ಹೊನ್ನಾವರ: ಬೆಂಗಳೂರಿನ ಜನ್ಮಭೂಮಿ ಫೌಂಢೇಶನ್ ರಿ. ಸಂಸ್ಥೆಯು ಗೋವಾದಲ್ಲಿ ನಡೆಸುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ “ಪ್ರೌಡ್ ಆಫ್ ಇಂಡಿಯಾ” “ನ್ಯಾಷನಲ್ ಅವಾರ್ಡ”ಗೆ ಖರ್ವಾ ತಲೆಗೆರೆಯ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಸುಬ್ರಾಯ ಭಟ್ಟ ಇವರನ್ನು ಆಯ್ಕೆ ಮಾಡಿದೆ. ವಿಶ್ವನಾಥ ಭಟ್ಟ ಇವರು ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರೂ ಆಗಿದ್ದಾರೆ.

ಪೆ. 14 ರಂದು ಗೋವಾದ ವಾಸ್ಕೋದಲ್ಲಿ ಲಾ-ಪಾಜ್ ಹೊಟೆಲ್ನಲ್ಲಿ ನಡೆಯುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಈ ಭಾರತ ಗೌರವ ಪ್ರಶಸ್ತಿ ಪ್ರಧಾನವಾಗಲಿದೆ. ರವಿ ಕೆ. ಶೆಟ್ಟಿ, ಅಧ್ಯಕ್ಷರು, ಡಿ.ಎಸ.ಎಂ.ಎಸ್. ಕಾರವಾರ ಪ್ರದೀಪ ಡಿ ನಾಯ್ಕ ಉಪಾಧ್ಯಕ್ಷರು, ಶ್ರೀಧರ ಹೆಗಡೆ ಮುಖ್ಯ ಕಾರ್ಯನಿರ್ವಾಹಕರು, ಮತ್ತು ಆಡಳಿತ ಮಂಡಳಿ ಸದಸ್ಯರು ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರ ಸಂಘ ಇವರುಗಳು ಅಭಿನಂದಿಸಿದ್ದಾರೆ.
Leave a Comment