ಭಟ್ಕಳ: ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಅಖಂಡ ಕರ್ನಾಟಕ ಗೋಂಧಳಿ ಸಮಾಜದ ಸಂಘಟನೆ ಬುಧವಾರ ಇಲ್ಲಿನ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಹತ್ಯೆಯಾದ ಸುರೇಶ್ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜೊತೆಗೆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಯಿತು.

ಗೋಂಧಳಿ, ಗುಡುಗುಡಕಿ, ಜೋಷಿ, ವಾಸುದೇವ ಸೇರಿದಂತೆ ಅಲೆಮಾರಿ ಸಮುದಾಯದವರ ಮೇಲೆ ದೌರ್ಜನ್ಯ, ಹಲ್ಲೆಗಳು ನಡೆಯುತ್ತಿದ್ದು ಸರ್ಕಾರ ಅಲೆಮಾರಿ ಸಮುದಾಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಗೋಂಧಳಿ ಸಂಘದ ರಘುನಾರ್ಥ ಗಣಾಚಾರಿ, ಕೃಷ್ಣ ರೇಣುಕೆ, ರಾಮಚಂದ್ರಪ್ಪ, ಲಕ್ಷ್ಮಣ ಡಿ ಭೋರಾತ್, ಪಕಿರಪ್ಪ ಶಾಸ್ತ್ರಿ, ಕೃಷ್ಣಮೂರ್ತಿ ಚೌಣ ಮತ್ತಿತರರು ಉಪಸ್ಥಿತರಿದ್ದರು.

Leave a Comment