ಹೊನ್ನಾವರ:ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ರಾಜ್ಯದ ಮೀನುಗಾರ ಸಹಕಾರ ಪಡೆದು ಉಗ್ರ ಹೋರಾಟ ನಡೆಸಲು ರಾಷ್ಟಿçÃಯ ಮೀನುಗಾರರ ಸಂಘಟನೆ ನಿರ್ಧಸಿದೆ ಎಂದು ಸಂಘಟನೆ ತಿಳಿಸಿದೆ.

ರಾಷ್ಟಿçÃಯ ಮೀನುಗಾರರ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರು ಕಾಸರಕೋಡ ಟೋಂಕಾಕೆ ತೆರಳಿ ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ರಾಮಾ ಮೋಗೇರರವರು ಮತನಾಡಿ ಹೊನ್ನಾವರ ಕಾಸರಕೋಡಿನಲ್ಲಿ ನಿರ್ಮಿಸಲು ಹೈದರಬಾದ ಮೂಲದ ಹೊನ್ನಾವರ ಪೋರ್ಟ ಪ್ರೆöÊವೆಟ್ ಲಿಮಿಟೆಡ್ ಹೆಸರಿನಲ್ಲಿ ಮೀನುಗಾರರ ಜೀವನ ಮೇಲೆ ಚೆಲ್ಲಾಟವಾಡುತ್ತಿದೆ. ಈ ಯೋಜನೆ ಸಂಪೂರ್ಣ್ ಕಾನೂನೂ ಬಾಹೀರವಾಗಿದ್ದು ಸ್ಥಳೀಯ ಮೀನುಗಾರರ ಮುಖಂಡರಿAದ ಸಂಪೂರ್ಣ ದಾಖಲೆ ಪಡೆದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಮೂಲಕ ಸದನದಲ್ಲಿ ಗಮನಸೆಳೆಯಲಿದ್ದೇವೆ ಎಂದರು. ಹಿಂದಿನ ಜಿಲ್ಲಾಧಿಕಾರಿ ಇನ್‌ಕಾಂಗ್ಲೋ ಜಮೀರ ಇಲ್ಲಿರುವಾಗ ಸ್ಥಳೀಯ ಮೀನುಗಾರಿಂದ ವಿರೋಧವಿದ್ದರು ಈ ಯೋಜನೆಗೆ ಅನುಮತಿ ನೀಡಿದ್ದಾರೆ, ಸ್ಥಳೀಕರ ವಿರೋಧವಿದ್ದರೆ ಯಾವುದೇ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ಹಾಗೆ ಜಾರಿಗೆ ತಂದರೆ ಅದು ಕಾನೂನು ವಿರುದ್ದ. ಇದನ್ನು ರಾಷ್ಟರೀಯ ಮೀನುಗಾರರ ಸಂಘನೆ ಸಂಪೂರ್ಣ ವಿರೋಧಿಸುತ್ತದೆ ಹಾಗೂ ಸ್ಥಳೀಯ ಮೀನುಗಾರರ ಹೋರಾಟದಲ್ಲಿ ಸದಾ ಬೆಂಬಲಿಸುತ್ತದೆ. ಮೀನುಗಾರರ ಜೀವನಕ್ಕೆ ಮಾರಕವಾಗಿರುವ ಈ ಯೋಜನೆಯ ಕಾಮಗಾರಿಉನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ಮೀನುಗಾರರನ್ನು ಒಟ್ಟುಗೂಡಿಸಿ ಕಂಪನಿಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿದ್ದೆವೆ ಎಂದರು.
ಮೀನುಗಾರರ ಸಂಘನೆಯ ರಾಜ್ಯ ಕಾರ್ಯಾದ್ಯಕ್ಷ ಮಂಜುನಾಥ ಸೂನೆಗಾರರವರು ಮಾತನಾಡಿ ಸರ್ಕಾರ ಹೊನ್ನಾವರ ತಾಲ್ಲೂಕಿನಲ್ಲಿ ಈ ಬಂದರನ್ನು ಅವಲಂಬಿತರಾಗಿರುವ ೨೩ ೫೦೦ ಜನರ ಜಿವನವನ್ನು ಕಸಿದುಕೊಳ್ಳುತ್ತಿದೆ. ಆದುದರಿಂದ ತಕ್ಷಣ ಇ ವಾಣಿಜ್ಯ ಬಂದರಿನ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಸಂಘಟನೆಯ ವತಿಯಿಂದ ಉಗ್ರಹೋರಾಟ ನಡೆಸಲು ನಿರ್ಧರಿಸಿದ್ದೆವೆ ಎಂದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಾAತ ಕೋಚರೆಕರರವರು ಮಾತನಾಡಿ ಇ ಭಾಗದ ಜನತೆಗೆ ಶರಾವತಿ ಹೂಳಿನಂತಹ ಗಂಭೀರ ಸಮಸ್ಯೆಗಳಿದ್ದರು ಅದನ್ನು ಪರಿಹಾರಮಾಡದೆ ಸರ್ಕಾರ ತಮ್ಮ ಸ್ವಾರ್ಥಕ್ಕಾಗಿ ವಾಣಿಜ್ಯ ಬಂದರು ನಿರ್ಮಿಸಲು ಹೋರಟಿದ್ದು ತಕ್ಷಣ ಕೈಬೀಡಬೇಕೆಂದು ಆಗ್ರಹಿಸಿದರು. ಮೀನುಗಾರರ ಮುಖಂಡ ವಿವನ್ ಫರ್ನಾಂಡಿಸರವರು ಮಾತನಾಡಿ ವಾನೀಜ್ಯ ಬಂದರು ನಿರ್ಮಿಸಲು ಹೊರಟಿರುವ ಖಾಸಗಿ ಕಂಪನಿ ಮೀನುಗಾರರ ಬದುಕನ್ನು ನಾಶ ಮಾಡಲು ಹೋರಟಿದೆ. ತಮ್ಮ ಜೀವನಕ್ಕೆ ಮಾರಕವಾಗಿರುವ ಇಂತಹ ಯೋಜನೆಗಳನ್ನು ವಿರೋಧಿಸಿದರೆ ಸುಳ್ಳು ಕೇಶಗಳನ್ನು ದಾಖಲಿಸಿ ತೊಂದರೆ ನೀಡುತ್ತಿದೆ. ಆದರಿಂದ ಈ ಪೋಟ್ ವಿರುದ್ದ ರಾಜ್ಯದ ಮೀನುಗಾರರ ಸಂಘಟನೆಗಳು ಸೇರಿ ಉಗ್ರ ಹೋರಾಟ ನಡೆಸಲು ನಿರ್ಧರಿಸುತಿದ್ದೆವೆ ಎಂದು ತಿಳಿದರು . ಈ ಸಂದರ್ಭದಲ್ಲಿ ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಅಜೀತ ತಾಂಡೇಲ್, ಹೊನ್ನಾವರ ಪರ್ಸಿನ್ ಬೋಟ್ ಮಲೀಕ ಸಂಘದ ಅಧ್ಯಕ್ಷ ಅಮ್ಜಾ ಪಟೇಲ್, ಮುಖಂಡರಾದ ಶೇಷಗಿರಿ ತಾಂಡೇಲ್, ಹಸಿಮೀನು ವ್ಯಾಪರಸ್ಥರ ಸಂಘದ ಅಧ್ಯಕ್ಷ ಗಣಪತಿ ಈಶ್ವರ ತಾಂಡೇಲ್, ಮೀನುಗಾರರ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಜೇಶ ತಾಂಡೇಲ, ಸಂದೀಪ ತಾಂಡೇಲ್ ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.
Leave a Comment