ಗೋಕರ್ಣ: ಇಲ್ಲಿನ ಬೇಲೆಹಿತ್ಲನ ಕರಿಯಪ್ಪನ ಕಟ್ಟೆಯ ರಸ್ತೆ ನಿರ್ಮಾಣಕ್ಕೆ ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ , ಹಾಗೂ ಎ.ಪಿ. ಎಮ್.ಸಿ ಅಧ್ಯಕ್ಷ ರಮೇಶ ಪ್ರಸಾದ ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೇಲೆಹಿತ್ಲನ ಮುಖ್ಯ ರಸ್ತೆಯಿಂದ ಕರಿಯಪ್ಪನ ಕಟ್ಟೆಯವರೆಗೆ ರಸ್ತೆ ನಿರ್ಮಾಣವಾಗಲಿದೆ. 2019- 2020ನೇ ಸಾಲಿನ ಲೆಕ್ಕ ಶಿರ್ಷಿಕೆಯ ಕುಮಟಾ -ಹೊನ್ನಾವರ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಶಾಸಕ ದಿನಕರ ಶೆಟ್ಟಿ ಕಾಮಗಾರಿ ಮಂಜೂರಿ ಮಾಡಿಸಿದ್ದು, ಶಾಸಕರೇ ನೆರವೇರಿಸಬೇಕಾಗಿದ್ದ ನಿಗದಿಯಾದ ಕಾರ್ಯಕ್ರಮದಲ್ಲಿ ಕೊನೆಯ ಕ್ಷಣ ಅನಿವಾರ್ಯ ತೊಂದರೆಯಿಂದ ಅವರ ಸೂಚನೆ ಮೇರೆಗೆ ಇಲ್ಲನ ಜನಪ್ರತಿನಿಧಿಗಳು ಕಾಮಗಾರಿಗೆ ಚಾಲನೆ ನೀಡಿದರು. ರಸ್ತೆ ನಿರ್ಮಾಣ ಮಾಡಲಿರುವ ಕರ್ನಾಟಕ ಭೂ ಸೇನಾ ನಿಗಮದ (ಕೆ. ಆರ್ . ಐ. ಡಿ ಎಲ್ ) À ಇಂಜೀನಿಯರ ಮಂಜುಶ್ರೀ ಮತ್ತು ಸಿಬ್ಬಂದಿ , ಗ್ರಾಮ ಪಂಚಾಯತ ಮಾಜಿ ಸದಸ್ಯ ಗಣಪತಿ ಗೌಡ ತಲಗೇರಿ , ಬೀಚ್ ಹೊಟೇಲ್ ಯುನಿಯನ್ ಅಧ್ಯಕ್ಷ ಪದ್ಮಾಕರ ಗೌಡ, ನಾಗಾರಜ ಗೌಡ , ಮಾಣೇಶ್ವರ ಗೌಡ , ನಿತ್ಯಾನಂದ ಶೆಟ್ಟಿ , ಸದಾನಂದ ಹೊಸ್ಕಟ್ಟಾ , ಗಣೇಶ ಪಂಡಿತ್ , ನಾಗೇಶ ಗೌq, À ರಾಮಾ ನಾಯ್ಕ ಬೆಲೇಖಾನ , ಶಂಕರ ಗೌಡ ಹೆಗ್ರೆ ,ಗ್ರಾ. ಪಂ. ಮಜಿ ಸದಸ್ಯ ಗಣಪತಿ ಗೌಡ, ಸತೀಶ ದೇಶಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ವೇ. ವಿನಾಯಕ ಚಿತ್ರಿಗಿಮಠ ಪೂಜಾ ಕೈಂಕರ್ಯ ನೆರವೇರಿಸಿದರು.

Leave a Comment