ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ರಾಜ್ಯ ಸರ್ಕಾರ ಜಾರಿಗೆ ಮರಾಠ ಅಭಿವೃದ್ದಿ ನಿಗಮ ಜಾರಿ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಮ್ಮ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ-ತಾರತಮ್ಯ ಈ ಹಿಂದಿನಿಂದಲೂ ಆಗುತ್ತಿದೆ. ಕನ್ನಡಿಗರ ಒಳಿತಿಗಾಗಿರುವ ಇರುವ ಸರ್ಕಾರ ಇತ್ತೀಚೆಗೆ ಕೆಲವು ಜಾತಿ ಆದರಿಸಿ ನಿಗಮ ರಚಿಸಿ ಅದಕ್ಕೆ ಭರಪೂರ ಅನುದಾನ ನೀಡುತ್ತಿದೆ.

ಕನ್ನಡ ನಾಡು ಹಾಗೂ ಜನತೆಯನ್ನು ಯಾವಾಗಲೂ ಅವಮಾನಿಸುವ ಮರಾಠಿಗರಿಗೆ ಮರಾಠ ನಿಗಮ ರಚಿಸಿ ಅನುದಾನ ನೀಡುವುದಕ್ಕೆ ವಿಋಓಧವಿದೆ. ರಾಜ್ಯದಲ್ಲಿ ನೆರೆಹಾವಳಿ, ಅತಿವೃಷ್ಟಿ ಅನಾವೃಷ್ಟಿ ಹಾಗೂ ಕೊರೊನಾ ಮಹಾಮಾರಿಯಂತ ಸಮಸ್ಯೆ ಬಳಲಿ ಬೆಂಡಾಗಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ನೀಡದೇ ಕೇವಲ ರಾಜಕೀಯ ಲಾಭಕ್ಕಾಗಿ ಮರಾಠಿಗರನ್ನು ಒಳೈಸುವುದು ಸರಿಯಲ್ಲ. ನಮ್ಮ ನಾಡಿನ ಕನ್ನಡಿಗರ ಇಚ್ಛೆಗೆ ವಿರುದ್ಧವಾಗಿ ನಿಗಮ ರಚಿಸಿ ಅದಕ್ಕೆ ಅನುದಾನ ಬಿಡುಗಡೆ ಮಾಡಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ನಾವು ಈ ಮೂಲಕ ಖಂಡಿಸುತ್ತೇವೆ ಹಾಗೂ ತಾವು ಈ ಕೂಡಲೇ ಸರ್ಕಾರದ ಕ್ರಮವನ್ನು ತಡೆಯಬೇಕಾಗಿ ಕೋರಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.

ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಉದಯರಾಜ ಮೇಸ್ತ, ಪ್ರಮುಖರಾದ ಸುಧಾಕರ ಹೊನ್ನಾವರ, ಕೃಷ್ಣಾ ರಂಗಾ ಹರಿಜನ, ಕೇಶವ ಮೇಸ್ತ, ಗಣಪತಿ ಮೇಸ್ತ, ಶ್ರೀಕಾಂತ ಮೇಸ್ತ ,ಸುಭಾಷ ಮೇಸ್ತ, ಸಂದೀಪ ಮೇಸ್ತ,ವೆಂಕಟೇಶ ಮೇಸ್ತ, ರಾಹುಲ್ ಮೇಸ್ತ, ಪಿ. ಜಯೇಶ, ಪಿ.ಬಾಲಾಜಿ, ಪವನ ಮೇಸ್ತ,
ಮಾದೇವ ಅಂಬಿಗ, ಹರೀಶ ಎಸ್ ನಾಯ್ಕ, ಅಲ್ತಾಪ್ ಶೇಖ್, ಹನೀಫ್ ಶೇಖ್, ಈಶ್ವರ್ ಎಂ ಮೇಸ್ತ
ಮತ್ತಿತರರು ಹಾಜರಿದ್ದರು.
Leave a Comment