ಭಾರತರತ್ನ ,ಶ್ರೇಷ್ಠ ಶಿಕ್ಷಕ, ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಪ್ರಯುಕ್ತ ವಾಗಿ ಶನಿವಾರ ಲಯನ್ಸ್ ಕ್ಲಬ್ ಹೊನ್ನವರವತಿಯಿಂದ ಶಿಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್, ಜೆ, ಕೈರನ ಮಾತನಾಡಿ ರಾಧಾಕೃಷ್ಣನ್ ಒಂದು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಓದಿ ಶಿಕ್ಷಕನಾಗಿ ಈ ದೇಶದ ಉಪರಾಷ್ಟ್ರಪತಿಯಾಗಿ ಜಗತ್ತಿನ ಒಬ್ಬ ಶ್ರೇಷ್ಠ ಚಿಂತಕನಾಗಿ ಬೆಳಗಿದರು ತನ್ನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದ ಒಬ್ಬ ಮಹಾನ್ ಚೇತನರಾಗಿದ್ದಾರೆ. ನಾನು ಒಬ್ಬ ಶಿಕ್ಷಕನಾಗಿ ಸಮಾಜ ಕಾಣುವ ರೀತಿ ಅವರಿಂದ ತುಂಬಾ ಒಳ್ಳೆಯದನ್ನು ಅಪೇಕ್ಷಿಸುವ ಕಾರಣಾ ಶಿಕ್ಷಕರ ಜವಾಬ್ದಾರಿ ತುಂಬಾ ಹೆಚ್ಚಿನ ದು.ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಒಬ್ಬ ಶಿಕ್ಷಕ ಇರುತ್ತಾನೆ ಎಲ್ಲ ವೃತ್ತಿ ಗಿಂತಲೂ ಶಿಕ್ಷಕ ವೃತ್ತಿ ಹೆಚ್ಚಿನ ಗೌರವ ನೀಡಲಿದೆ ಎಂದು ಸೇವಾ ಅವಧಿಯ ದಿನವನ್ನು ಸ್ಮರಿಸಿದರು. ಲಯನ್ಸ ಕ್ಲಬ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ ಕ್ಲಬ್ ಕಾರ್ಯದರ್ಶಿ ಎಂ.ಜಿ.ನಾಯ್ಕ ಸ್ವಾಗತಿಸಿ ಖಜಾಂಚಿ ಎಸ್.ಟಿ.ನಾಯ್ಕ್ ವಂದಿಸಿದರು ಲಯನ್ ಸದಸ್ಯರು ಹಾಜರಿದ್ದರು.

Leave a Comment