ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವ ತಾಲೂಕಿನ ಮೀನುಗಾರ ಮಹಿಳೆಯೊಬ್ಬಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸ್ಟಾರ್ ಸುವರ್ಣ ಸೂಪರ್‌ಸ್ಟಾರ್ ವೇದಿಕೆ ಕಲ್ಪಿಸಿದೆ. ಲೀಲಾವತಿಯ ಬದುಕಿನ ಕಥೆಯನ್ನು ಅನಾವರಣಗೊಳಿಸುವ ಎಪಿಸೋಡ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದೆ.
ಪಟ್ಟಣದ ಉದ್ಯಮನಗರ ನಿವಾಸಿಯಾದ ಲೀಲಾವತಿ ಕೃಷ್ಣ ಮೇಸ್ತ ಅವರ ಬದುಕಿನ ಬಂಡಿ ಓಡುತ್ತಿರುವುದೂ ಮೀನು ವ್ಯಾಪಾರದ ಹನಿ ಹನಿ ಲಾಬದಲ್ಲಿಯೇ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿ ಮಕ್ಕಳಿಗೆ ಪ್ರೀತಿಯ ಧಾರೆಯೆರೆಯುವಲ್ಲಿ ಕೃಷ್ಣ ಮೇಸ್ತ ಯಾವತ್ತೂ ಹಿಂದೆ ಬಿದ್ದಿಲ್ಲ ಎನ್ನುವುದು ಲೀಲಾವತಿಯ ಮಾತುಗಳಿಂದಲೇ ವೇದ್ಯವಾಗುತ್ತದೆ.

ಮೀನುಗಾರರ ಪಾಲಿಗೆ ಸಹಜವೇ ಎನ್ನುವಂತಾಗಿರುವ ಬಡತನ, ಸಾವಿನೊಂದಿಗೆ ಸೆಣಸುವಂತ ಉದ್ಯೋಗದ ಜೊತೆ ಮಧುಮೇಹದಿಂದ ಬಳಲುತ್ತಿರುವ ಎರಡೂ ಕಾಲುಗಳನ್ನು ಕಳೆದು ಸಂಪೂರ್ಣ ಪರಾವಲಂಬಿಯಾಗಿ ದಿನ ದೂಡುತ್ತಿರುವ ಹಿರಿಯ ಜೀವ ಲೀಲಾವತಿಯ ಅತ್ತೆಯ ಚಾಕರಿ ಮಾಡುವುದು ಮತ್ತು ಆಕೆಯ ಔಷದೋಪಚಾರಕ್ಕಾಗಿ ಹಣ ಹೊಂದಿಸುವುದೇ ಸವಾಲಾಗಿ ಬಿಟ್ಟಿದೆ. ನಸುಕಿನಲ್ಲಿಯೇ ಎದ್ದು ಅತ್ತೆಯ ಯೋಗಕ್ಷೇಮ ವಿಚಾರಿಸಿ ಮನೆಮಂದಿಗೆ ಬೆಳಗಿನ ಚಹಾ ತಿಂಡಿಗಳನ್ನು ಮಾಡಿಕೊಟ್ಟು ಬಿಡುವಿರದ ಸಮಯದಲ್ಲೂ ಬಿಡುವು ಮಾಡಿಕೊಂಡು ಮೀನಿನ ಬುಟ್ಟಿಯೆದುರು ಕುಳಿತು ವ್ಯಾಪಾರಕ್ಕೆ ಮುಂದಾಗುವ ಲೀಲಾವತಿ ನಿಜಕ್ಕೂ ಗಟ್ಟಿಗಿತ್ತಿ ಎನ್ನುವುದು ನೆರೆಹೊರೆಯವರ ಅಭಿಪ್ರಾಯ.

ಈ ಬಗ್ಗೆಅನಿಸಿಕ್ಕೆ ಹಂಚಿಕೊAಡ ಲೀಲಾವತಿ ಮೇಸ್ತ ಸ್ಟಾರ್ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ನನ್ನ ಜೀವನದ ಇಷ್ಟ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳಲು ವೇದಿಕೆ ಸಿಗುತ್ತದೆ ಎನ್ನುವ ನಿರೀಕ್ಷೆಯೇ ನನ್ನ ಕನಸು ಮನಸಿನಲ್ಲಿಯೂ ಇರಲಿಲ್ಲ. ಶ್ರೀರಾಮ ಜಾದೂಗಾರ ಮತ್ತು ಆರ್.ಕೆ. ಮೇಸ್ತ ಅವರ ಸಹಾಯ ಮತ್ತು ಯಜಮಾನರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ನಾಡಿನ ಎಲ್ಲರ ಆಶೀರ್ವಾದ ನನ್ನಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ. ನನ್ನಂತವಳಿಗೆ ವೇದಿಕೆ ಕೊಟ್ಟ ಸುವರ್ಣ ವಾಹಿನಿಗೂ ಅಭಿನಂದನೆ ಹೇಳಬಯಸುತ್ತೇನೆ
ದಿನಬೆಳಗಾದರೆ ಕಷ್ಟವನ್ನೇ ಹಾಸಿ ಹೊದೆಯುತ್ತಿರುವ ಲೀಲಾವತಿಯ ಬದುಕಿಗೆ ಸುವರ್ಣ ಸೂಪರ್‌ಸ್ಟಾರ್ ಕಾರ್ಯಕ್ರಮ ತಿರುವು ನೀಡಿ ಬದುಕಿನ ಭಾರವನ್ನು ಇಳಿಸಿಕೊಳ್ಳಲು ಶ್ರೀಮಂತ ಹೃದಯದವರ ಸಹಾಯದ ಹಸ್ತ ನೆರವಾಗಬಹುದು ಎನ್ನುವ ಭರವಸೆ ಎಲ್ಲರಲ್ಲೂ ಮನೆಮಾಡಿದೆ.
Leave a Comment