• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಮಂಕಿ ಕೊಕ್ಕೊಶ್ವರ ಸಭಾವನದಲ್ಲಿ ಜಿಲ್ಲಾ ರಾಮಕ್ಷತ್ರೀಯ ನೌಕರ ಸಂಘದ ೧೦ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು

January 26, 2021 by Vishwanath Shetty Leave a Comment

ಹೊನ್ನಾವರ : ಸೇವಾ ಮನೋಭಾವನೆಯಿಂದ ಮಾಡಿದ ಕಾರ್ಯವು ಭಗವಂತನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸಾಮಾಜಿಕ ಕಾರ್ಯದಿಂದ ಸಿಗುವ ತೃಪ್ತಿ ವ್ಯಕ್ತಿಯಲ್ಲಿ ಚೈತನ್ಯವನ್ನು ನೀಡುತ್ತದೆ. ಸಮಾಜವನ್ನು ನಾವು ಗೌರವಿಸಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಸ್ವರ್ಣವÀಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಸಮಾಜವು ಸಂಘಟನೆಯಾಗುತ್ತಿರುವುದು. ಸಂತೋಷದ ವಿಷಯವೆಂದು ರಾಮ ಕ್ಷತ್ರೀಯ ಸೇವಾ ಶ್ರೀ ಪ್ರಶಸ್ತಿ ಪುರಸ್ಕøತ ಎಂ. ಡಿ. ನಾಯ್ಕ ನುಡಿದರು.


ಅವರು ಇತ್ತೀಚೆಗೆ ಮಂಕಿ ಕೊಕ್ಕೇಶ್ವರದ ರಾಮಕ್ಷತ್ರಿಯ ಸಬಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘದ 10ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸನ್ಮಾನ ಸಮಾರಂಭ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೊನ್ನಾವರ ತಾಲೂಕ ಪಂಚಾಯತ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸುರೇಶ ನಾಯ್ಕರವರು ಪ್ರತಿಬಿಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಸಂಘದ 10 ವರ್ಷಗಳ ಕಾರ್ಯವನ್ನು ನೆನಪಿಸಿದರು. ಸಮಾಜದಲ್ಲಿ ಕಷ್ಟದಲ್ಲಿರುವ ಕುಟುಂಬ ಹಾಗೂ ಶಿಕ್ಷಣಾರ್ಥಿಗಳಿಗೆ ಸಹಾಯ ಮಾಡುವ ಗುಣ ನಮ್ಮದಾಗಿಸಿಕೊಂಡಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ರಾಮಕ್ಷತ್ರಿಯ ಸಮಾಜದ ನೌಕರರು ಯಾವುದೇ ಕ್ಷೇತ್ರ ಅಥವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಾಮಾಣಿಕತೆ ಮತ್ತು ಶೃದ್ದೆಯಿಂದ ಕಾರ್ಯನಿರ್ವಹಿಸಿ ಸಮಾಜದ ಗೌರವವನು ಹೆಚ್ಚಿಸಿರುತ್ತಾರೆ ಎಂದರು.


ಗೌರವಾಧ್ಯಕ್ಷರಾದ ಆನಂದ ನಾಯ್ಕರವರು ಮಾತನಾಡಿ ಸ್ಪರ್ಧತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಪಾಲಕರು ಮನೆಯಲ್ಲಿ ಮಾಡಿಸಿ ನೌಕರರ ಸಂಖ್ಯೆ ಹೆಚ್ಚಾಗಲು ನೆರವಾಗಬೇಕು ಎಂದರು. ಸಭಾ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಉದಯ ನಾಯ್ಕರವರು ರಾಮಕ್ಷತ್ರಿಯ ನೌಕರರ ಭವನ ನಿರ್ಮಾಣದ ಗುರಿಯೊಂದಿಗೆ ಸಂಘಟನೆಯನ್ನು ಇನ್ನಷ್ಡು ಬಲಪಡಿಸೋಣ ಎನ್ನುತ್ತಾ ಎರಡು ವರ್ಷಗಳ ತಮ್ಮ ಅವಧಿಯಲ್ಲಿ ಸಹಕರಿಸಿದವರನ್ನು ನೆನಪಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ರಾಜೇಶ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಅರುಣ ನಾಯ್ಕ, ಉದಯ ಎಚ್ ನಾಯ್ಕ, ಜಗದೀಶ ನಾಯ್ಕ, ಶಿಲ್ಪ ಜಿ. ಇ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಎಸ್. ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಂಕಿಯ ವಿದ್ಯಾರ್ಥಿಗಳಿಗೆ ಶೈಲ ಅರವಿಂದ್ ರವರ ಪ್ರಾಯೋಜಕತ್ವದಲ್ಲಿ ಪುರಸ್ಕರಿಸಲಾಯಿತು. ಉಲ್ಲಾಸ ನಾಯ್ಕ ಬೈಲೂರ್, ನಾಗರಾಜ ನಾಯ್ಕ ಮಂಕಿ, ರಮಾಕಾಂತ ನಾಯ್ಕ ಕುದ್ರಗಿ ಹಾಗೂ ನಿವೃತ್ತ ನೌಕರರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಛದ್ಮವೇಷ ಸ್ಪರ್ದೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ನಾಗರಾಜ ನಾಯ್ಕ ಪ್ರಾರ್ಥಿಸಿದರು. ವಿನಾಯಕ ನಾಯ್ಕ ಸ್ವಾಗತಿಸಿದರು. ರಾಘವೇಂದ್ರ ನಾಯ್ಕ ವರದಿ ವಚನ ಮಾಡಿದರು. ಶ್ಯಾಮಲಾ ನಾಯ್ಕ ಹಾಗೂ ಉದಯ ವಿ. ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಗಜಾನನ ನಾಯ್ಕ, ವಿಷ್ಣು ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ನಿರೂಪಿಸಿದರು. ಎಂ.ಟಿ ಗಣಪತಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಬಲಪಡಿಸೋಣ, ಮಂಕಿ ಕೊಕ್ಕೇಶ್ವರದ, ರಾಮಕ್ಷತ್ರಿಯ ನೌಕರರ ಭವನ, ರಾಮಕ್ಷತ್ರಿಯ ಸಬಾಭವನ, ಶ್ರೀಗಳ ಮಾರ್ಗದರ್ಶನ

Explore More:

Vishwanath Shetty

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 932,977 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ

February 25, 2021 By bkl news

ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ

February 25, 2021 By bkl news

ರೈತರ ಪರಿಶ್ರಮವು ದೇಶವನ್ನು ಸಂಕಷ್ಟದಿಂದ ಪಾರುಮಾಡುವ ಸಾಮರ್ಥ್ಯವನ್ನು ಹೊಂದಿದೆ: ನರೇಂದ್ರ ಸಿಂಗ್ ತೋಮರ್

February 25, 2021 By Sachin Hegde

ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್

February 25, 2021 By Vishwanath Shetty

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೇತ್ರಾಣಿಯ ದ್ವೀಪದ ಅತಿ ಪುರಾತನ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಸಂಪನ್ನ

February 25, 2021 By bkl news

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಧಿಕಾರ ಸ್ವೀಕಾರ

February 24, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.