ಯಲ್ಲಾಪುರ:
ಜಿಲ್ಲೆಯ ವಿವಿಧ ಪ.ಪಂ. ನಗರಸಭೆ, ಪುರಸಭೆಗಳಲ್ಲಿ ಬಿಜೆಪಿಯ ಸದಸ್ಯರು ಅಧಿಕಾರ ಹಿಡಿದ್ದಿದ್ದಾರೆ. ಇನ್ನುಳಿದ ಹೊನ್ನಾವರ ಹಾಗ ಸಿದ್ದಾಪುರಗಳಲ್ಲಿಯೂ ಅಧಿಕಾರವನ್ನು ನಿಶ್ಚಿತವಾಗಿ ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಬಿಜೆಪಿಯ ಗೆಲುವು ಮುಂದಿನ ಗ್ರಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಮಹಾರಾಷ್ಟ್ರದಲ್ಲಿ ಪತ್ರಕರ್ತ ಅರ್ನಾಬ ಗೊಸ್ವಾಮಿ ಅವರನ್ನು ಅಮಾನವೀಯ ರೀತಿಯಲ್ಲಿ ಬಂದಿಸಿರುವ ಶಿವಸೇನೆಯ ಕ್ರಮವನ್ನುಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಮಾಧ್ಯಮದಮೇಲೆ ನೆಡೆದ ಪ್ರಹಾರವಾಗಿದ್ದು,ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ,ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ 15 ಮತಗಳಿಂದ ಬಿಜೆಪಿ ಅಧಿಕಾರ ಪಡೆದು ಅಭೂತಪೂರ್ವ ವಿಜಯ ಸಾಧಿಸಿದೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಮಹಿಳೆಯರೇ ಪಾರುಪತ್ಯ ಮೆರೆದಿದ್ದಾರೆ. ಯಲ್ಲಾಪುರದಲ್ಲಿ ಇಬ್ಬರೂ ಮಹಿಳೆಯರೇ ಅಧಿಕಾರ ಪಡೆದಿದ್ದಾರೆ. ಈ ಗೆಲುವು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ ಎಂದರು. ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ ಇದ್ದರು.
Leave a Comment