• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮತ್ತೆ ಸ್ಥಳಾಂತರಗೊಂಡ ಹೊನ್ನಾವರ ಬಸ್ಟ್ಯಾಂಡ್ ಈಗ ರಿಕ್ಷಾ ಸ್ಟ್ಯಾಂಡ್‍ನಲ್ಲಿ

September 9, 2020 by Lakshmikant Gowda Leave a Comment

ಹೊನ್ನಾವರ – ನೂತನ ಬಸ್ಟ್ಯಾಂಡ್ ನಿರ್ಮಾಣದ ಕೆಲಸ ಆರಂಭವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಗ್ರೌಂಡ್‍ಗೆ ಸ್ಥಳಾಂತರಗೊಂಡು, ನಂತರ ಪೊಲೀಸ್ ಪರವಾನಿಗೆ ಇಲ್ಲದ ಕಾರಣ ಕೆಲವೇ ಗಂಟೆಯಲ್ಲಿ ಪುನ: ಮೊದಲಿದ್ದಲ್ಲಿಗೇ ಬಂದಿದ್ದ ಬಸ್‍ನಿಲ್ದಾಣ ಇದೀಗ ಪಕ್ಕದಲ್ಲೇ ಇದ್ದ ರಿಕ್ಷಾ ಸ್ಟ್ಯಾಂಡ್ ಇದ್ದಲ್ಲಿಗೆ ಬಂದು ಮುಟ್ಟಿದೆ.

watermarked Riksh stand ge stalantaragonda bustand


ಮಂಗಳವಾರ ಬೆಳಿಗ್ಗೆ ನಡೆದ ಈ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಕುಮಟಾ ಮಾರ್ಗದ ಟೆಂಪೋ ಚಾಲಕರು ಕೆಲ ಹೊತ್ತು ವಾಗ್ವಾದಕ್ಕೆ ಮುಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸೂಚನೆ ಸಿಕ್ಕಿತಾದರೂ ಪೊಲೀಸರು ಮಧ್ಯ ಪ್ರವೇಶಿಸಿ ಟೆಂಪೋದವರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ನೀವು ಹೊಂದಿಕೊಂಡು ಹೋಗದಿದ್ದರೆ ಸಮಸ್ಯೆಯಾಗಲಿದೆ ಎನ್ನುವುದನ್ನು ಮನದಟ್ಟುಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ರಿಕ್ಷಾದವರು ಸ್ಟ್ಯಾಂಡ್ ಬಿಟ್ಟು ಬಸ್ಟ್ಯಾಂಡ್ ಪಕ್ಕದಲ್ಲಿದ್ದ ರಸ್ತೆ ಬದಿಯ ಜಾಗಕ್ಕೆ ತೆರಳಿದ್ದಾರೆ.

watermarked IMG 20200908 165638


ಬಸ್ಟ್ಯಾಂಡ್ ನಿರ್ಮಾಣಕ್ಕೆ ಶಿಲಾನ್ಯಾಸವಾಗಿ ಆರೇಳು ತಿಂಗಳು ಕಳೆದ ನಂತರ ಕೆಲಸ ಪ್ರಾರಂಭಿಸಿದ್ದರೂ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಬಸ್‍ನಿಲ್ದಾಣವನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಿರುವ ಕೆ.ಎಸ್.ಆರ.ಟಿ.ಸಿಯ ಮುಂದಾಲೋಚನೆಯಿಲ್ಲದ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
[ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಟೆಂಪೋ ಸ್ಟ್ಯಾಂಡ್, ಟ್ಯಾಕ್ಸಿ ಸ್ಟ್ಯಾಂಡ್‍ಗಳು ಬಸ್‍ನಿಲ್ದಾಣದಿಂದ 500 ಮೀಟರ್ ಅಂತರದಲ್ಲಿರಬೇಕು ಎನ್ನುವ ನಿಯಮವಿದ್ದರೂ ಪಟ್ಟಣದಲ್ಲಿ ಈ ನಿಯಮಗಳಾವುದೂ ಪಾಲನೆಯಾಗಿದ್ದೇ ಇಲ್ಲ. ಆದರೂ ಕಷ್ಟಪಟ್ಟು ದುಡಿದು ತಿನ್ನುವವರ ಹೊಟ್ಟೆಯಮೇಲೆ ಹೊಡೆಯಬಾರದು ಎನ್ನುವ ಕಾರಣಕ್ಕೆ ಸಾರ್ವಜನಿಕರಿಂದಲೂ ಈ ಬಗ್ಗೆ ಯಾವುದೇ ವಿರೋಧವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ. ಖಾಸಗಿ ಟೆಂಪೋದವರು ಸಾರಿಗೆ ಇಲಾಖೆಯವರೊಂದಿಗೆ ಕಿರಿಕ್ ಮಾಡಿಕೊಂಡು 500 ಮೀಟರ್ ಅಂತರದ ನಿಯಮ ಕಡ್ಡಾಯ ಜಾರಿಯಾದರೆ ಅದರಿಂದ ಖಾಸಗಿ ಟೆಂಪೋದವರೇ ಹೆಚ್ಚು ತೊಂದರೆಗೆ ಸಿಲುಕಲಿದ್ದಾರೆ.]

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಕುಮಟಾ ಮಾರ್ಗದ ಟೆಂಪೋ ಚಾಲಕರು, ಕೆ.ಎಸ್.ಆರ.ಟಿ.ಸಿಯ ಮುಂದಾಲೋಚನೆಯಿಲ್ಲದ ನಡೆ ತೀವ್ರ ಟೀಕೆ, ಟೆಂಪೋ ಸ್ಟ್ಯಾಂಡ್, ಟ್ಯಾಕ್ಸಿ ಸ್ಟ್ಯಾಂಡ್‍ಗಳು, ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ, ಪುನ: ಮೊದಲಿದ್ದಲ್ಲಿಗೇ ಬಂದಿದ್ದ ಬಸ್‍ನಿಲ್ದಾಣ, ಪೊಲೀಸ್ ಗ್ರೌಂಡ್‍ಗೆ ಸ್ಥಳಾಂತ, ಬಸ್ಟ್ಯಾಂಡ್ ನಿರ್ಮಾಣಕ್ಕೆ ಶಿಲಾನ್ಯಾಸವಾಗಿ ಆರೇಳು ತಿಂಗಳು, ಬಸ್‍ನಿಲ್ದಾಣದಿಂದ 500 ಮೀಟರ್, ಬಿಗುವಿನ ವಾತಾವರಣ ನಿರ್ಮಾಣ, ಸಾರಿಗೆ ಇಲಾಖೆಯವರೊಂದಿಗೆ ಕಿರಿಕ್

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...