• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆಳುವವರ ಆಸರೆಯಿಲ್ಲದೇ ಅನಾಥ ಮಗುವಾದ ಮಾವಿನಕುರ್ವಾ ರಸ್ತೆ

September 10, 2020 by Lakshmikant Gowda Leave a Comment

ಹೊನ್ನಾವರ ಮಾವಿನಕುರ್ವಾ ಸೇತುವೆ ನಿರ್ಮಾಣವೆಂಬ ಮೊಟ್ಟಗೆ ಕಾವು ಕೊಡಲು ಪ್ರಾರಂಭಿಸಿ ನಾಲ್ಕೈದು ವರ್ಷಗಳೇ ಉರುಳಿದರೂ ಮೊಟ್ಟೆಯೊಡೆದು ಮರಿ ಹೊರಗೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರ ಜೊತೆ ಸುತ್ತಿ ಬಳಸಿ ತಾಲೂಕು ಕೇಂದ್ರವನ್ನು ಸೇರುವುದಕ್ಕಾದರೂ ಇದ್ದ ಖರ್ವಾ ಮಾವಿನಕುರ್ವಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಎರಡು ವರ್ಷಗಳೇ ಕಳೆದರೂ ದುರಸ್ಥಿ ಮಾಡುವ ಮನಸ್ಸು ಜನಪ್ರತನಿಧಿಗಳೆನ್ನಿಸಿಕೊಂಡವರಿಗೆ ಆಗದಿರುವುದು ಈ ಭಾಗದ ಜನರ ದೌರ್ಭಾಗ್ಯ ಎನಿಸುತ್ತಿದೆ.

watermarked 01 08 hnr


ಇತ್ತೀಚೆಗೆ ಮಾವಿನಕುರ್ವಾದ ಸ್ಥಳೀಯ ಮುಖಂಡರೂ ಚುನಾವಣೆ ಸಂದರ್ಭದ ಬೆಂಬಲಿಗರೂ ಎನಿಸಿಕೊಂಡವರ ಜೊತೆ ಹಾಲಿ ಶಾಸಕರ ಸಂಬಂಧ ಹಳಸಿರುವುದು ಕೂಡಾ ರಸ್ತೆ ದುರಸ್ಥಿ ನೆನಗುದಿಗೆ ಬೀಳುವುದಕ್ಕೆ ಕಾರಣ ಎನ್ನುವ ಮಾತು ಜನರ ನಡುವೆ ಸುಳಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಾಜಕೀಯ ಮೇಲಾಟದಲ್ಲಿ ಮಾವಿನಕುರ್ವಾದ ಕೆಲ ಸ್ಥಳೀಯರು ಶಾಸಕರದೇ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರನ್ನು ಮುಂದಿಟ್ಟುಕೊಂಡು ಉಸ್ತುವಾರಿ ಸಚಿವರಿಗೆ ರಸ್ತೆ ರಿಫೇರಿ ಮಾಡಿಕೊಡುವಂತೆ ಮನವಿ ನೀಡಿದ ಘಟನೆಯೂ ನಡೆದು ಹೋಗಿದೆ.
ರಾಜಕೀಯ ಏನೇ ಇರಲಿ ಜನ ಸಾಮಾನ್ಯರು ನಿತ್ಯ ಪಡುತ್ತಿರುವ ಪಾಡು, ಸಾಲ ಸೋಲ ಮಾಡಿ ಸ್ವ ಉದ್ಯೋಗದ ಕನಸಲ್ಲಿ ರಿಕ್ಷಾ, ಬೊಲೆರೋ, ಓಮಿನಿ ಮುಂತಾದ ವಾಹನ ಖರೀದಿಸಿದವರು, ಉದ್ಯೋಗದ ಕಾರಣಕ್ಕೆ ದಿನ ಬೆಳಗಾದರೆ ಬೇರೆ ಬೇರೆ ಊರಿಗೆ ತೆರಳಬೇಕಾದವರು, ಅನಾರೋಗ್ಯಕ್ಕೆ ತುತ್ತಾದವರೆಲ್ಲರೂ ಆಳುವ ವರ್ಗಕ್ಕೆ ಹಿಡಿ ಶಾಪ ಹಾಕಿ ಹತಾಶೆ ಹೊರ ಹಾಕುವುದು ಬಿಟ್ಟರೆ ಬೇರೇನೂ ಮಾಡಲಿಕ್ಕಾಗದೇ ನಿರಾಶರಾಗಿದ್ದಾರೆ. ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ಜನರ ಕಷ್ಟಕ್ಕೆ ಸ್ಪಂದಿಸುವ ಕಾಳಜಿ ಆಳುವವರಿಗೆ ಬರಬೇಕಾಗಿದೆ.

watermarked 01 08 hnr 1

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಉಸ್ತುವಾರಿ ಸಚಿವರಿಗೆ, ಓಮಿನಿ, ಖರ್ವಾ ಮಾವಿನಕುರ್ವಾ ರಸ್ತೆ, ಜೊತೆ ಸುತ್ತಿ ಬಳಸಿ ತಾಲೂಕು ಕೇಂದ್ರ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬೊಲೆರೋ, ಭಾಗದ ಜನರ ದೌರ್ಭಾಗ್ಯ, ಮೊಟ್ಟೆಯೊಡೆದು ಮರಿ ಹೊರಗೆ, ರಸ್ತೆ ದುರಸ್ಥಿ ನೆನಗುದಿಗೆ ಬೀಳುವುದಕ್ಕೆ, ರಸ್ತೆ ರಿಫೇರಿ ಮಾಡಿಕೊಡುವಂತೆ ಮನವಿ, ರಿಕ್ಷಾ, ಸಂಪೂರ್ಣ ಹದಗೆಟ್ಟು, ಸಾಲ ಸೋಲ ಮಾಡಿ, ಸ್ಥಳೀಯರು ಶಾಸಕರದೇ, ಸ್ವ ಉದ್ಯೋಗದ ಕನಸಲ್ಲಿ, ಸ್ವ ಉದ್ಯೋಗದ ಕನಸಲ್ಲಿ ರಿಕ್ಷಾ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...