ಹೊನ್ನಾವರ: ಇತ್ತಿಚಿಗೆ ಸೋಲಿಲ್ಲದ ಸರದಾರರು ಮುಗ್ವಾ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಆಗಿದ್ದ ಟಿ.ಎಸ್ ಹೆಗಡೆ, ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯ ಟಿ.ಎಸ್.ನಾಯ್ಕ ನಿಧನಕ್ಕೆ ತಾಲೂಕ ಬಿಜೆಪಿ ಮಂಡಲದ ವತಿಯಿಂದ ಶೃದಾಂಜಲಿ ಸಭೆ ಮುಗ್ವಾ ಸುಬ್ರಹ್ಮಣ್ಯ ಸಂಸ್ಕ್ರತ ಪಾಠಶಾಲೆಯಲ್ಲಿ ಜರುಗಿತು.

ಇರ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಸಲ್ಲಿಸಲಾಯಿತು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಸುತ್ತ ವರ್ಷ ಕೊರೋನಾ ಸಂಕಟದಿಂದ ತುಂಬಾ ನೋವನ್ನು ಅನುಭವಿಸುತ್ತಿದ್ದು, ಈ ಮಧ್ಯೆ ನಮ್ಮ ಬಿಜೆಪಿಯ ತಾಲೂಕಿನ ಎರಡು ಕಾರ್ಯಕರ್ತರನ್ನು ಒಂದೇ ತಿಂಗಳಿನಲ್ಲಿ ಕಳೆದುಕೊಂಡಿರುವುದು ತುಂಬಾ ನೋವು ತಂದಿದೆ. ತನ್ನದೇ ಆದ ರೀತಿಯಲ್ಲಿ ಇರ್ವರು ಅಪಾರ ಅಭಿಮಾನಿಗಳು ಹೊಂದಿದ್ದು, ಹಲವು ಸಮಾಜಮುಖಿಯ ಕಾರ್ಯದ ಮೂಲಕ ಚಿರಪರಿಚಿತರಾಗಿದ್ದರು. ವೈಯಕ್ತಿಕವಾಗಿ ನನ್ನೊಡನೆ ಬೆರೆಯುವ ಮೂಲಕ ನನ್ನ ಸಹೋದರಂತೆ ಇದ್ದು, ಹಲವು ಬಾರಿ ನನಗೆ ಮಾರ್ಗದರ್ಶಕರು ಆಗಿದ್ದರು. ಇರ್ವರು ಅಕಾಲಿಕವಾಗಿ ನಮ್ಮಿಂದ ಅಗಲಿರುದರಿಂದ ನಮ್ಮ ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಮಂಡಲದ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಎನ್.ಎಸ್.ಹೆಗಡೆ, ರಾಜೇಶ ಭಂಡಾರಿ, ಸುರೇಶ ಶೆಟ್ಟಿ, ಐ.ವಿ.ನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಂತಾಪ ಸಭೆಯಲ್ಲಿ ಹಾಜರಿದ್ದರು.
Leave a Comment