ಹೊನ್ನಾವರ – ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ ಮದ್ದು ಗುಂಡುಗಳಿಗೆ ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ 7 ಮಂದಿ ಯೋಧರನ್ನು ಮಾಗೋಡದ ಧರ್ಮಜ್ಯೋತಿ ಮಹಿಳಾ ವಾಹಿನಿಯವರು ಗೌರವಿಸಿ ಸನ್ಮಾನಿಸಿದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸೈನಿಕರ ಬಗೆಗಿರುವ ಕಾಳಜಿ ಅಭಿಮಾನ ಹೆಚ್ಚುತ್ತಿರುವ ದ್ಯೋತಕವಾಗಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಉತ್ತರದ ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ ಶೀಥದಲ್ಲಿಯೂ ಮೈಯೆಲ್ಲಾ ಕಣ್ಣಾಗಿ ಗಡಿ ಕಾಯ್ದ ಭಟ್ಕಳದ ದಿನೇಶ ಬೇಲೆಗೆದ್ದೆ, ಸರ್ಪನಕಟ್ಟೆಯ ಸತೀಶ ನಾಯ್ಕ, ಬೈಲೂರಿನ ಉಮೇಶ ದೇವಾಡಿಗ. ಬಸ್ತಿಯ ಹನ್ಮಂತ ನಾಯ್ಕ, ಭಟ್ಕಳದ ಜಗಮೋಹನ ದೇವಾಡಿಗ, ಕುಮಟಾದ ಗಜು ನಾಯ್ಕ, ಹೆಗಡೆಯ ಶಾಂತಾರಾಮ ನಾಯ್ಕ ಮಹಿಳಾ ವಾಹಿನಿಯ ಗೌರವ ಸ್ವೀಕರಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬಾಂದೇಕರ್, ನಿವೃತ್ತ ಯೋದ ರಾಜೇಶ ನಾಯ್ಕ, ವಿನಾಯಕ ನಾಯ್ಕ ಮೂಡ್ಕಣಿ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಮಹಿಳಾ ವಾಹಿನಿಯ ಅಧ್ಯಕ್ಷೆ ಮಮತಾ ನಾಯ್ಕ ಹಾಗೂ ಸದಸ್ಯೆಯರು ಕಾರ್ಯಕ್ರಮ ಸಂಘಟಿಸಿದ್ದರು.
Leave a Comment