ಸರಳಗಿ ಗ್ರಾಮದಲ್ಲಿ ಬಿರುಗಾಳಿಯಿಂದ ಮರ ಬಿದ್ದು ಹಾನಿ ಸಂಭವಿಸಿರುದರಿಂದ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಉಪ್ಪೂಣಿ ಪಂಚಾಯತ ವ್ಯಾಪ್ತಿಯ ಸರಳಗಿ ಗ್ರಾಮದ ನಾರಾಯಣ ನಾಯ್ಕ ಎನ್ನುವವರ ಮನೆ ಮೇಲೆ ಎರಡು ದಿನದ ಹಿಂದೆ ಬೃಹದಾಕಾರದ ಮರ ಬಿದ್ದು ಮನೆಗೆ ತಿವ್ರ ಹಾನಿ ಸಂಭವಿಸಿತ್ತು. ಶನಿವಾರ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬದ ತುರ್ತು ನಿರ್ವಹಣೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯಧನ ವಿತರಿಸಿದರು. ಮನೆಯು ಅರಣ್ಯ ಅತಿಕ್ರಮಣ ಜಾಗದಲ್ಲಿ ಇರುದರಿಂದ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ಒದಗಿಸಲು ಸಮಸ್ಯೆ ಎದುರಾಗುದರಿಂದ ಅಗತ್ಯ ದಾಖಲಾತಿ ಪಡೆದು ಸರ್ಕಾರದಿಂದ ವಿಶೇಷ ಆರ್ಥಿಕ ನೆರವು ರೂಪದಲ್ಲಿ ಕುಟುಂಬಕ್ಕೆ ಹಣ ಮಂಜೂರಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುದಾಗಿ ಭರವಸೆ ನೀಡಿದರು.


Leave a Comment