ಹೊನ್ನಾವರ: ತಾಲೂಕಿನ ಮಂಕಿ ದೇವರಗದ್ದೆಯ ಮನೆ ಪಕ್ಕದ ಬಯಲಿನಲ್ಲಿ ತಮ್ಮ ವೈಯಕ್ತಿಕ ಲಾಭಕೊಸ್ಕರ ಕುಟಿಕುಟಿ ಜೂಜಾಟದಲ್ಲಿ ತೊಡಗಿರುವಾಗ ಮಂಕಿ ಪಿಎಸೈ ಪರಮಾನಂದ ಕೋಣ್ಣೂರು ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ 9890 ನಗದು, ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ. ದೇವರಗದ್ದೆಯ ಭಾಸ್ಕರ ಸುಬ್ರಾಯ ನಾಯ್ಕ, ಗಣಪತಿ ಸುಬ್ರಾಯ ನಾಯ್ಕ, ಗೋಪಾಲ ಮಂಜು ನಾಯ್ಕ, ಮೂಲೆಮನೆಯ ಸಂತೋಷ ನಾರಾಯಣ ನಾಯ್ಕ, ತಿಮ್ಮಪ್ಪ ಧರ್ಮಾ ನಾಯ್ಕ, ದಾಸನಮಕ್ಕಿಯ ಮಾಬ್ಲ ಹನುಮಂತ ನಾಯ್ಕ, ರಾಮನಗರದ ಶ್ರೀಧರ ಅಚಲಗುಂಡಿ ನಾಯ್ಕ, ಗುಳದಕೇರಿಯ ಉಲ್ಲಾಸ ದೇವಯ್ಯ ನಾಯ್ಕ, ಹಳೇಮಠದ ಮೋಹನ ಮಾದೇವ ನಾಯ್ಕ, ಮಾವಿನಕಟ್ಟೆಯ ರಘುವೀರ ಗಜಾನನ ನಾಯ್ಕ ಎನ್ನುವವರ ಮೇಲೆ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment