ಹೊನ್ನಾವರ: ಜಿಲ್ಲೆಯ ಪ್ರತಿಷ್ಟಿತ ಚುನಾವಣೆ ಎಂದೆ ಬಿಂಬಿತವಾಗಿದ್ದ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಹಾಗೂ ಇದೆ ಮೊದಲ ಬಾರಿಗೆ ಆಯ್ಕೆಯಾದ ವಿಶ್ವನಾಥ ಭಟ್ ಇವರನ್ನು ಪ್ರಧಾನ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಯ್ಕ ಮಾತನಾಡಿ ಇದೆ ಮೊದಲ ಬಾರಿಗೆ ತಾಲೂಕಿನಿಂದ ಇರ್ವರು ನಿರ್ದೆಶಕರು ಆಯ್ಕೆಯಾಗಿರುದರಿಂದ ಬ್ಯಾಂಕಿಗೆ ಅನೂಕೂಲವಾಗಲಿದೆ ಎಂದರು.
ಸನ್ಮಾನ ಸ್ವೀಕರಿಸಿದ ಬಳಿಕ ಶಿವಾನಂದ ಹೆಗಡೆ ಕಡತೋಕಾ ಮತನಾಡಿ ತಾಲೂಕಿನ ಕೃಷಿ ಪತ್ತಿನ ಸಂಘದಿಂದ ನನ್ನನ್ನು ಆಯ್ಕೆ ಮಾಡಿರುದರಿಂದ ತುಂಬಾ ಸಂತಸ ಮೂಡಿದೆ. ಹಲವು ಸಹಕಾರಿ ಸಂಘಗಳು ಬೆಂಬಲದಿಂದ ತುರುಸಿನ ಸ್ಪರ್ಧೆ ನಡುವೆ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಆಯ್ಕೆಗೆ ಸಹಕರಿಸಿದ ಎಲ್ಲ ಸಂಘದ ಸದಸ್ಯರಿಗೂ ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಯ್ಕ, ಸಹಾಯಕ ವ್ಯವಸ್ಥಾಪಕ ಡಿ.ಎಸ್.ಭಟ್, ರವಿ ಶೆಟ್ಟಿ ಕವಲಕ್ಕಿ, ಎಂಎಸ್.ಹೆಗಡೆ ಕಣ್ಣಿ, ಶ್ರೀಧರ ಶೆಟ್ಟಿ, ಬಾಬು ನಾಯ್ಕ ಬಳ್ಕೂರ್, ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.
Leave a Comment