• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಹಿಮೆಯ ಕಾಡಿನ ಕತ್ತಲಲ್ಲಿ ಕಣ್ಮರೆಯಾಗುತ್ತಿರುವ ಬೆಲೆಬಾಳುವ ಸಾಗವಾನಿ ಮರಗಳು

November 12, 2020 by Lakshmikant Gowda Leave a Comment

ಉಪ್ಪೋಣಿ ಗ್ರಾಮಪಂಚಾಯತ ವ್ಯಾಪ್ತಿಗೊಳಪಡುವ ಮಹಿಮೆ ಪಶ್ಚಿಮಘಟ್ಟದ ಕಾಡಿನ ನಡುವೆ ಕಳೆದುಹೋದಂತಿರುವ ಪುಟ್ಟ ಊರು. ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟು ಇಲ್ಲಿ ಮತ್ಯಾವುದೇ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಹಳ್ಳ, ಕಿತ್ತೋದ ಕಚ್ಚಾ ರಸ್ತೆ, ಸಾರಿಗೆ ಸಂಪರ್ಕದ ಕೊರತೆ ಇಂದಿಗೂ ಈ ಊರನ್ನು ಕಾಡುತ್ತಲೇ ಇದೆ. ಶಿಕ್ಷಣ ಸಚಿವ ಸುರೇಶ ಕುಮಾರ್ ಬೇಟಿಯಿಂದ ಸುದ್ದಿಯಾಗಿದ್ದ ಈ ಊರು ಈಗ ಸಾಗವಾನಿ ಮರಗಳ ಕಳ್ಳ ಸಾಗಾಟದ ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದೆ.

01 hnr 3


ಮಹಿಮೆಯ ಕಾಡಿನಲ್ಲಿ ಸಾಗವಾನಿ ಸೇರಿದಂತೆ ಬೆಲೆಬಾಳುವ ನೂರಾರು ಜಾತಿಯ ಮರಗಳಿವೆ. ಸ್ಥಳಿಯರನ್ನು ಬಳಸಿಕೊಂಡು ಇಲ್ಲಿನ ಸಾಗವಾನಿ ಮರಗಳನ್ನು ಕಡಿದು ಬೇರೆಡೆಗೆ ಸಾಗಿಸುವ ವ್ಯವಸ್ಥಿತ ಜಾಲವೊಂದು ಇತ್ತೀಚೆಗೆ ಸಕ್ರೀಯವಾಗಿದೆ ಎನ್ನುವ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ. ಮಹಿಮೆಯಲ್ಲಿ ಎರಡು ಲೋಡ್ ಸಾಗವಾನಿ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತುಮಾಡಿದ್ದಾರೆನ್ನುವ ಸುದ್ದಿ ಇಡೀ ತಾಲೂಕಿಗೆ ಹರಡಿತಾದರೂ ಅರಣ್ಯ ಇಲಾಖೆಯವರು ಮಾತ್ರ ಅದೆಲ್ಲಾ ಸುಳ್ಳು ಸುದ್ದಿ ಎರಡು ಮರಗಳನ್ನು ಕಡಿದಿದ್ದಾರೆ ಅದರ ತನಿಖೆ ನಡೆಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆ ಅಲ್ಲಿಂದ ಮುಂದೆ ಸಾಗವಾನಿ ಮರ ಕಡಿದ ಸುದ್ದಿ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಸಾಗವಾನಿ ಮರ ಕಡಿದ ಘಟನೆ ತಣ್ಣಗಾಗಲು ಕಾರಣ ಏನು ಎನ್ನುವುದನ್ನು ಇಲಾಖೆಯವರೇ ಹೇಳಬೇಕಿದೆ. ಮಾವಿನಕುರ್ವಾದಲ್ಲಿ ಅರ್ದ ಕೆಜಿ ಆಮೆ ಮಾಂಸ ಸಿಕ್ಕಿದಾಗ , ಅರೇ ಅಂಗಡಿ ತೊಳಸಾಣಿಯಲ್ಲಿ ಐದಾರು ಯಾವುದೋ ಪ್ರಾಣಿಯ ಉಗುರು ಸಿಕ್ಕಾಗಲೆಲ್ಲ ಮಾದ್ಯಮದವರಿಗೆ ಮಾಹಿತಿ ನೀಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಮಹಿಮೆಯ ಸಾಗವಾನಿ ಮರ ಕಡಿದ ಪ್ರಕರಣದ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲವಾಗಿದೆ.

01 hnr 4
01 hnr 2

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: dirt road, Forest Department officials have confiscated the logistics, lack of transport, logging, logging and shipping., logistics, ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತು, ಕಿತ್ತೋದ ಕಚ್ಚಾ ರಸ್ತೆ, ರಭಸವಾಗಿ ಹರಿಯುವ ಹಳ್ಳ, ಸಾಗವಾನಿ ಮರಗಳ ಕಳ್ಳ ಸಾಗಾಟ, ಸಾಗವಾನಿ ಮರಗಳನ್ನು ಕಡಿದು ಬೇರೆಡೆಗೆ ಸಾಗಿಸುವ ವ್ಯವಸ್ಥಿತ ಜಾಲ, ಸಾರಿಗೆ ಸಂಪರ್ಕದ ಕೊರತೆ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,121 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...