ಹೊನ್ನಾವರ : ಸತತ ನಾಲ್ಕು ಬಾರಿ ನನ್ನನ್ನು ವಿಧಾನ ಪರಿಷತ್ ಪ್ರವೇಶಿಸಲು ಕಾರಣರಾದ ಉತ್ತರಕನ್ನಡದ ಪದವೀಧರ ಮತದಾರರನ್ನು ನಾನೆಂದೂ ಮರೆಯಲಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ನುಡಿದರು.

ಅವರು ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಪದವೀಧರ ಮತದಾರರು, ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂದು ಕೊಂಡಾಡಿದರು. ಈ ಭಾರಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಡಾ|| ಕುಬೇರಪ್ಪನವರು ಹೋರಾಟ ಮನೋಬಾವನೆವುಳ್ಳವರು ಎಂದರು. ಸತತ ನಲವತ್ತು ವರುಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಧೀಮಂತ ನಾಯಕ ಎಂದರು. ಕಾರಣ ಇಂತಹ ವ್ಯಕ್ತಿಗಳು ಮಾತ್ರ ವಿಧಾನ ಪರಿಷತ್ ಪ್ರವೇಶಿಸಲು ಸೂಕ್ತ ಅಭ್ಯರ್ಥಿಯಾಗಿದ್ದು, ಡಾ|| ಕುಬೇರಪ್ಪನವರಿಗೆ ಮತ ನೀಡುವಂತೆ ಪದವೀಧರರಲ್ಲಿ ಮನವಿ ಮಾಡಿದರು.
ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಅಲೆ ಏಳುತ್ತಿದ್ದು, ಲಾಕ್ಡೌನ್ ಸಂದರ್ಭದಲ್ಲಿ ದೇಶದ ಜನ ಮೋದಿ ಆಡಳಿತವನ್ನು ಅವಲೋಕಿಸಿದ್ದಾರೆ ಎಂದರು. ಬರೆ ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಏರಿದ ಮೋದಿ ಸರ್ಕಾರದ ಆಡಳಿತದಿಂದ ಜನ ಭ್ರಮನಿರಸನಗೊಂಡಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ವಾಪಸಾತಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆಂದು ಹೇಳಿದ ಪ್ರಧಾನಿ ಮೋದಿ ಈಗ ಮಾಡುತ್ತಿರುವುದೇನು ಎಂದು ಪ್ರಶ್ನಿಸಿ, ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ಇದು ಸೂಕ್ತ ಸಮಯವೆಂದು ಎಚ್.ಕೆ. ಪಾಟೀಲ್ ನುಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮಂಕಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಜಿ.ಜಿ. ಶಂಕರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಬೀಮಣ್ಣ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಮಂಕಿ ಬಿ.ಸಿ.ಸಿ. ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ, ಎಸ್.ಕೆ. ಭಾಗ್ವಾತ, ಅಬ್ಬಾಸ ತೋನ್ಸೆ, ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಮುಖಂಡರಾದ ಬಾಲು ನಾಯ್ಕ, ಗಣಪಯ್ಯ ಗೌಡ, ಕೃಷ್ಣ ಗೌಡ, ಇನ್ನು ಮುಂತಾದವರು ಪಾಲ್ಗೋಂಡಿದ್ದರು.
Leave a Comment