• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ

November 26, 2020 by Lakshmikant Gowda Leave a Comment

ಪಂಚಾಯತ್‍ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ.

01 24


ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ ಜೊತೆ ತಲೆಯಲ್ಲಿಯೂ ತುಂಬಿಕೊಂಡಿರುವ ಉಗ್ರಾಣರು ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಕಛೇರಿಯ ಬಗ್ಗೆ ಈ ಪರಿಯ ನಿಷ್ಕಾಳಜಿ ಯಾಕೆನ್ನುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಆಯಾ ಭಾಗದ ಜನಪ್ರತಿನಿಧಿಗಳೇ ಉತ್ತರಿಸಬೇಕು.
ಜನನ ಮರಣ ದಾಖಲೆ, ವಿಧವಾವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ, ಭೂ ಹಿಡುವಳಿ, ಆದಾಯ, ಜಾತಿ, ಹಿಂದುಳಿದವರ್ಗ ಸಟೀಫಿಕೇಟ್ ಸೇರಿದಂತೆ

01 24 2

ನಾಡಕಛೇರಿಯಲ್ಲಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೂ ಗ್ರಾಮ ಚಾವಡಿಗೆ ಬಂದು ಪರಿಶೀಲನೆಗೊಳಪಟ್ಟು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದಿರಲಿ, ಜನಸಾಮಾನ್ಯರು ತಮ್ಮ ದಾಖಲಾತಿಗಳನ್ನು ಅಧಿಕೃತವಾಗಿ ಯಾವುದೇ ಇಲಾಖೆಗೆ ಸಲ್ಲಿಸುವುದಿದ್ದರೂ ಗ್ರಾಮಲೆಕ್ಕಿಗರ ಪರಿಶೀಲನೆ ಅತೀ ಅಗತ್ಯ. ಆದಾಗ್ಯೂ ಗ್ರಾಮ ಚಾವಡಿಗಳ ಬಗ್ಗೆ ವ್ಯವಸ್ಥೆಯ ತಾತ್ಸಾರವೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲವಾಗಿದೆ.
ಹೊಸಾಕುಳಿ, ಸಾಲ್ಕೋಡ, ಕಡತೋಕಾದಲ್ಲಿರುವ ಗ್ರಾಮ ಚಾವಡಿಯ ಮೇಲ್ಛಾವಣಿಗಳು ದುರ್ಬಲವಾಗಿ ಪಕಾಸಿ ಹೆಂಚುಗಳೆಲ್ಲಾ ಆಗೋ ಈಗೋ ಬೀಳುವಂತಿದ್ದು ಕಟ್ಟಡ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವಂತೆ ಭಾಸವಾಗುತ್ತಿದೆ. ಕಟ್ಟಡದೊಳಗಿನ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿದ್ದು ಬಹುತೇಕ ಕಡೆ ಕನಿಷ್ಠ ವಿದ್ಯುತ್ ಸಂಪರ್ಕವೂ ಸರಿಯಿಲ್ಲದೇ ಎಷ್ಟೋದಿನ ಸಿಬ್ಬಂದಿಗಳು ಮೇಣದ ಬತ್ತಿ ಬೆಳಕಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನೂ ಹೇಳಿಕೊಳ್ಳುತ್ತಿದ್ದಾರೆ. ಅನುದಾನದ ಕೊರತೆಯೋ ಇಚ್ಚಾಶಕ್ತಿಯ ಕೊರತೆಯೋ ಗ್ರಾಮಚಾವಡಿಗಳು ಮಾತ್ರ ನೇಪಥ್ಯಕ್ಕೆ ಸರಿಯುವ ಲಕ್ಷಣಗಳಂತೂ ಕಂಡುಬರುತ್ತಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು Tagged With: Backward Class Certificate, Birth Certificate, Caste, Disability Payment, For daughter's sake, Funeral, Grama Niladari, Income, Land Holding, National Family Assistance Scheme, Professional Pay, Sandhya Suraksha, village booths, village counters, Widowhood, ಅಂಗವಿಕಲರ ವೇತನ, ಅಂತ್ಯ ಸಂಸ್ಕಾರ, ಆದಾಯ, ಆಸ್ಥಿ ಪಾಸ್ತಿಗಳ ಬಗ್ಗೆ, ಕಡತದ ಜೊತೆ ತಲೆ, ಕಳೆದ ಮೂರ್ನಾಲ್ಕು ದಶಕ, ಗ್ರಾಮ ಲೆಕ್ಕಿಗರು, ಗ್ರಾಮಲೆಕ್ಕಿಗರ ಪರಿಶೀಲನೆ, ಜನನ ಮರಣ ದಾಖಲೆ, ಜಾತಿ, ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮ, ಭೂ ಹಿಡುವಳಿ, ಮಗಳ ಪಾಲಿಗೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ವಿಧವಾವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ಹಿಂದುಳಿದವರ್ಗ ಸಟೀಫಿಕೇಟ್

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...