ಭಟ್ಕಳ: ತಾಲೂಕಿನ ಶಿರಾಲಿ ತಟ್ಟಿಹಕ್ಕಲ್ನಲ್ಲಿರುವ ಸರಕಾರಿ ಮೈದಾನ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದರಿ ಮೈದಾನದ ಸರ್ವೇ ನಡೆಸುವಂತೆ ಶಾಸಕ ಸುನಿಲ್ ನಾಯ್ಕ ಸೂಚಿಸಿದ್ದಾರೆ.
ಮೈದಾನ ಅಭಿವೃದ್ಧಿಯ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕರು, ಮೈದಾನ ಹಾಗೂ ನಕಾಶೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಸರ್ವೆ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ, ಮೈದಾನದ ಸುತ್ತ ಬೇಲಿ ನಿರ್ಮಿಸುವ ನಿಟ್ಟಿನಲ್ಲಿ ರು.10 ಲಕ್ಷ ಅನುದಾನವನ್ನು ಒದಗಿಸಲಾಗುವುದು. ಈಗಾಗಲೇ ಕ್ರೀಯಾಯೋಜನೆ ಸಿದ್ಧವಾಗಿದೆ ಎಂದು ಅವು ತಿಳಿಸಿದರು. ತಹಸೀಲ್ದಾರ ಎಸ್.ರವಿಚಂದ್ರ ಉಪಸ್ಥಿತರಿದ್ದರು.
Leave a Comment