ಭಟ್ಕಳ: ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ತಮ್ಮ ಮೇಲೆ ಗಣೇಶ ಹರಿಕಾಂತ ಎಂಬುವವರ ಹಪ್ತಾ ವಸೂಲಿಗೆ ಸಂಬಂಧಿಸಿದಂತೆ ನೀಡಿದ ದೂರು, ಆರೋಪ ಶುದ್ದ ಸುಳ್ಳು ಹಾಗೂ ಗಣೇಶ ಹರಿಕಾಂತ ಎಂಬುವವರೇ ನಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದು ಬಗ್ಗೆ ನಾನು ನೀಡಿದ ದೂರು ಪೊಲೀಸರು ದಾಖಲಿಸದೇ ಇರುವ ವಿರುದ್ದ ನಗರ ಠಾಣೆಯ ಎದುರು ಶುಕ್ರವಾರದಂದು ಶ್ರೀರಾಮ ಸೇನೆ ವತಿಯಿಂದ ಧರಣಿ ನಡೆಸಲಾಯಿತು.

ಧರಣಿ ನಿರತ ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ಮಾತನಾಡಿ ‘10 ವರ್ಷದಿಂದ ಮುಡೇಶ್ವರದಲ್ಲಿ ಜಯಂತ ನಾಯ್ಕ ಹಪ್ತಾ ವಸೂಲಿ ಮಾಡುತ್ತಿದ್ದಾನೆಂದು ನನ್ನ ಮೇಲೆ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಿದ್ದು ಒಂದು ವೇಳೆ ನನ್ನ ಆರೋಪಿಸಿದವರೆಲ್ಲರೂ ನಿಗದಿತ ದಿನದಂದು ಧರ್ಮಸ್ಥಳಕ್ಕೆ ಬಂದು ದೇವರ ಮುಂದೆ ಕಾಯಿ ಮುಟ್ಟಿ ಆಣೆ ಮಾಡಲಿ ಆಗ ನಂಬುತ್ತೇನೆ, ಅವರು ಬರದೇ ಇದ್ದರೆ ನನ್ನ ಮೇಲಿನ ಆರೋಪಿ ಸುಳ್ಳು ಎಂಬುದು ಸಾಬೀತಾಗಲಿದೆ. ಬೇಕಿದ್ದರೆ ಧರ್ಮಸ್ಥಳಕ್ಕೆ ಬರುವ ಖರ್ಚಿ ಸಹ ನಾನೇ ಭರಿಸಲಿದ್ದೇನೆ. ಮುರ್ಡೇಶ್ವರದಲ್ಲಿ ನಿಜವಾಗಿಯೂ ಹಪ್ತಾ ವಸೂಲಿ ಮಾಡಿದವರು ಯಾರು ಹಾಗೂ ಭಾರಿ ದೊಡ್ಡ ಅವ್ಯವಹಾರ ನಡೆಸಿರುವವರು ಯಾರು ಎಂಬುದರ ಬಗ್ಗೆ ಶೀಘ್ರದಲ್ಲಿ ಎಲ್ಲವೂ ಜನರ ಮುಂದೆ ಇಡಲಿದ್ದೇನೆ. ಇನ್ನು ಮುಂದೆ ಕೇವಲ ದಾಖಲೆಗಳು ಮಾತ್ರ ಸತ್ಯವನ್ನು ಬಿಚ್ಚಿಡಲಿದೆ ಎಂದು ಆರೋಪಿಸಿದರು.ಜನವರಿ 6ರಂದು ರಾತ್ರಿ 7.30ರ ಸುಮಾರಿಗೆ ಮುಡೇಶ್ವರದ ಕಡಲ ತೀರದಲ್ಲಿ ನಡೆದುಕೊಂಡು ಹೋಗುವಾಗ ಗಣೇಶ ಮಂಜುನಾಥ ಹರಿಕಾಂತ ಎನ್ನುವವರು ನನ್ನನ್ನು ಅಡ್ಡಗಟ್ಟಿ ಹಣೆಗೆ ಬಂದೂಕು ಇಟ್ಟು ಹೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾಹಿತಿ ಹಕ್ಕಿನಲ್ಲಿ ನನ್ನ ಬಗ್ಗೆ ಮಾಹಿತಿ ಪಡೆಯುತ್ತಿರುವುದು ನನಗೆ ತಿಳಿದಿದೆ. ಇದೇ ರೀತಿ ನನ್ನ ವ್ಯವಹಾರದಲ್ಲಿ ತೊಂದರೆ ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಜೇಬಿನಲ್ಲಿದ್ದ 4300 ರೂ.ಗಳನ್ನು ಲೂಟಿ ಮಾಡಿ ಹೋಗಿರುವ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲದಿರುವಕ್ಕೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಮೀನಾಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿದರು.
Leave a Comment