ಹೊನ್ನಾವರ:ಸಕಾಲ ಸಪ್ತಾಹದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ಸರ್ಕಾರದ 98 ಇಲಾಖೆಗಳಲ್ಲಿ 1025 ಸೇವೆಗಳು ದೊರೆಯಲಿದ್ದು, ನಾಗರಿಕರು ಸೇವೆಗಳನ್ನು ಪಡೆದುಕೊಳ್ಳಲು ಈ ಸಕಾಲ ಸಪ್ತಾಹದಲ್ಲಿ ಈ ಯೋಜನೆಯ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ನವೆಂಬರ್ 30 ರಿಂದ ಆರಂಭವಾಗಿದ್ದು ಡಿಸೆಂಬರ್5ರವರೆಗೆ ಈ ಸಪ್ತಾಹ ನಡೆಯಲಿದೆ ಎಂದು ತಹಶೀಲ್ದಾರ ವಿವೇಕ ಶೇಣ್ವಿ ಯೋಜನೆಯ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು. ತಹಶೀಲ್ದಾರ ಕಛೇರಿಯಿಂದ ಶರಾವತಿ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾದ ಮೂಲಕ ಸಕಾಲ ಸಪ್ತಾಹದ ಜಾಗೃತಿ ಕರಪತ್ರವನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಿಪಿಐ ಶ್ರೀಧರ ಎಸ್.ಆರ್,ಪಿಎಸೈ ಶಶಿಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ, ಶಿರಸ್ತೇದಾರರಾದ ಸತೀಶ ಗೌಡ, ಉಲ್ಲಾಸ ಗುನಗಿ, ಯುವಜನಸೇವಾಕ್ರೀಡಾಧಿಕಾರಿ ಸುಧೀಶ ನಾಯ್ಕ, ಕಂದಾಯ ಮತ್ತು ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
Leave a Comment