ಹೊನ್ನಾವರ – ತಾಲೂಕಿನ ಕೆ.ಇ.ಬಿ ಎದುರು ಇರುವ ಮಾರಿಕಾಂಬ ಟಿಫಿನ್ ಸೆಂಟರ್‍ಗೆ ಶಾಸಕ ದಿನಕರ ಶೆಟ್ಟಿ ಬೇಟಿ ನೀಡಿ ಟೀ ಕುಡಿದರು. ಇದರಲ್ಲೇನು ವಿಶೇಷ ಅಂತೀರಾ..? ಮಾರಿಕಾಂಬಾ ಟಿಫಿನ್ ಸೆಂಟರ್ ನಡೆಸುತ್ತಿರುವ ಸಂತೋಷ ಭಂಡಾರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿನಕರ ಶೆಟ್ಟಿ ಪರವಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರವೂ ತನ್ನ ಗೆಲುವಿಗೆ ಶ್ರಮವಹಿಸಿದ್ದ ಕಾರ್ಯಕರ್ತನನ್ನು ಮರೆಯದೇ ನೆನಪುಮಾಡಿಕೊಂಡು ಬೇಟಿ ಮಾಡಿ ಹುರಿದುಂಬಿಸಿದ ನಡೆ ಮೆಚ್ಚುಗೆಗೆ ಪಾತ್ರವಾಯಿತು. ತನ್ನ ಪುಟ್ಟ ಹೊಟೇಲ್‍ಗೆ ಶಾಸಕರು ಬಂದು ಟೀ ಕುಡಿದು ಪ್ರೋತ್ಸಾಹದ ಮಾತನಾಡಿರುವುದು ನನಗೆ ಅತೀವ ಖುಷಿಯನ್ನುಂಟುಮಾಡಿದೆ ಎಂದಿದ್ದಾರೆ ಸಂತೋಷ ಭಂಡಾರಿ.

Leave a Comment