ಸ್ವಚ್ಚ ಹೊನ್ನಾವರದ ಪರಿಕಲ್ಪನೆಗೆ ಪಟ್ಟಣ ವ್ಯಾಪ್ತಿಯ ಅಸರ್ಮಪಕ ಶೌಚಲಯದ ವ್ಯವಸ್ಥೆ ಮುಳುವಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು ಸರ್ಕಾರ ಬದಲಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಬದಲಾದರೂ, ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

ಹೊನ್ನಾವರದ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಬೀದಿದೀಪ, ಕುಡಿಯುವ ನೀರು, ಸಮಸ್ಯೆ ಜೊತೆ ಸ್ವಚ್ಚ ಹೊನ್ನಾವರ ಪರಿಕಲ್ಪನೆಗೆ ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಶೌಚಾಲಯ ಸಮಸ್ಯೆ ದಶಕಗಳಿಂದ ಸಮಸ್ಯೆ ಆಗಿಯೇ ಕಾಡುತ್ತಿದೆ. ಪಟ್ಠಣ ಪಂಚಾಯತಿ ಆವರಣದಲ್ಲಿ ಅಳವಡಿಸಿದ ನಾಮಫಲಕದಲ್ಲಿ ನಮೊದಾದಂತೆ ಪಟ್ಟಣ ವ್ಯಾಪ್ತಿಯ ಶೌಚಾಲಯದ ಸಂಖ್ಯೆ 2 ಮಾದರಿಯದು ಸೇರಿ ಒಟ್ಟು 60 ಶೌಚಲಯಗಳು ಇದೆ ಎಂದು ನಮೊದಿಸಿದ್ದಾರೆ. ಇದರಲ್ಲಿ ಬಳಕೆಗೆ ಬರುವುದು ಎಷ್ಟು, ಸುಸಜ್ಜಿತವಾಗಿರುವುದು ಎಷ್ಟು? ಎನ್ನುವುದು ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಶೌಚಾಲಯ ನೋಡಲು ಸಾಧ್ಯವಾಗದ ಮುರಿದು ಬಿಳುವ ಸ್ಥಿತಿ ಎದುರಾಗಿದೆ. ಕರ್ಕಿ ಸಮೀಪ ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯ ಹೊರತುಪಡಿಸಿ ಉಳಿದ 3 ಶೌಚಾಲಯ ಶುದ್ದಿಕರಣವೇ ಕಾಣದಂತಿದೆ. ಇನ್ನು ಹೊರಗಡೆಯಿಂದ ನೋಡಿದಾಗ ಸುಸಜ್ಜಿತವಾಗಿ ಕಾಣುವ ಶೌಚಾಲಯ ಒಳಗಡೆ ನೀರು ಕಾಣದ ಸ್ಥಿತಿ ತಲುಪಿದೆ. ಹೆದ್ದಾರಿ ಪಕ್ಕದಲ್ಲಿ ಪುರುಷ ಮಹಿಳೆಗೆ ಎರಡು ಶೌಚಾಲಯ ಇದ್ದರೂ ಅಷ್ಟೊಂದು ಸಮರ್ಪಕವಗಿಲ್ಲ.ಕÀರ್ನಲ ಹಿಲ್ ಸಮೀಪದ ಶೌಚಾಲಯವು ಇದಕ್ಕೆ ಭಿನ್ನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವುದರಿಂದ ಇದು ಇದ್ದರೂ ಹೆಚ್ಚಿನವರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.
ಇನ್ನೂ ಪ್ರಮುಖವಾಗಿ ಜನನಿಭಿಡ ಪ್ರದೇಶವಾದ ತಹಶೀಲ್ದಾರ ಕಛೇರಿಯ ಸಮೀಪದಲ್ಲಿ ಇರುವ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ತಾಲೂಕ ಪಂಚಾಯತ ಎದುರು ಹಾಗೂ ಪ್ರಭಾತನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅನೂಕೂಲವಾಗಬೇಕಿದ್ದ ಶೌಚಾಲಯದ ಸುತ್ತಲೂ ಮುಳ್ಳಿನ ಗಿಡಗಳು ತಲೆ ಎತ್ತಿದೆ. ಇದು ಹೆದ್ದಾರಿ ಪಕ್ಕದ ಸ್ಥಿತಿಯಾದರೆ ಪಟ್ಟಣದ ಒಳಭಾಗದ ಸ್ಥಿತಿ ಇದಕ್ಕಿಂತಲೂ ಕಡೆಯಾಗಿದೆ. ಈ ಹಿಂದೆ ವಾರದ ಸಂತೆ ಹಗೂ ಸದ್ಯ ಮೀನು ಮಾರುಕಟ್ಟೆ ಹೊಂದಿರುವ ಬಂದರ ವ್ಯಾಪ್ತಿಯ ಶೌಚಾಲಯದ ಸ್ಥಿತಿ ಸಂಪೂರ್ಣ ಹಾಳಾಗಿದ್ದು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸ್ವಚ್ಚತೆಯ ಬಗ್ಗೆ ಇಡೀ ಪಟ್ಟಣಕ್ಕೆ ಬುದ್ದಿ ಹೇಳುವ ಜೊತೆ ಮಾದರಿಯಾಗಬೇಕಾದ ಪಟ್ಟಣ ಪಂಚಾಯತ ನೈತಿಕತೆ ಕಳೆದುಕೊಂಡಿದೆ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

…………………………………………………………..
ಶೌಚಾಲಯ ನಿರ್ವಹಣೆಗಾಗಿ ಎರಡು ಸಿಬ್ಬಂದಿಗಳನ್ನು ಪಟ್ಟಣ ಪಂಚಾಯತಿಯಿಂದ ನಿಯೋಜಿಸಲಾಗಿದೆ. ಪಟ್ಟಣ ವ್ಯಾಪ್ತಿಯ ಶೌಚಾಲಯ ಸ್ವಚ್ಚತೆ ಸಮಸ್ಯೆ ಸರಿಪಡಿಸುವಲ್ಲಿ ಮತ್ತೊಮ್ಮೆ ಸಿಬ್ಬಂದಿಗೆ ಸೂಚಿಸಿ ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತೇನೆ.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ.
ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬಂದಾಗ ಶೌಚಾಲಯ ಸಮಸ್ಯೆ ಎದ್ದು ಕಾಣುತ್ತಿದೆ. ಗ್ರಾಮೀಣ ಭಾಗಕ್ಕೆ ವಾರಕೊಮ್ಮೆ ಬಂದು ಸ್ವಚ್ಚತೆ ಪಾಠ ಹೇಳುವ ಅಧಿಕಾರಿಗಳು, ಪಟ್ಟಣ ಪ್ರದೇಶದ ಚರಂಡಿ ಸ್ವಚ್ಚತೆ, ಶೌಚಾಲಯದ ಸ್ಥಿತಿಗತಿ ನೋಡಿದರೆ, ನಮಗೆ ಜಾಗ್ರತಿ ಮೂಡಿಸುವ ಶ್ರಮ ಇಲ್ಲಿಯೆ ವ್ಯಯ ಮಾಡಿದರೆ ಒಳ್ಳೆಯದು.
ಸುಬ್ರಹ್ಮಣ್ಯ ಸಾಲ್ಕೋಡ್
ದಿನಸಿ ತರಕಾರಿ ಖರೀದಿ ಹಾಗೂ ಸರ್ಕಾರದ ಯೋಜನೆಯ ಸೌಲಭ್ಯ, ಬ್ಯಾಂಕ್ ಮತ್ತಿತರ ಕಾರ್ಯಕ್ಕೆ ಪಟ್ಟಣಕ್ಕೆ ಬಂದಾಗ ತುಂಬಾ ಸಮಸ್ಯೆ ಉಂಟಾಗುತ್ತದೆ. ಜನಪ್ರತಿನಿಧಿಗಳು ಅಧಿಕಾರಿಗಳು ಬದಲಾದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ. ಮುಂದೆಯಾದರೂ ಈ ಬಗ್ಗೆ ಗಮನಹರಿಸಬೇಕಿದೆ
ವಿನಾಯಕ ಗೇರುಸೊಪ್ಪಾ


Leave a Comment