ಹೊನ್ನಾವರ: ಗ್ರಾಮ ಪಂಚಾಯತಿಗಳಿಗೆ ಚುನಾವಣೆಗೆ ಡೇಟ್ ಪಿಕ್ಸ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಪೂರ್ವನಿಯೋಜನೆಯಾದ ಸರ್ಕಾರಿ ಕಛೇರಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೇರೆವೇರಿಸಿದ ಮಾಧ್ಯಮದವರು ನೀತಿಸಂಹಿತೆಯ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ಪಟ್ಟಣವ್ಯಾಪ್ತಿ ಎಂದು ಬಚಾವಾಗಲು ಯತ್ನಿಸಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳು, ತಾಲೂಕ ಅಧಿಕಾರಿಗಳು ಗ್ರಾಮೀಣ ಭಾಗ ಎಂದು ಹೇಳುತ್ತಾರೆ ಅಧಿಕಾರಿಗಳು ಸುಳ್ಳು ಹೇಳುತ್ತಾರಾ ಎಂದು ಮರು ಪ್ರಶ್ನಿಸಿದಾಗ ನೀತಿ ಸಂಹಿತೆ ಸಣ್ಣ ವಿಷಯ. ಕೋವಿಡ್‍ನಿಂದ 6 ತಿಂಗಳು ಕೆಲಸ ಮಾಡಲು ಆಗಿಲ್ಲ. ಈ ಹಿಂದೆ ಚುನಾವಣೆ ಎಂದು ಆಗಿರಲಿಲ್ಲ. ಅಭಿವೃದ್ದಿ ಕಾರ್ಯಗಳು ನಡೆಯಬೇಕು ಮಾಧ್ಯಮಗಳು ಇದಕ್ಕೆ ಒತ್ತು ಕೊಡಬಾರದು ಎಂದರು.
ಚುನಾವಣೆಯ ಸಮಯದಲ್ಲಿ ಚುನಾಯಿತ ಪ್ರತಿನಿಧಿಗಳು ಆದೇಶ ಉಲ್ಲಂಘನೆ ಮಾಡಿದಾಗ ನೀತಿ ಸಂಹಿತೆ ಉಲ್ಲಂಘನೆ ಕ್ರಮ ಕೈಗೊಳ್ಳಬೇಕಿದ್ದು, ಈ ವಿಷಯದಲ್ಲಿ ಅಧಿಕಾರಿಗಳು ಯಾವ ರೀತಿಯಾಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Leave a Comment