ಹೊನ್ನಾವರ: ಜೀವನದುದ್ದಕ್ಕೂ ಸಮಾಜ ಅಭಿವೃದ್ಧಿಗಾಗಿ ದುಡಿದು ಮಾದರಿಯಾದ ದಿ.ಮೊಹನ ಖಾರ್ವಿಯವರು ಅಪಾರ ಸಮಾಜಿಕ ಕಳಕಳಿ ಹೊಂದಿದ್ದರು ಎಂದು ಅಖಿಲಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷ ಕೆ.ಬಿ ಖಾರ್ವಿಯವರು ನುಡಿದರು.

ಅವರು ಮಂಕಿ ಮಡಿಯಲ್ಲಿಯರುವ ಭದ್ರಾಂಭಿಕೆ ದೇವಸ್ಥಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಿ ಮಾತನಾಡಿದರು.
ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಸಭಾಭವನದ ನಿರ್ಮಾಣದಲ್ಲಿ ಮೋಹನ ಖಾರ್ವಿಯವರು ಉತ್ತಮ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಕೊಂಕಣಿ ಖಾರ್ವಿ ಮಹಾಜನ ಸಭಾ ಸದಾ ಸ್ಮರಿಸುತ್ತದೆ ಎಂದರು.
ಇನ್ನೋರ್ವ ಮುಖಂಡ ವಸಂತ ಖಾರ್ವಿ ಭಟ್ಕಳರವರು ಮಾತನಾಡಿ ಮೋಹನ ಖಾರ್ವಿಯವರು ಸಮಾಜದ ಕಳಕಳಿಯನ್ನು ಹೊಂದಿರುವ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತ. ದೈವ ಭಕ್ತ. ಗುರುಗಳ ಬಗ್ಗೆ ಅಪಾರ ಭಕ್ತಿ ಶೃದ್ದೆ ಹೊಂದಿದ್ದರು. ಮಂಕಿ ಕೆಂಡ ಮಹಾಸತಿ ದೇವಸ್ಥಾನದ ಸ್ಥಾಪಕ ಅಧ್ಯಕ್ಷರಾಗಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವನ್ನು ವಿಶೇಷವಾಗಿ ಸಂಘಟಿಸಿ ಶೃಂಗೇರಿ ಜಗದ್ಗುರುಗಳ ಪ್ರಶಂಸೆಗೆ ಪಾತ್ರರಾಗಿದ್ದರು.ಅವರ ಸಮಾಜದ ಕಳಕಳಿ, ದೇವರು, ಧರ್ಮ, ಸಂಸ್ಕøತಿ ಬಗೆಗಿನ ಅಭಿಮಾನ ಅನುಕರಣೀಯ ಎಂದರು.
ಮಂಕಿ ಹಳೇಮಠ ಗ್ರಾಮಪಂಚಾಯತ ನಿಕಟಪೂರ್ವ ಉಪಾಧ್ಯಕ್ಷ ಸುರೇಶ್ ಖಾರ್ವಿಯವರು ಮಾತನಾಡಿ ಮೋಹನಣ್ಣನವರು ಮೀನುಗಾರರ ಸಂಘಟನೆ ,ಕೊಂಕಣಿ ಖಾರ್ವಿ ಸಮಾಜದ ಸಂಘಟನೆ ತುಂಬಾ ಓತ್ತು ನೀಡಿದ್ದರು. ಮಂಕಿ ದೇವಸ್ಥಾನ ಸ್ಥಾಪಕ ಅಧ್ಯಕ್ಷರಾಗಿ ದೇವಸ್ಥಾನದ ನಿರ್ಮಾಣ ಕೆಲಸದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎನ್ನುತ್ತಾ ಅವರ ಸಾಮಜಿಕ ಕಾರ್ಯಗಳ ಬಗ್ಗೆ ಸ್ಮರಿಸಿಕೊಂಡರು.
ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಸಾರಂಗ, ಮುಖಂಡರಾದ ಉಮೇಶ್ ಮೇಸ್ತ ಹೊನ್ನಾವರ, ಪರಮೇಶ್ವರ ಮೇಸ್ತ,ಅಶೋಕ ಕಾಸರಕೋಡ, ಹೇಮಂತ ಭಟ್ಟ, ಉಮೇಶ್ ಅಣ್ಣಪ್ಪ ಖಾರ್ವಿ ಮಂಕಿ, ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪತ್ರಕರ್ತ ವೆಂಕಟೇಶ ಮೇಸ್ತ, ರಾಘು ಖಾರ್ವಿ, ಉಲ್ಲಾಸ ನಾಯ್ಕ ಬಣಸಾಲೆ, ಈಶ್ವರ ಹರಿಕಾಂತ, ಮೋಹನ ಖಾರ್ವಿ ಕುಟುಂಬದ ಸದಸ್ಯರು ಹಾಗೂ ಅವರ ಹಿತೈಷಿಗಳು ಸಭೆಯಲ್ಲಿ ಶೃದ್ದಾಂಜಲಿ ಸಲ್ಲಿಸಿದರು.
Leave a Comment