ಕುಮಟಾ; ತಾಲೂಕಿನ ಉಳ್ಳೂರು ಮಠದಲ್ಲಿ ಮನೆಯೊಂದರ ಬಚ್ಚಲು ಮನೆಯ ಒಳಗೆ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಹೊಕ್ಕಿ ಆತಂಕ ಸೃಷ್ಟಿಸಿತು.

ಆಕಸ್ಮಿಕವಾಗಿ ಕಂಡ ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು .
ಶ್ರೀಘ್ರವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಉರಗ ಪ್ರೇಮಿ ಪವನ್ ನಾಯ್ಕ ಅವರ ಸಹಾಯದಿಂದ ಕಾಳಿಂಗ ಅವನ್ನು ಹಿಡಿದು ರಕ್ಷಿಸಿ ದಟ್ಟಾರಣ್ಯಕ್ಕೆ ಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಬೃಹತ್ ಕಾಳಿಂಗ ಸರ್ಪವನ್ನು ನಿರಾಂತಕವಾಗಿ ಹಿಡಿದು ಜನರ ಭಯವನ್ನು ಹೋಗಲಾಡಿಸಿದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಯಿತು.
Leave a Comment