ಹಳಿಯಾಳ:- ಜನ್ಮದಿನ ಆಚರಿಸಿಕೊಂಡ ಯುವಕ ಜನ್ಮದಿನದಂದೆ ಅನುಮಾನಾಸ್ಪದವಾಗಿ ಸಾವಿಗಿಡಾಗಿರುವ ದುರ್ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಇಂದಿರಾನಗರದ ರಹವಾಸಿ ಯುವಕ ಗುರು ರಾಮಾಂಜನೇಯ ಮಾದರ (೨೬) ಜನ್ಮದಿನದಂದೆ ಮೃತಪಟ್ಟ ನತದೃಷ್ಟ ಯುವಕನಾಗಿದ್ದಾನೆ.
ಪಟ್ಟಣದ ಮೌರ್ಯ ಹೊಟೆಲ್ ಪಕ್ಕದ ಪುರಸಭೆಯವರು ಹೊಸದಾಗಿ ಕಟ್ಟುತ್ತಿರುವ ಕಟ್ಟದಲ್ಲಿ ಮೆಟ್ಟಿಲ ಮೇಲಿಂದ ಸುಮಾರು 4 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ ಆದರೇ ಮೃತನ ತಂದೆ ರಾಮಾಂಜನೇಯಬ ಅವರು ಹಳಿಯಾಳ ಠಾಣೆಯಲ್ಲಿ ನೀಡಿದ ದೂರಿನಂತೆ ದಿ.೧೬ ರ ರಾತ್ರಿ 10.30 ರ ರಾತ್ರಿ ದಿ.೧೭ ರ ಬೆಳಗ್ಗಿನ ೧೦.೪೫ ವರೆಗಿನ ಅವಧಿಯಲ್ಲಿ ಮೆಟ್ಟಿಲುಗಳ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಂತೆ ಕಂಡು ಬರುತ್ತದೆ ಕಾರಣ ಹೆಚ್ಚಿನ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿಪಿಐ ಮೋತಿಲಾಲ್ ಪವಾರ್ ಮತ್ತು ಪಿಎಸ್ ಐಗಳಾದ ಯಲ್ಲಾಲಿಂಗ್ ಕುನ್ನೂರ, ರಾಜಕುಮಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment