ಖರ್ವಾ ಸಮೀಪ ಮರಳು ಚೆಕ್ ಪೋಸ್ಟನಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೈಬಿಡುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ಪಂಚಾಯತ ಸಿಬ್ಬಂದಿಗಳೂ ಮನವಿ ಸಲ್ಲಿಸಿದರು.

ಈಗಾಗಲೇ 29ಕ್ಕು ಅಧಿಕ ಇಲಾಖೆಯ ಮೇಲ್ವಿಚಾರಣೆ ನಿಭಾಯಿಸುತ್ತಿದ್ದು, ಇದೀಗ ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ ಹಲವು ಕಾರ್ಯ ಮಾಡುತ್ತಿದ್ದೇವೆ. ಇಲಾಖೆಯ ಹಲವು ಗುರಿಗಳನ್ನು ಸಂಕಷ್ಟದ ಸಮಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ ಗ್ರಾಮ ಮಟ್ಟದ ಆರೋಗ್ಯ ಸುರಕ್ಷತೆ, ನಿಯಮ ಪಾಲನೆ, ಮಾಸ್ಕ ಹಾಗೂ ಸಾಮಾಜಿಕ ಅಂತರ, ಕ್ವಾರಟೈಂನ್ ಸೇರಿದಂತೆ ವಿವಿಧ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಸಿಬ್ಬಂದಿಗಳ ಕೊರತೆಯ ನಡುವೆ ಆಸ್ತಿಗಳ ಸರ್ವೆ ಕಾರ್ಯ ಮಾಡುತ್ತಿದ್ದು, ಇದೀಗ ಅಕ್ರಮ ಮರಳು ಸಾಗಾಟ ಹಿನ್ನಲೆಯಲ್ಲಿ ಚೆಕ್ ಪೋಸ್ಟ ಬಳಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲುಕಷ್ಟ ಸಾಧ್ಯವಾಗಿದ್ದು, ಈಗಾಗಲೇ ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುವಂತೆ ತಹಶೀಲ್ದಾರ ಮೂಲಕ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳು ಮನವಿ ಸಲ್ಲಿಸಿದರು.
ಉಪತಹಶೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿದರು.
ಪಂಚಾಯತ ರಾಜ್ಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿ.ಎ.ಪಟಗಾರ, ಜಿಲ್ಲಾ ಖಜಾಂಚಿ ಜಿ.ಎಲ್.ನಾಯ್ಕ, ಜಿಲ್ಲಾ ಪ್ರತಿನಿಧಿ ಮಹೇಶ ನಾಯ್ಕ, ಕಿರಣ ಕುಮಾರ್ ಎಂ.ಜಿ, ಅಣಪ್ಪ ಮುಕ್ರಿ, ರಾಧಾಕೃಷ್ಣ ನಾಯ್ಕ, ಮತ್ತಿತರರು ಹಾಜರಿದ್ದರು.
Leave a Comment