ಹೊನ್ನಾವರ; ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯು ರಾಜ್ಯವಲಯದ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಎಫ್.ಆರ್.ಪಿ ದೋಣಿ (೧೦ ಮೀಟರ್ ಉದ್ದದವರೆಗೆ) , ಇಂಜಿನ್ (೮-೧೦ ಹೆಚ್.ಪಿ), ಬಲೆ ಮತ್ತು ಶಾಖನಿರೋಧಕ ಪೆಟ್ಟಿಗೆ ಖರೀದಿಸಲು ಸಹಾಯಧನಕ್ಕಾಗಿ ತಾಲ್ಲೂಕಿನ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ೨೦-೧೦-೨೦೨೦ ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಮೀನುಗಾರಿಕಾ ಸಹಾಯಕ ನಿರ್ದೇಶಕರು (ಶ್ರೇಣಿ-೨) ಹೊನ್ನಾವರ ಕಛೇರಿ ಸಂಪರ್ಕಿಸಬಹುದು.
Leave a Comment