ಹೊನ್ನಾವರ ಪಟ್ಟಣದಲ್ಲಿ ಒಳಚರಂಡಿ ಕರ್ಮಕಾಂಡ ಇಂದು ನಿನ್ನೆಯದಲ್ಲ. ನಾಲ್ಕು ವರ್ಷದಿಂದ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಡುವ ಒಳಚರಂಡಿ ಯೋಜನೆ ಪಟ್ಟಣದ ನಿವಾಸಿಗಳಿಗೆ ಸಮಸ್ಯೆ ಆಗಿ ಕಾಡುತ್ತಿದೆ. ಸರ್ಕಾರ ಬದಲಾಗಿ ಜನಪ್ರತಿನಿಧಿಗಳು ಬದಲಾದರೂ ಈ ಸಮಸ್ಯೆ ಮಾತ್ರ ಬದಲಾಗಿಲ್ಲ. ಪಟ್ಟಣದಲ್ಲಿ ಈಗಲೂ ರಸ್ತೆ ಹೊಂಡಮಯವಾಗಿದ್ದು, ಒಳಚರಂಡಿ ಯೋಜನೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಂದು ಬಾಗದಲ್ಲಿ ಕೆಲಸ ಆರಂಭಿಸಿ ಕೆಲ ದಿನ ಬಿಟ್ಟು, ಮತ್ತೊಂದಡೆ ಕೆಲಸ ಆರಂಭಿಸುತ್ತಾರೆ. ನೀಲಿನಕ್ಷೆ ಸರಿ ಇಲ್ಲ. ಇವರು ಗುರುತು ಮಾಡುವ ಸ್ಥಳ ಒಂದು ಕೆಲಸ ಮಾಡುವ ಸ್ಥಳ ಇನ್ನೊಂದು, ಮಾಡಿದ ಕೆಲಸ ಕಳಪೆ ಎನ್ನುವ ಆರೋಪವು ಇದೆ. ಈ ಮಧ್ಯೆ ಒಂದು ಕಡೆ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಕಾರ್ಯ ಎರಡು ವರ್ಷದ ಬಳಿಕ ಮತ್ತೆ ಆರಂಭಿಸಿರುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.


ಕಳೆದ ಹಲವು ವರ್ಷದಿಂದ ರಸ್ತೆ ದುವ್ಯವಸ್ಥೆಗೆ ಕಾರಣವಾಗಿರುವ ಒಳಚರಂಡಿ ಕರ್ಮಕಾಂಡ ಮತ್ತೆ ಪಟ್ಟಣ ನಿವಾಸಿಗಳ ನಿದ್ದೆಗೆಡಿಸಿದೆ. ಇದೇ ಭಾಗದಲ್ಲಿ ಎರಡು ವರ್ಷದ ಹಿಂದೆ ಛೆಂಬರ್ ನಿರ್ಮಿಸಿ ರಸ್ತೆ ಅವ್ಯವಸ್ಥೆ ಮಾಡಿ ಹೋಗಿದ್ದರು. ಬಳಿಕ ಇತ್ತ ತಲೆ ಹಾಕದೇ ಬೇರಡೆ ಕೆಲಸದಲ್ಲಿ ಮಗ್ನರಾದರು. ಬಳಿಕ ಶಾಸಕರಿಗೆ, ಪಟ್ಟಣ ಪಂಚಾಯತಿಗೆ ಮನವಿ ನೀಡಿ ಕಾಡಿಬೇಡಿ ಈ ಭಾಗದ ರಸ್ತೆ ಪುಟ್ ಬ್ರಿಜ್ ಸರಿಪಡಿಸಿಕೊಂಡಿದ್ದು ಇದೀಗ ಮತ್ತೆ ಜೆಸಿಬಿ ತಂದು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕೆಲಸವನ್ನು ತಡೆಯಲು ಮುಂದಾದರು. ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸ್ಥಳಕ್ಕೆ ಬರುವಂತೆ ತಿಳಿಸಿದರು.
ಸಾರ್ವಜನಿಕರ ವಿರೋಧ ಹೆಚ್ಚಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತ್ವರಿತವಾಗಿ ಕಾಮಗಾರಿ ನಡೆಸುತ್ತೇವೆ ರಸ್ತೆ ಗಟಾರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು.
…………………………
ಎರಡು ವರ್ಷದ ಹಿಂದೆ ಕೆಲಸ ಮಾಡಿ ಹೋದವರು ಮತ್ತೆ ಇಲ್ಲಿಗೆ ಆಗಮಿಸಿದ್ದಾರೆ. ರಸ್ತೆ ಮೇಲೆ ಹಿಟಾಚಿ ತೆಗೆದುಕೊಂಡು ಹೋಗಿ ರಸ್ತೆ ಹಾಳು ಮಾಡುತ್ತಿದ್ದಾರೆ. ಒಳಚರಂಡಿ ಕಾಮಗಾರಿ ಸರಿಯಾಗಿ ನಿಭಾಹಿಸದೆ, ಕಳೆದ ಬಾರಿ ಕೆಲಸ ಮಾಡಲು ಬಂದು ಗಟಾರ, ಕಂಪೌಡ್ ಹಾನಿಗೊಳಿಸಿ ಹೋಗಿದ್ದಾರೆ ಅದನ್ನು ಮೊದಲು ಸರಿ ಪಡಿಸಿ ಹೋಗುವಂತೆ ಆಗ್ರಹಿಸಿದರು.
ಸ್ಥಳಿಯ ನಿವಾಸಿ ಸತೀಶ ನಾಯ್ಕ
……………………………..
ನನ್ನ ವಾರ್ಡ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನದಿಂದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಹಲವಡೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೆಲಸ ಮಾಡಲು ಸೂಚನೆ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮತ್ತೆ ಅದೇ ತಪ್ಪು ನಡೆದರೆ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ
ವಾರ್ಡ ಸದಸ್ಯೆ ಮೇಧಾ ನಾಯ್ಕ
………….
ಕಳೆದ ಹಲವು ವರ್ಷದಿಂದ ಹೋರಾಟ ಪ್ರತಿಭಟನೆ ನಡೆದರೂ ಈ ಬಗ್ಗೆ ಇದುವರೆಗೂ ಸಮರ್ಪಕವಾಗಿ ಕಮಗರಿ ನಡೆಸುತ್ತಿಲ್ಲ. ಜನಪ್ರತಿನಿಧಿಗಳು ವಿರೋಧ ಪಕ್ಷ ಇದ್ದಾಗ ಹೋರಾಟ ಆಡಳಿತ ಪಕ್ಷಕ್ಕೆ ಬಂದ ಸಮಜಾಯಿಸಿ ಎಚ್ಚರಿಕೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಜನಪ್ರತಿನಿಧಿಗಳು ಅಧಿಕಾರಿಗಳ ನಿಲಕ್ಷದಿಂದ ಸಾರ್ವಜನಿಕರಿಗೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಮುಂದಿನ ದಿನದಲ್ಲಾದರೂ ಎಚೆತ್ತು ಸರಿಯಾಗಿ ಕೆಲಸ ಮಾಡುತ್ತಾರಾ ಅಥವಾ ಹಳೆ ಚಾಳಿಯನ್ನು ಮುಂದುವರೆಸುತ್ತಾರೊ ಎನ್ನುವುದನ್ನು ಕಾದು ನೋಡಬೇಕಿದೆ.
Leave a Comment