ಹೊನ್ನಾವರ; ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿ ಕುಮಟಾಕ್ಕೆ ತಹಶೀಲ್ದಾರ ಗ್ರೇಡ್ ೧ ಹುದ್ದೆಗೆ ಪದನ್ನೊತಿ ಹೊಂದಿದ ಸತೀಶ ಗೌಡ

ಇವರನ್ನು ಆಲೋಚನಾ ವೇದಿಕೆ ಹಾಗೂ ವಿವಿಧ ಸಂಘಟನೆಯವರು ಸನ್ಮಾನಿಸಿ ಬಿಳ್ಕೋಟ್ಟರು. ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಆಲೋಚನಾ ವೇದಿಕೆ ಅಧ್ಯಕ್ಷರು ನಿವೃತ್ತ ಪಾಧ್ಯಾಪಕರಾದ ಡಾ.ಶ್ರೀಪಾದ ಶೆಟ್ಟಿ ಮಾತನಾಡಿ ಜನಮಾನಸದಲ್ಲಿ ಜನಪರ ಅಧಿಕಾರಿಯಾಗಿ ,ಸೇವಾ ಮನೋಭಾವ ಹೊಂದಿರುವ ಅನನ್ಯವ್ಯಕ್ತಿಯಾಗಿ ಇತರರಿಗೆ ಮಾದರಿಯಾಗಿದ್ದರು. ಸೇವಾ ಅವಧಿಯಲ್ಲಿ ಬಡವ ಶ್ರೀಮಂತ ಎಂದು ಭೇದ ಮಾಡದೇ ತಾಲೂಕಿನ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ನಮ್ಮ ವೇದಿಕೆ ಸನ್ಮಾನಿಸಲು ತಿರ್ಮಾನಿಸಿದಾಗ ಹಲವರು ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವುದು ಸಂತಸಮೂಡಿದೆ ಎಂದರು.ಆಲೋಚನಾ ವೇದಿಕೆ, ಲಯನ್ಸ ಕ್ಲಬ್, ರೋಟರಿ ಕ್ಲಬ್, ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಸನ್ಮಾನಿಸಿ ಗೌರವಿಸಿದರು.ಸನ್ಮಾನ ಸ್ವೀಕರಿಸಿ ಬಳಿಕ ಸತೀಶ ಗೌಡ ಮಾತನಾಡಿ ನನ್ನ ಬದುಕಿನ ಅದ್ಬುತ ಕ್ಷಣ ಎಂದರೆ ತಪ್ಪಾಗಲಾರದು. ತಾಲೂಕಿನ ಜನತೆ ಪ್ರೀತಿಯಿಂದ ನನಗೆ ಸಹಕಾರ ನೀಡಿದ್ದರು. ಸಹಕಾರಕ್ಕೆ ಅಭಿನಂದಿಸಿ ಸೇವಾ ಅವಧಿಯ ಕ್ಷಣವನ್ನು ಸ್ಮರಿಸಿದರು.ವೇದಿಕೆಯಲ್ಲಿ ಉದ್ಯಮಿ ಜೆ.ಟಿ.ಪೈ, ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಕ್ಷೇತ್ರ ಶಿಕ್ಷಣಾಧಿಕಾರಿ,ಡಿ.ಆರ್.ನಾಯ್ಕ, ಲಯನ್ಸ ಕಾರ್ಯದರ್ಶಿ ಎಂ.ಜಿ.ನಾಯ್ಕ, ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಸಾಧನಾ ಬರ್ಗಿ, ದಿನೇಶ ಕಾಮತ್, ಗಣಪತಿ ನಾಯ್ಕ ಬಿಟಿ ಮತ್ತಿತರರು ಉಪಸ್ಥಿತರಿದ್ದರು.
Leave a Comment