ಹೊನ್ನಾವರ: ಕಳೆ ದ 2 ಬಾರಿ ಅವಿರೋಧವಾಗಿ ಈ ಬಾರಿ ತಿವ್ರ ಪೈಪೋಟಿಯ ನಡುವೆಯೂ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ 3ನೇ ಬಾರಿ ಕೆಡಿಸಿಸಿ ನಿರ್ದೆಶಕರಾಗಿ ಆಯ್ಕೆಯಾದ ಹಳದೀಪುರ ಜಿಲ್ಲಾಪಂಚಾಯತ ಸದಸ್ಯರು ಆದ ಶಿವಾನಂದ ಹೆಗಡೆ ಕಡತೋಕಾ ಇವರನ್ನು ಸಾಲ್ಕೋಡ್ ವ್ಯವಸಾಯ ಸಹಕಾರಿ ಸಂಘದ ನಿರ್ದೆಶಕರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷ ದಯಾನಂದ ಹೆಗಡೆ ಮಾತನಾಡಿ ಕಳೆದ 2 ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಈ ಬಾರಿ ತಾಲೂಕಿನ ಹೆಚ್ಚಿನ ಸಂಘದವರು ಮತ ನೀಡುವ ಮೂಲಕ ಪುನರ್ ಆಯ್ಕೆ ಮಾಡಿದ್ದಾರೆ. ಈ ಬಾರಿಯು ವ್ಯವಸಾಯ ಸಂಘಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ನಿಮ್ಮ ಅಭಿನಂದನಾಪೂರ್ವಕ ಸನ್ಮಾನಕ್ಕೆ ಚಿರಋಣಿಯಾಗಿದ್ದು, ಸದಾ ಕಾಲ ಸಹಕಾರಿ ಸಂಘದ ಜೊತೆಗೆ ಇರಲಿದ್ದೇನೆ ಎಂದು ಭರವಸೆ ನೀಡಿದರು,
ಈ ಸಂದರ್ಭದಲ್ಲಿ ಉಪಾಧ್ಯಕ್ಷ ತಿಮ್ಮಣ್ಣ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಿ ಶ್ಯಾನಭಾಗ, ನಿರ್ದೆಶಕರಾದ ಗಣಪ ನಾಯ್ಕ, ವಿಷ್ಣು ಹೆಗಡೆ, ಆರ್.ಎಂ.ಹೆಗಡೆ, ಅನಿತಾ ಆಚಾರಿ, ಪ್ರಸನ್ನ ಭಟ್ ಗೋಡಾಮಕ್ಕಿ ಉಪಸ್ಥಿತರಿದ್ದರು.
Leave a Comment