ಹೊನ್ನಾವರ: ಶಾಂತಿ ಸುವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲೆಯ ವಿವಿಧಡೆಯಂತೆಯೇ ಹೊನ್ನಾವರ ಪಟ್ಟಣ ಹಾಗೂ ಚಂದಾವರ ಭಾಗದಲ್ಲಿ ರ್ಯಾಪಿಡ್ ಎಕ್ಸನ್ ಪೊರ್ಸ ಹಾಗೂ ಕೆ.ಎಸ್.ಆರ್.ಪಿ ಜಂಟಿಯಾಗಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೋಲಿಸ್ ಠಾಣೆಯಿಂದ ಮಾಸ್ತಿಕಟ್ಟಾ, ಬಜಾರ ರಸ್ತೆ, ಹೂವಿನ ಚೌಕದ ಮೂಲಕ ಶರಾವತಿ ವೃತ್ತದವರೆಗೆ ಶಿಸ್ತ್ರಿನಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
ಸಿ.ಪಿ.ಐ ಶ್ರೀಧರ ಎಸ್.ಆರ್, ಅಪರಾಧ ವಿಭಾಗ ಪಿ.ಎಸ್.ಐ ಸಾವಿತ್ರಿ ನಾಯಕ ಮತ್ತು ಪೊಲೀಸ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
Leave a Comment