• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು

November 1, 2020 by Lakshmikant Gowda Leave a Comment

ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಆಡಳಿತದಲ್ಲಿ ಸುವರ್ಣಯುಗ ಕಂಡಿದ್ದ ಗೇರಸೊಪ್ಪಾ ಸಂಸ್ಥಾನದ ಗತ ಕಾಲದ ಕಥೆ ಹೇಳುವ ಕೋಟೆ

ಹೊನ್ನಾವರ – ಪಶ್ಚಿಮಘಟದ ತಪ್ಪಲಿನ ಗೇರಸೊಪ್ಪಾದ ಗೊಂಡಾರಣ್ಯದಲ್ಲಿ ನಿರ್ಮಾಣವಾಗಿ ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆ ಪುರಾತತ್ವ ಇಲಾಖೆಯಿಂದಲೂ ಅವಗಣನೆಗೊಳಗಾಗಿ ವಿನಾಶದ ಅಂಚನ್ನು ತಲುಪಿದೆ.

watermarked IMG 20201029 171354


ಹೊನ್ನಾವರ ತಾಲೂಕಿಗೆ ಹತ್ತಿರದಲ್ಲಿದ್ದರೂ ಅಧಿಕೃತವಾಗಿ ಸಾಗರ ತಾಲೂಕು ಅರಣ್ಯ ವ್ಯಾಪ್ತಿಗೊಳಪಟ್ಟಿರುವ ಪ್ರದೇಶದಲ್ಲಿರುವ ಕೋಟೆಯನ್ನು ನಿರ್ಮಿಸಲಾಗಿದೆ. 1552 ರಿಂದ 1606 ವರೆಗೆ ಗೇರಸೊಪ್ಪಾ ಸಂಸ್ಥಾನವನ್ನಾಳಿದ ವೀರ ಮಹಿಳೆ ಚೆನ್ನಭೈರಾದೇವಿ ಎನ್ನುವ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಳ್ವ ವಶಂದ ದಿಟ್ಟೆ ಚೆನ್ನಭೈರಾದೇವಿ ಗೇರಸೊಪ್ಪಾವನ್ನು ರಾಜಧಾನಿಯನ್ನಾಗಿಸಿಕೊಂಡು ಹೈವ ತುಳುವ ಕೊಂಕಣ ಪ್ರದೇಶಗಳನ್ನು ಆಳುತ್ತಿದ್ದಳು.


ಅದಾಗಲೇ ದೇಶದಲ್ಲಿ ಬೇರೂರಿದ್ದ ಪೋರ್ಚುಗೀಸರು ತಮ್ಮ ಬಲವನ್ನು ವೃದ್ಧಿಸಿಕೊಂಡು ಇಲ್ಲಿನ ಆಳರಸರಮೇಲೆ ದಾಳಿಮಾಡಲು ಪ್ರಾರಂಭಿಸಿದ್ದರು. ಗೇರಸೊಪ್ಪಾ ನಗರವೂ ಒಂದಲ್ಲ ಒಂದು ದಿನ ಇಂತಹ ದಾಳಿಗೆ ಒಳಗಾಗಲಿದೆ ಎನ್ನುವ ಮುಂದಾಲೋಚನೆಯಿಂದಲೇ ದುರ್ಗಮವಾದ ಕಡಿದಾದ ಬೆಟ್ಟದ ತುದಿ ಕಾನೂರಿನಲ್ಲಿ ಕೋಟೆ ನಿರ್ಮಿಸಲು ರಾಣಿ ಮುಂದಾಗಿದ್ದಳು ಎಂದು ಇತಿಹಾಸಕಾರರು ಅರ್ಥೈಸಿದ್ದಾರೆ.
ಆಪತ್ಕಾಲದಲ್ಲಿ ನೆರವಾಗಲೆಂದು ದವಸ ಧಾನ್ಯ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆಯಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇಂದಿಗೂ ಲಭ್ಯವಿದೆ. 1559ರಲ್ಲಿ ಪೊರ್ಚುಗೀಸ್ ಕ್ಯಾಪ್ಟನ್ ಲೂಯಿಸ್ ಅಟಾಯ್ದೆ ಎಂಬಾತ ಗೇರಸೊಪ್ಪಾದಮೇಲೆ ದಾಳಿಮಾಡಿದಾಗ ಇಡೀ ನಗರ ನಿರ್ಜನವಾಗಿ ಪ್ರದೇಶವಾಗಿತ್ತು. ರಾಣಿಸಮೇತ ಎಲ್ಲರೂ ಕಾನೂರು ಕೋಟೆಯಲ್ಲಿ ರಕ್ಷಣೆ ಪಡೆದಿದ್ದಾರೆನ್ನುವುದನ್ನು ತಿಳಿದ ಲೂಯಿಸ್ ಮತ್ತು ಆತನ ಸೈನಿಕರು ಕಡಿದಾದ ಬೆಟ್ಟವನ್ನು ಏರತೊಡಗಿದಾಗ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬೆಟ್ಟದಮೇಲಿಂದ ಉರುಳಿಸಿ ಪೊರ್ಚುಗೀಸ್ ಸೈನ್ಯವನ್ನು ಹಿಮ್ಮೆಟ್ಟಿಸಲಾಯಿತು. ಇದೇ ಕಾರಣಕ್ಕೆ ಕಾನೂರು ಕೋಟೆಗೆ ಉರುಳುಗಲ್ಲು ಕೋಟೆ ಎಂದೂ ಕರೆಯುತ್ತಾರೆ.

watermarked IMG 20201007 WA0009


ಸುವರ್ಣಕ್ಷರಗಳಲ್ಲಿ ಬರೆದಿಡಬಹುದಾದ ಐತಿಹಾಸಿಕ ಸಂಗತಿಗಳ ಜೊತೆ ಎಂತವರನ್ನೂ ಅಚ್ಛರಿಯ ಮಡುವಿನಲ್ಲಿ ಕೆಡವುವ ಅಭೇದ್ಯ ಕೋಟೆಯನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕಾದುದು ಜವಾಬ್ಧಾರಿಯುತ ಇಲಾಖೆಯ ಕರ್ತವ್ಯವಾಗಿತ್ತು. ಆದರೆ ನಾಗರೀಕ ಸಮಾಜದಿಂದ ದೂರದಲ್ಲಿ ದಟ್ಟಡವಿಯಲ್ಲಿರುವ ಕಾರಣಕ್ಕೋ ಎನೋ ಕಾನೂರು ಕೋಟೆ ಇನ್ನಿಲ್ಲದಂತ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಕೊಟೆಯೊಳಗಿನ ದೇವಾಲಯಗಳು ದ್ವಜ ಸ್ಥಂಭ ಮುಂತಾದವು ನಿಧಿಯಾಸೆಗೆ ನುಜ್ಜುಗುಜ್ಜಾಗಿವೆ. ಸುರಂಗಮಾರ್ಗ, ರಾಣಿವಾಸ, ಬಾವಿ, ಕೋಟೆಯ ಗೋಡೆಗಳು ಸಂಪೂರ್ಣ ಶಿಥಿಲವಾಗಿ ನಾಮಾವಶೇಷವಾಗುವ ದಿನವನ್ನು ಎದುರು ನೋಡುತ್ತಿರುವಂತೆ ಭಾಸವಾಗುತ್ತಿದೆ.
ಆಧುನಿಕ ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ವ್ಯಯಿಸುತ್ತಿರುವ ಸರ್ಕಾರಗಳು ಕಾನೂರು ಕೋಟೆಯಂತ ಐತಿಹಾಸಿಕ ಮಹತ್ವದ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸಿದ್ದೇ ಆದರೆ ಇಂದಿನ ಜನಾಂಗಕ್ಕೆ ಈ ನೆಲದ ಭವ್ಯ ಇತಿಹಾಸವನ್ನು ಪರಿಚಯಿಸುವ ಜೊತೆಗೆ ಪ್ರವಾಸಿಗರನ್ನು ಸೆಳೆಯುವುದಕ್ಕೂ ಸಾಧ್ಯವಾಗುತ್ತಿತ್ತು. ಕೋಟೆಯನ್ನು ಪ್ರವೇಶಿಸುವುದಕ್ಕೆ ಪರವಾನಿಗೆ ಪಡೆದುಕೊಳ್ಳಬೇಕು ಎನ್ನುವ ಅರಣ್ಯ ಇಲಾಖೆ ಅದೇ ಕಾಳಜಿಯನ್ನು ಕೋಟೆಯ ರಕ್ಷಣೆಗೂ ತೋರಬೇಕು ಎನ್ನುವ ಒತ್ತಾಯವಿದೆ.

watermarked IMG 20201007 WA0010


ವಿಶಾಲವಾದ ಕೋಟೆಯ ಒಳಗೆ ಎತ್ತರದ ಪ್ರದೇಶದಲ್ಲಿ ಹಲವಾರು ಕೆರೆಗಳನ್ನು ನಿರ್ಮಿಸಿದ್ದು ಕಾಲುವೆಗಳ ಮೂಲಕ ಕೆರೆಯ ನೀರನ್ನು ಅಗತ್ಯವಿದ್ದಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನುವದನ್ನು ಋಜುವಾತುಪಡಿಸುವ ರಚನೆಗಳು ಇಂದಿಗೂ ಅಸ್ಥಿತ್ವದಲ್ಲಿದೆ.

ಗೇರಸೊಪ್ಪಾ-ಖಂಡೋಡಿ-ಬ್ಯಾಗೋಡಿ ಮೂಲಕ ಕಾಲ್ನಡಿಗೆಯಲ್ಲಿ ಸಾಗಿದರೂ ಕಾನೂರು ಕೋಟೆ ತಲುಪಬಹುದು. ಆದರೆ ಸುಮಾರು 10 ಕಿಲೋಮೀಟರ್ ದೂರದ ಈ ಕಾಡಿನ ಹಾದಿ ದುರ್ಗಮವಾದುದ್ದು ಮತ್ತು ಸವಾಲುಗಳಿಂದ ಕೂಡಿರುತ್ತದೆ. ಸಾಗರ ತಾಲೂಕಿನ ಕಾರ್ಗಲ್ ಮೂಲಕ ತೆರಳಿದರೆ ಕೋಟೆ ಇರುವ ಸ್ಥಳದವರೆಗೂ ವಾಹನದಲ್ಲಿ ಸಾಗಬಹುದಾಗಿದೆ.

watermarked IMG 20201006 WA0067

1552 ರಿಂದ 1606 ವರೆಗೆ ಗೇರಸೊಪ್ಪಾವನ್ನು ಆಳಿದ ರಾಣಿ ಚೆನ್ನಭೈರಾದೇವಿಯನ್ನು ಕೆಳದಿಯ ಅರಸ ಹಿರಿಯ ವೆಂಕಟ್ಟಪ ನಾಯಕ ಮತ್ತು ಬಿಳಗಿಯ ಅರಸರು ಸೇರಿ ಒಪ್ಪಂದಮಾಡಿಕೊಂಡು ದಳವಾಯಿ ಲಿಂಗಣ್ಣ ಎನ್ನುವ ಸರದಾರನ ಸಹಾಯ ಪಡೆದು ಬಂಧಿಸಿ ಇಕ್ಕೇರಿ ಕೋಟೆಯಲ್ಲಿ ಸೆರೆಯಲ್ಲಿಟ್ಟಿದ್ದು ಅಲ್ಲಿಯೇ ಆಕೆ ಕೊನೆಯುಸಿರೆಳದಳು ಎನ್ನುತ್ತದೆ ಇತಿಹಾಸದ ಸಾಲುಗಳು.

ಕ್ರಿ.ಶ 1552 ರಿಂದ 1606 ಅವಧಿಯಲ್ಲಿ ನಿರ್ಮಾಣವಾದ ಕೋಟೆ
ಶತ್ರುಗಳ ದಾಳಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಲು ಅನುಕೂಲವಾಗುವಂತೆ ಮೂರು ದಿಕ್ಕಿನಲ್ಲಿ ಆಳವಾದ ಕಣಿವೆಯುಳ್ಳ ಪರ್ವತದ ಶಿಖರದಲ್ಲಿ ಕೋಟೆ ಇದೆ.
ರಾತ್ರಿ ಸಮಯದಲ್ಲಿ ಕೋಟೆಯಮೇಲೆ ನಿಂತು ನೋಡಿದರೆ ಹೊನ್ನಾವರ ಮತ್ತು ಭಟ್ಕಳ ಬಂದರಿನಲ್ಲಿರುವ ಲೈಟ್ ಹೌಸ್ ಕಾಣಿಸುತ್ತದೆ.
ಜಿನ ದೇವಾಲಯ, ಶಿವ ದೇವಾಲಯ, ಬಾವಿ, ಕಲ್ಲಿನ ದ್ವಜಸ್ಥಂಭ, ರಾಣಿವಾಸ, ಸುರಂಗ ಮಾರ್ಗ, ಬಾವಿ ಕೋಟೆಯಲ್ಲಿನ ಕುರುಹುಗಳಾಗಿ ಉಳಿದಿವೆ.

watermarked IMG 20201007 WA0018

watermarked IMG 20201006 WA0070

watermarked IMG 20201006 WA0072

watermarked IMG 20201006 WA0080

watermarked IMG 20201006 WA0078

watermarked IMG 20201029 171412

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending, ಅಂಕಣಗಳು, ಪ್ರವಾಸ Tagged With: Chenna Bhairava Devi, Chennabhairadevi, Golden Age, Gondaraya of Gerasoppa, kanooru kote, Lighthouse at Honnavar and Bhatkal Port Archaeological Department, paper queen fort honnavara, pepper queen fort, Pepper Queen of India, Queen of Pepper, Renowned, The Pepper Queen of India, ಉರುಳುಗಲ್ಲು ಕೋಟೆ, ಕಥೆ ಹೇಳುವ ಕೋಟೆ, ಕಾನೂರು ಕೋಟೆಗೆ, ಕಾಳುಮೆಣಸಿನ ರಾಣಿ, ಕ್ರಿ.ಶ 1552 ರಿಂದ 1606 ಅವಧಿಯಲ್ಲಿ ನಿರ್ಮಾಣವಾದ ಕೋಟೆ, ಗತ ಕಾಲದ, ಗೇರಸೊಪ್ಪಾ ಸಂಸ್ಥಾನ, ಗೇರಸೊಪ್ಪಾದ ಗೊಂಡಾರಣ್ಯ, ಚೆನ್ನಭೈರಾದೇವಿಯ ಆಡಳಿತ, ದವಸ ಧಾನ್ಯ, ದೇವಾಲಯಗಳು ದ್ವಜ ಸ್ಥಂಭ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆ, ಪುರಾತತ್ವ ಇಲಾಖೆ, ಪ್ರಖ್ಯಾತಿ ಗಳಿಸಿದ್ದ, ಸಾಗರ ತಾಲೂಕು ಅರಣ್ಯ ವ್ಯಾಪ್ತಿಗೊಳಪಟ್ಟಿರುವ ಪ್ರದೇಶ, ಸುವರ್ಣಯುಗ ಕಂಡಿದ್ದ, ಹೈವ ತುಳುವ ಕೊಂಕಣ ಪ್ರದೇಶ, ಹೊನ್ನಾವರ ಮತ್ತು ಭಟ್ಕಳ ಬಂದರಿನಲ್ಲಿರುವ ಲೈಟ್ ಹೌಸ್ ಕಾಣಿಸುತ್ತದೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...