(ರಾಷ್ಟ್ರದ್ಯಾದಂತಹ ಮಾರ್ಚ ಒಂದರಿಂದ ಏಳು ದಿನಗಳ ಕಾಲ ಜನ ಔಷಧಿ ಕುರಿತು ಜನಜಾಗೃತಿ ಅಭಿಯಾನ)
“ಮಾರ್ಚ ಒಂದರಿಂದ ರಾಷ್ಟ್ರದ್ಯಾದಂತ ಏಳು ದಿನಗಳ ಕಾಲ ಜನಔಷಧಿ ದಿವಸ್ ಆಚರಿಸಲಾಗುತ್ತಿದ್ದು ಅದರಂತೆ ಜಿಲ್ಲೆಯ ಎಲ್ಲ ಜನಔಷಧಿ ಮಳಿಗೆಗಳಲ್ಲಿಯೂ “ಜನಔಷಧಿ ದಿವಸ್” ಆಚರಿಸಲಾಗುತ್ತಿದೆ.
ಜನಸಾಮನ್ಯರಿಗೆ ಜನ ಔಷಧಿ ಇನ್ನು ಹೆಚ್ಚು ಹೆಚ್ಚು ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯ ಮಾರುಕಟ್ಟೆ ಮತ್ತು ವ್ಯಾಪಾರ ವಿಭಾಗದ ಅಸಿಸ್ಟೆಂಟ್ ಮ್ಯಾನೆಜರ್ ಆದ ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ ಹೇಳಿದ್ದರು. ಅವರು ಹೊನ್ನಾವರದಲ್ಲಿ ನಡೆದ ಜನ ಔಷಧಿ ದಿವಸ್ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಸೇರಿದ ಉತ್ತರಕನ್ನಡ ಜಿಲ್ಲೆಯ ಜನ ಔಷಧಿ ಅಂಗಡಿಗಳ ಮಾಲಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ ಜನ ಔಷಧಿ ಬಡ ಜನರ ಪಾಲಿಗೆ ಆಶಾಕಿರಣವಾಗಿದೆ. ನಿರಂತರ ಔಷಧಿ ತೆಗೆದುಕೊಳ್ಳುವವರಿಗೆ ಔಷಧಿ ವೆಚ್ಚವನ್ನು ಸಾಕಷ್ಟು ಉಳಿತಾಯ ಮಾಡುತ್ತಿದೆ.ಜನ ಔಷಧಿಗಳ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ, ತಿಳುವಳಿಕೆ ಇನ್ನಷ್ಟು ನೀಡಬೇಕಿದೆ. ಜನ ಔಷಧಿಗಳ ಬಗ್ಗೆ ಇರುವ ತಪ್ಪು ತಿಳುವಳಿಕೆ ಅಪಪ್ರಚಾರ ಹೊಗಲಾಡಿಸಲು ಪ್ರಯತ್ನಿಸಬೇಕಿದೆ. ಜನ ಔಷಧಿ ಜನ ಸಾಮನ್ಯರಿಗೆ ಮುಟ್ಟಿಸಲು ಅಡೆತಡಗಳನ್ನು ಉಂಟುಮಾಡುತ್ತಿರುವ ವೈದ್ಯ ಲಾಭಿಗಳನ್ನು ಮೀರಿ ಬಡವರಿಗೆ ಅದರ ಪ್ರಯೋಜನ ಮುಟ್ಟಿಸಲು ನಾವೆಲ್ಲ ಸೇರಿ ಪ್ರಯತ್ನಪಡೋಣ. ಈ ನಿಟ್ಟಿನಲ್ಲಿ ಮಾರ್ಚ ಒಂದರಿಂದ ಏಳು ದಿನಗಳವರೆಗೆ ದಿನವೂ ವಿಭಿನ್ನ ಜನಜಾಗೃತಿ ಕಾರ್ಯಕ್ರಮದ ಮೂಲಕ “ಜನ ಔಷಧಿ ದಿವಸ್” ಆಚರಣೆಯನ್ನು ಜಿಲ್ಲೆಯ್ಯಾದಂತ ಪರಿಣಾಮಕಾರಿಯಾಗಿ ಆಚರಿಸಬೇಕು” ಎಂದು ಹೇಳಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಜನ ಔಷಧಿ ಅಂಗಡಿಗಳ ಮಾಲಿಕರು ಜನ ಔಷಧಿ ಬಗ್ಗೆ ಜನಸಾಮನ್ಯರಿಗೆ ನಂಬಿಕೆ ಮೂಡಲು, ಅವರನ್ನು ತಲುಪಲು ಆಗುತ್ತಿರುವ ಅಡೆತಡೆಗಳ ಬಗ್ಗೆ,ವೈದ್ಯಕೀಯ ಕ್ಷೇತ್ರದ ಕೆಲವು ಸ್ವಹಿತಾಸಕ್ತಿಯಿಂದ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿರವರ ಗಮನ ಸೆಳೆದರು. ಮಾರ್ಚ 1 ರಿಂದ ನಡೆಯುವ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಪಾರ್ಮಾಸಿಸ್ಟ ಶ್ರೀಮತಿ ಮಹಾಲಕ್ಷ್ಮೀ ರವರು ನಿರೂಪಿಸಿದರು.
ಮಾರ್ಚ ಒಂದರಿಂದ ಏಳನೆ ದಿನದವರೆಗೆ ಜಿಲ್ಲೆಯಲ್ಲಿ ನಡೆಯುವ ಜನಜಾಗೃತಿ ಜನ ಔಷಧಿ ದಿವಸ್ ಕಾರ್ಯಕ್ರಮಗಳು
ಮಾರ್ಚ 1. ಜನ ಔಷಧಿ ಮಳಿಗೆಗಳಲ್ಲಿ ಉಚಿತ ಬಿಪಿ, ಸುಗರ್ ಪರೀಕ್ಷೆ.
ಮಾರ್ಚ 2. ಗಣ್ಯ ವ್ಯಕ್ತಿಗಳಿಂದ ಜನ ಔಷಧಿ ಕುರಿತು ಚರ್ಚಾ ಕಾರ್ಯಕ್ರಮ
ಮಾರ್ಚ 3. ಆಯ್ದ ಕಾಲೇಜಿನಲ್ಲಿ ಯುವ ವಿದ್ಯಾರ್ಥಿಗಳಿಗೆ ಜನ ಔಷಧಿ ಕುರಿತು ಮಾಹಿತಿ ಕಾರ್ಯಕ್ರಮ
ಮಾರ್ಚ 4. ಅದೇ ಕಾಲೇಜಿನಲ್ಲಿ ಜನ ಔಷಧಿ ಕುರಿತು ಪ್ರಬಂಧ ಸ್ಪರ್ಧೆ
ಮಾರ್ಚ 5. ವೃದ್ದಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಜನ ಔಷಧಿ ಕುರಿತು ಮಾಹಿತಿ ಕಾರ್ಯಕ್ರಮ
ಮಾರ್ಚ 6. ಬೈಕ್ ರ್ಯಾಲಿಯ ಮುಖಾಂತರ ಜನಜಾಗೃತಿ
ಮಾರ್ಚ 7. ಪ್ರಧಾನ ಮಂತ್ರಿ ಮೋದಿಯರಿಂದ ಜನೌಷಧಿ ಕುರಿತು ಜನರನ್ನು ಉದ್ದೇಶಿಸಿ ಮಾತನಾಡುವವರು
Leave a Comment