ ಈ ಹೆಸರು ಬಂದಿರಬಹುದಾದರೂ ಶಿವಲಿಂಗದಮೇಲೆ ವರ್ಷವಿಡೀ ನಿರಂತರವಾಗಿ ಬೀಳುತ್ತಲೇ ಇರುವ ಜಲಧಾರೆ ಅಚ್ಚರಿಗೆ ಕಾರಣವಾಗಿದೆ. ಸಮುದ್ರಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಕರಿಕಾನ ಬೆಟ್ಟದಲ್ಲಿ ಮಳೆಗಾಲ ಬೇಸಿಗೆ ಎಂಬ ಬೇಧವಿಲ್ಲದೇ ಸದಾ ಚಿಮ್ಮುವ ಜಲಧಾರೆ ಇಲ್ಲಿನ ವೈಶಿಷ್ಠ್ಯ.

karikana parameshwari,ಕರಿಕಾನ ಪರಮೇಶ್ವರಿ


ಕರಿಕಾನ ಪರಮೇಶ್ವರಿ ದೇವಾಲಯದಿಂದ ವಂದಡಿಕೆ ಶಿವಲಿಂಗ ಇರುವಲ್ಲಿಗೆ ಹೋಗಲು ಕಾಲು ದಾರಿ ಮಾತ್ರ ಇರುವುದು ಅದೂ ದುರ್ಗಮವಾದ ಮಾರ್ಗ ಅದನ್ನೇ ಬಳಸಿಕೊಂಡು ಶಿವನಿಗೆ ಸುಂದರ ಶಿಲಾಮಯ ದೇವಾಲಯವನ್ನು ನಿರ್ಮಿಸುವ ಮೂಲಕ ದೇವಾಲಯದ ಆಡಳಿತ ಮಂಡಳಿ ಕ್ಷೇತ್ರನ್ನು ಪ್ರಸಿದ್ಧಿಗೆ ತರುವ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಕಣ್ಣಿಗೆ ಹಬ್ಬವನ್ನುಂಟುಮಾಡುವ, ಮನಸ್ಸಿಗೆ ಮುದದೊಂದಿಗೆ ನೆಮ್ಮದಿ ನೀಡಬಲ್ಲ ತಾಣದಲ್ಲಿ ಇದಾಗಿದೆ.

karikana parameshwari temple

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಪ್ರವಾಸ, ಸಂಸ್ಕೃತಿ-ಕಲೆ Tagged With: ಆಧ್ಯಾತ್ಮಿಕ, ಊರು ಕೇರಿ, ಒಂದು ಕಿಲೋಮೀಟರ್ ದೂರದಲ್ಲಿ, ಕರಿಕಾನ ಪರಮೇಶ್ವರಿ ದೇವಾಲ, ಕರಿಕಾನ ಬೆಟ್ಟದಲ್ಲಿ, ಚಿಕ್ಕದಾದ ಅಡಿಕೆ ಗಾತ್ರ, ಜಗನ್ಮಾತೆಯ ಸನ್ನಿಧಿಯಲ್ಲಿ ನಿಂತು, ಬೇಧವಿಲ್ಲದೇ, ಮಂತ್ರಮುಗ್ಧಗೊಳಿಸಬಲ್ಲುದು, ಮಳೆಗಾಲ ಬೇಸಿಗೆ, ಲೌಕಿಕ ಸಂತೋಷ, ವಂದಡಿಕೆ ಶಿವ ದೇವಾಲಯ, ಸದಾ ಚಿಮ್ಮುವ ಜಲಧಾರೆ, ಸಮುದ್ರಮಟ್ಟದಿಂದ ಸಾವಿರಾರು ಅಡಿ ಎತ್ತರ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...