• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ಹೋಬಳಿ ಮಟ್ಟದ ಪಿಂಚಣೆ ಅದಾಲತಗೆ ಚಾಲನೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ

September 25, 2020 by Vishwanath Shetty Leave a Comment

ಪ್ರತಿ ಆರು ತಿಂಗಳಿಗೊಮ್ಮೆ ರೈತರು ತಮ್ಮ ಪಹಣಿ ಪತ್ರಿಕೆಯನ್ನು ಹೊಸದಾಗಿ ಪಡೆದು ಪಹಣಿ ಪತ್ರಿಕೆಯಲ್ಲಿನ ದಾಖಲಾತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕೆಂದು ಹೊನ್ನಾವರ ತಾಲೂಕಾ ದಂಡಾಧಿಕಾರಿ ವಿವೇಕ್ ಶೇಣ್ವಿ ಸಲಹೆ ನೀಡಿದರು.           

watermarked IMG 20200925 WA0162

ಅವರು ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಹೊನ್ನಾವರ ಹೋಬಳಿಮಟ್ಟದ ಕಂದಾಯ ಅದಾಲತ್ ಸಭೆ ನಡೆಸಿ ರೈತರ ಅಹವಾಲುಗಳಿಗೆ ಸ್ಪಂದಿಸಿದರು.               

  ಪಹಣಿಪತ್ರಿಕೆಗಳು ಗಣಕೀಕೃತಗೊಂಡ ತರುವಾಯ   ಪಹಣಿ ಪತ್ರಿಕೆಗಳಲ್ಲಿನ ಲೋಪದೋಷಗಳನ್ನು ಸಕಾಲದಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೇ ಗ್ರಾಮೀಣರು ತಮ್ಮ ಗ್ರಾಮದಲ್ಲೇ ಪಹಣಿ ಪತ್ರಿಕೆಗಳನ್ನು ಸಕಾಲದಲ್ಲಿ ಪಡೆಯಬಹುದಾಗಿದೆ.           

 ಬೆಳೆ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳನ್ನು ರೈತರ ಮನೆಬಾಗಿಲಿನಲ್ಲೆ ಪಡೆಯುವಂತೆ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.         

ಪಹಣಿಪತ್ರಿಕೆಗಳಲ್ಲಿ ಲೋಪದೋಷ ತಿದ್ದುಪಡಿ, ದುರಸ್ತಿ‌,  ಸೇರ್ಪಡೆ  ಮುಂತಾದವುಗಳನ್ನು ರೈತರಿರುವಲ್ಲೆ ತೆರಳಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪಿಂಚಣಿದಾರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ.           

ಕೆಲವು ಪ್ರಕರಣಗಳ ಇತ್ಯರ್ಥದ ವ್ಯಾಪ್ತಿಯು ಉಪವಿಭಾಗಾಧಿಕಾರಿಗಳಿಗೆ ಸೇರಿದ್ದಾಗಿದೆ. ಮುಂದಿನ ದಿನದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೃಹತ್ ಕಂದಾಯ ಅದಾಲತ್ ನಡೆಸಲಾಗುವುದು ಎಂದು ಅವರು ಹೇಳಿದರು.               

  ಸಭೆಯಲ್ಲಿ ಆರು ಪಿಂಚಣಿದಾರ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಮೂವತ್ತೆರಡು ಭೂಮಾಲೀಕರ ಪಹಣಿ ಪತ್ರಿಕೆಗಳ ಲೋಪದೋಷಗಳಿಗೆ ಪರಿಹಾರ ಕಲ್ಪಿಸಲಾಯಿತು.   ಗ್ರಾ.ಪಂ. ಆಡಳಿತಾಧಿಕಾರಿ ಮಹೇಶ್, ಗ್ರಾ.ಪಂ.ಮಾಜಿ  ಸದಸ್ಯ ಎಂ.ಜಿ.ಹೆಗಡೆ ಕಡ್ಲೆ, ಪಿಡಿಓ ವನಮಾಲಾ ನಾಯ್ಕ,ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರಾದ ಅಸ್ಲಂ ಗಣಿ ಮತ್ತಿತರ ಅಧಿಕಾರಿಗಳು ಹಾಜರಿದ್ದು  ಸ್ಪಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಕೃಷಿ Tagged With: Addition, beḷe sāla, Crop Loan, daṇḍādhikāri vivēk śēṇvi, durasti‌, hōbaḷimaṭṭada kandāya adālat sabhe, Imperfect Correction, Kadle Grama Panchayat Sabha, kaḍle grāmapan̄cāyat sabhābhavana, kandāya adālat sabhe, Lōpadōṣa tiddupaḍi, pahaṇipatrikegaḷalli lōpadōṣa, Repair, sērpaḍe, ಕಡ್ಲೆ ಗ್ರಾಮಪಂಚಾಯತ್ ಸಭಾಭವನ, ಕಂದಾಯ ಅದಾಲತ್ ಸಭೆ, ದಂಡಾಧಿಕಾರಿ ವಿವೇಕ್ ಶೇಣ್ವಿ, ದುರಸ್ತಿ‌, ಪಹಣಿಪತ್ರಿಕೆಗಳಲ್ಲಿ ಲೋಪದೋಷ, ಬೆಳೆ ಸಾಲ, ಲೋಪದೋಷ ತಿದ್ದುಪಡಿ, ಸೇರ್ಪಡೆ, ಹೋಬಳಿಮಟ್ಟದ ಕಂದಾಯ ಅದಾಲತ್ ಸಭೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...