• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಟ್ಟಣದಲ್ಲಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ – ಕಳ್ಳತಕ್ಕೆ ಬಂದವನೆಂದು ತಪ್ಪು ತಿಳುವಳಿಕೆ

September 13, 2020 by Lakshmikant Gowda Leave a Comment

(ಪೊಲೀಸರ ಮದ್ಯಪ್ರವೇಶದಿಂದ ಬಗೆಹರಿದ ಗೊಂದಲ)

ಹೊನ್ನಾವರ –ಪಟ್ಟಣದ ರಾಯಲ್‍ಕೇರಿ ಸುತ್ತಮುತ್ತ ಮೂರ್ನಾಲ್ಕು ದಿನಗಳಿಂದ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಏಕಾಏಕಿ ಮನೆಯೊಂದರ ಒಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಪೊಲೀಸರ ಮದ್ಯಪ್ರವೇಶದಿಂದಾಗಿ ಶಂಕಿತ ವ್ಯಕ್ತಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗುವ ಸಂಭವನೀಯ ಅನಾಹುತ ತಪ್ಪಿದೆ.

watermarked IMG 20200911 WA0047

ಅಪರಿಚಿತ ವ್ಯಕ್ತಿಯೊಬ್ಬ ಕೆಲದಿನಗಳಿಂದ ರಾಯಲ್‍ಕೇರಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಯಾರೋ ಮಾನಸಿಕ ಅಸ್ವಸ್ಥನಿರಬಹುದು ಎಂದು ಸ್ಥಳೀಯರು ನಿರ್ಲಕ್ಷಿಸಿದ್ದರು. ಆದರೆ ಶುಕ್ರವಾರ ರಾತ್ರಿ ಮನೆಯೊಂದರ ಒಳ ಹೊಕ್ಕಿದ ಈತನನ್ನು ಮನೆಯವರು ಹಾಗೂ ನೆರೆಹೊರೆಯವರು ಸೇರಿ ಹಿಡಿದು ಪರಿಶೀಲನೆ ನಡೆಸಿದಾಗ ಬಟ್ಟೆಯ ಗಂಟು ಹಾಗೂ ಚಾಕು ಪತ್ತೆಯಾಗಿದ್ದನ್ನು ಕಂಡು ಕಳ್ಳತನಕ್ಕೇ ಮುಂದಾಗಿದ್ದ ಎಂದು ತಿಳಿದು ಸಾರ್ವಜನಿಕರು ಥಳಿಸಲು ಮುಂದಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿಯನ್ನು ಸಾರ್ವಜನಿಕರಿಂದ ಬಿಡಿಸಿಕೊಂಡು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆತನೊಬ್ಬ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯೆಂದು ತಿಳಿದುಬಂದಿದೆ.

watermarked 02 12 hnr


ಅಪರಿಚಿತರನ್ನು ಅನುಮಾನದಿಂದಲೇ ನೋಡುವ ಜನರು
ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ನಡುವೆಯೇ ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದ, ತಾಲೂಕಿನಲ್ಲಿ ನಡೆದಿದ್ದ 10 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಂದವಾರ ಮೂಲದ ಖತರ್ನಾಕ ಸಹೋದರರಿಬ್ಬರು ಅಡಿಕೆ ವ್ಯಾಪಾರಿಗಳೆಂದು ಹೇಳಿಕೊಂಡು ಊರೂರು ಸುತ್ತುತ್ತಿದ್ದರು, ಎನ್ನುವ ಸಂಗತಿ ಬಹಿರಂಗವಾದ ನಂತರವಂತೂ ಯಾವುದೇ ಏರಿಯಾದಲ್ಲಿ ಅಪರಿಚತರನ್ನು ಕಂಡರೂ ಜನರು ಅವರನ್ನು ಕಳ್ಳರಂತೆ ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಊರೂರು ಅಲೆಯುವ ಪ್ರಾಮಾಣಿಕ ವ್ಯಾಪಾರಿಗಳು, ಯಾವುದೋ ಕೆಲಸಗಳಿಗೆ ಅಪರಿಚಿತ ಸ್ಥಳಗಳಿಗೆ ಬೇಟಿಕೊಡುವ ಅಮಾಯಕರು, ಮಾನಸಿಕ ಅಸ್ವಸ್ಥರು ಪೂರ್ವಾಗ್ರಹಪೀಡಿತ ಸಾರ್ವಜನಿಕರ ಕೋಪಕ್ಕೆ ತುತ್ತಾಗುವ, ಸಾಮೂಹಿಕ ಹಲ್ಲೆಯಂತ ಘಟನೆಗಳಿಗೆ ಕಾರಣವಾಗುವ ಸಾಧ್ಯತೆ ಅಧಿಕವಾಗಿದೆ.

watermarked 01 12 hnr

ರಾಯಲ್‍ಕೇರಿಯಲ್ಲಿ ಕಾಣಿಸಿಕೊಂಡಾತ ಚಿಕ್ಕಮಗಳೂರಿನ ಮಾನಸಿಕ ಅಸ್ವಸ್ಥ
ಶುಕ್ರವಾರ ರಾತ್ರಿ ರಾಯಲ್‍ಕೇರಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕುಬಿದ್ದಾತ ಚಿಕ್ಕಮಗಳೂರು ಮೂಲದ ಮಾನಸಿಕ ಅಸ್ವಸ್ಥ ಎನ್ನುವುದು ಪೊಲೀಸರ ಮದ್ಯಪ್ರವೇಶದಿಂದಷ್ಟೇ ತಿಳಿದು ಬಂದಿದೆ. ಆದರೂ ಇಷ್ಟಾಗುವಷ್ಟರಲ್ಲೇ ಸಾಮಾಜಿಕ ಜಾಲತಾಣದಲ್ಲಿ ರಾಯಲ್‍ಕೇರಿಯಲ್ಲಿ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ, ಕುಂದಾಪುರ ಕಡೆಯಿಂದ ತಂಡವೊಂದು ಹೊನ್ನಾವರದಲ್ಲಿ ಬೀಡುಬಿಟ್ಟಿದೆ. ವಿವಿದೆಡೆ ಕಳ್ಳತಕ್ಕೆ ಹೊಂಚುಹಾಕುತ್ತಿದ್ದಾರೆನ್ನುವ ತಲೆಬುಡವಿಲ್ಲದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತಾಲೂಕಿನ ಜನರನ್ನು ಭಯಭೀತಗೊಳಿಸಿದ ಘಟನೆಯೂ ನಡೆದು ಹೋಗಿದೆ.
[ಶುಕ್ರವಾರ ರಾತ್ರಿ ರಾಯಲ್‍ಕೇರಿಯಲ್ಲಿ ವ್ಯಕ್ತಿಯೊಬ್ಬನ ಅಸಹಜ ಎನಿಸುವ ವರ್ತನೆಯಿಂದ ಅನುಮಾನಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಮಾನಸಿಕ ಅಸ್ವಸ್ಥ ಎನ್ನುವುದು ದೃಢವಾಗಿದ್ದು ಆತನ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಸಾರ್ವಜನಿಕರು ಸುಳ್ಳು ಸುದ್ದಿಗೆ ಕಿವಿಗೊಟ್ಟು ಭಯ ಪಡಬೇಕಾದ ಅಗತ್ಯವಿಲ್ಲ. – ಶಶಿಕುಮಾರ್ ಸಿ.ಆರ್, ಪಿ.ಎಸ್.ಐ ಹೊನ್ನಾವರ]

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಅಪರಿಚಿತ ಸ್ಥಳಗಳಿಗೆ ಬೇಟಿಕೊಡುವ ಅಮಾಯಕರು, ಊರೂರು ಅಲೆಯುವ ಪ್ರಾಮಾಣಿಕ ವ್ಯಾಪಾರಿಗಳು, ಒಳ ಹೊಕ್ಕಿದ ಈತನನ್ನು ಮನೆಯವರು, ಪೂರ್ವಾಗ್ರಹಪೀಡಿತ, ಭಯಭೀತಗೊಳಿಸಿದ ಘಟನೆ, ಮನೆಯೊಂದರ ಒಳಗೆ ಪ್ರವೇಶಿಸಿ, ಮಾನಸಿಕ ಅಸ್ವಸ್ಥರು, ರಾತ್ರಿ ಮನೆಯೊಂದರ, ರೆಹೊರೆಯವರು ಸೇರಿ ಹಿಡಿದು ಪರಿಶೀಲನೆ, ಶಂಕಿತ ವ್ಯಕ್ತಿ, ಸಾಮೂಹಿಕ ಹಲ್ಲೆಯಂತ ಘಟನೆ, ಸಾರ್ವಜನಿಕರ ಕೋಪಕ್ಕೆ ತುತ್ತಾಗುವ, ಸಾರ್ವಜನಿಕರಿಂದ ಥಳಿತ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,038 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...