ಗೋಕರ್ಣ: ಬರಲಿರುವ ಗ್ರಾಮ ಪಂಚಾಯತ ಚುಣಾವಣೆಯ ಕುರಿತು ಜೆ.ಡಿ.ಎಸ್. ಪಕ್ಷದ ಪೂರ್ಭಾವಿ ಸಭೆಯನ್ನು ಜಿಲ್ಲಾ ಪಂಚಾಯತ ಸದದಸ್ಯ ಮತ್ತು ಜೆ.ಡಿ.ಎಸ್ . ಮುಖಂಡ ಪ್ರದೀಪ ನಾಯಕ ದೇವರಭಾವಿ ಮನೆಯಲ್ಲಿ ರವಿವಾರ ಕರೆಯಲಾಯಿತು.ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಪಂಚಾಯತ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚುಣಾವಣೆ ಅಭ್ಯರ್ಥಿಗಳ ಆಯ್ಕೆಯನ್ನಾ ಮಾಡುವ ಜವಾಬ್ದಾರಿಯನ್ನು ಪ್ರದೀಪ ನಾಯಕ ದೇವರಭಾವಿಯವರಿಗೆ ವಹಿಸಲಾಯಿತು. ಮುಖಂಡರ ಆಯ್ಕೆ ಮಾಡಿದ ಅಭ್ಯರ್ಥಿಗಳ ಗೆಲ್ಲುಸುವುದಕ್ಕೆ ಒಮ್ಮತದ ತಿರ್ಮಾನ ಕೈಗೊಳ್ಳಲಾಯಿತು. ಪಕ್ಷದ ಮುಖಂಡರುಗಳ ಮಧ್ಯೆ ಕೆಲವು ದಿನಗಳಿಂದ ಇದ್ದ ಗೊಂದಲವನ್ನು ಈ ಸಂಧರ್ಭದಲ್ಲಿ ಪರಿಹರಿಸಲಾಯಿತು. ಈ ಭಾಗದ ಚುಣಾವಣೆಯ À ಉಸ್ತುವಾರಿಯನ್ನು ಪ್ರದೀಪ ನಾಯಕರವರಿಗೆ ವಹಿÀಸಲು ನಿರ್ಧರಿಸಲಾಯಿತು.

ಮೀಸಲಾತಿ ಅನುಗುಣª.Áಗಿ ಸದಸ್ಯರ ನಿಲ್ಲಿಸಲು ಮತ್ತು ಪಕ್ಷದ ಗೆಲುವಿಗಾಗಿ ಶ್ರಮಿಸಲು ಎ.ಪಿ.ಎಮ್.ಸಿ. ಸದಸ್ಯ ಮನೋಹರ ಗೌಡ ಪಕ್ಷದ ಸಂಘಟನೆ ಕುರಿತು ಮಾತನಾಡಿದರು. ಚುಣಾವಣೆ ಕುರಿತು ಅವರ ರೂಪರೇಷೆ ಹೇಗೆ ಸಿದ್ದಪಡಿಸಬೇಕು ಎಂಬುದನ್ನು ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ವಿವರಿಸಿದರು. ಪಕ್ಷದ ಸಂಘಟನೆ ಹಾಗೂ ಜನ ಬೆಂಬಲ ಪಡೆಯಲು ಹಲವು ವಿಚಾರವನ್ನು ನಾಗರಾಜ ತಾಂಡೇಲ , ನಾಗೇಂದ್ರ ಪಡ್ತಿ , ಗಜಾನನ ಆಚಾರಿ ,ಹಸನ್ ಸಾಬ್ ,ಹರ್ಷಾ ಗಾಂವಕರ , ರಾಜು ಟಿ. ಗೌಡ , ನಾಗೇಶ ರಾಯ್ಕರ್ ಪ್ರದೀಪ ನಾಯಕ ಬಂಕಿಕೊಡ್ಲ , ಪರಮೇಶ್ವರ ಎಚ್. ಗೌಡ, ಪೀಟರ ಫರ್ನಾಂಡಿಸ್, ಸಂತೋಷ ನಾಯಕ ಬಂಕಿಕೊಡ್ಲ ವಾಮನ್ ಗೌಡ ಕಡಿಮೆ ,ತಮ್ಮದೆ ಆದ ಅಭಿಪ್ರಾಯ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಸಿದ್ದ ಪ್ರದೀಪ ನಾಯಕ ಮಾತನಾಡಿ ಎಲ್ಲಾ ಕಾರ್ಯಕರ್ತರ ಅಭಿಪ್ರಾಯದಂತೆ ಒಟ್ಟಾಗಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿ ಅರಂತೆ ಕೆಲಸ ಮಾಡ ಬೇಕು ಎಂದು ಕರೆ ನೀಡಿದರು.

ತಾಲೂಕಾ ಪಂಚಾಯತ ಸದಸ್ಯ ರಾಜೇಶ ನಾಯಕ ಪಕ್ಷದ ಅಭ್ಯರ್ಥಿಗಳನ್ನಾ ಗೆಲ್ಲಿಸುವಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡು ಪಕ್ಷದ ನಿಲ್ಲಿಸಿದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು. ನಿವೃತ್ತ ಶಿಕ್ಷಕ ವಿಠ್ಠಲ ಪೇರುಮನೆ ಸ್ವಾಗತಿಸಿದರು ವೆಂಕಣ್ಣ ಗೌಡ ಕಡಿಮೆ ವಂದನಾರ್ಪಣೆ ಮಾಡಿದರು.
Leave a Comment