ಹಳಿಯಾಳ:- ಸೋಮವಾರ ಹಳಿಯಾಳದಲ್ಲಿ ಕೊರೊನಾ ಸೊಂಕಿನಿಂದ 9 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದರೇ 5 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ.
ಹಳಿಯಾಳದಲ್ಲಿ-2, ಮುರ್ಕವಾಡ, ಬಿಕೆ ಹಳ್ಳಿ ಹಾಗೂ ಅರ್ಲವಾಡ ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ 12 ಕ್ಕೆ ಬಂದು ತಲುಪಿರುವುದು ಹಳಿಯಾಳಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಳಿಯಾಳ ತಾಲೂಕಿನ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 626 ಇದ್ದರೇ ಗುಣಮುಖರಾದವರ ಸಂಖ್ಯೆ 599 ಕ್ಕೆ ತಲುಪಿದೆ. ಸದ್ಯ ತಾಲೂಕಿನಲ್ಲಿ 12 ಜನ ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಹೌಸ್ ಐಸೋಲೆಷನ್ ನಲ್ಲಿ 9 ಜನ ಮತ್ತು ಕೊವಿಡ್ ಕೇರ್ ಸೆಂಟರನಲ್ಲಿ 3 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
Leave a Comment